ದಾವಣಗೆರೆ:
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಜ್ಯ ನೇಕಾರಿಕೆ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭವನ್ನು ಡಿ.10ರಂದು ಸಂಜೆ 5 ಗಂಟೆಗೆ ನಗರದ ವನಿತಾ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಎನ್.ಬಿ.ನಾಗರಾಜ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕೇವಲ ನೇಕಾರರು ಮಾತ್ರ ನೇಯ್ಗೆಯಲ್ಲಿ ತೊಡಗಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಉಣ್ಣೆ ನೇಕಾರರು, ರೇಷ್ಮೆ ನೇಕಾರರು, ನೂಲು ಹೆಣೆದು ಜೀವನ ಮಾಡುವವರು ಕೈಮಗ್ಗ, ವಿದ್ಯುತ್ ಮಗ್ಗ, ಗುಂಡಿ ಮಗ್ಗ, ಚರಕದ ಮೂಲಕ ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸೇರಿದಂತೆ ಹಲವು ಜನಾಂಗದವರು ನೇಕಾರಿಕೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ನೂತನ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ನೇಕಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರಿಗೆ ಸರ್ಕಾರದ ಸೌಲಭ್ಯ ಕೊಡಿಸುವುದು ಸಂಘದ ಮೂಲ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ಗೌರವಾಧ್ಯಕ್ಷರಾಗಿ ಎಸ್.ಕೆ.ಬಸವರಾಜ್, ಅಧ್ಯಕ್ಷರಾಗಿ ಎಂ.ಶ್ರೀಕಾಂತ್, ಉಪಾಧ್ಯಕ್ಷರುಗಳನ್ನಾಗಿ ರವಿ ಬೇತೂರು, ಕೆ.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಬಿ.ನಾಗರಾಜ್, ಕಾರ್ಯದರ್ಶಿಯಾಗಿ ಕಿರಣ್‍ಕುಮಾರ್.ಪಿ, ಖಜಾಂಚಿಯಾಗಿ ಮಾರುತಿ ಜಿ.ಹೆಚ್, ಸಹ ಕಾರ್ಯದರ್ಶಿಗಳಾಗಿ ವೆಂಕಟೇಶ್.ಜಿ, ಶಾಂತಕುಮಾರ್ ಹೆಚ್.ಜೆ, ಸಂಘಟನಾ ಕಾರ್ಯದರ್ಶಿಯಾಗಿ ಶರೀಫ್ ಸಾಬ್.ಹೆಚ್, ಯೋಜನಾ ನಿರ್ದೇಶಕರಾಗಿ ಟಿ.ಆರ್.ಚನ್ನಕೇಶವ, ಸಂಚಾಲಕರಾಗಿ ಕೃಷ್ಣಪ್ಪ.ಹೆಚ್, ಕಾರ್ಯಕಾರಿ ಸಮಿತಿ ನಿರ್ದೇಶಕರುಗಳಾಗಿ ಹೆಚ್.ತಿಪ್ಪೇಸ್ವಾಮಿ, ರಹಮತ್‍ವುಲ್ಲಾ ಸಿ.ಪಿ, ಬಿ.ಪ್ರಭು, ಪ್ರಕಾಶ್.ಹೆಚ್, ಹನುಮಂತಪ್ಪ.ಆರ್, ಗಿರಿಧರ್.ಹೆಚ್, ಟಿ.ಹನುಮಂತರಾಜ್, ನಾಗರಾಜ್ ಪಿ.ಎಸ್, ಮಲ್ಲಿಕಾರ್ಜುನ್.ಡಿ, ಸಿ.ಎ.ಕುಬೇರಪ್ಪ, ಸರಸ್ವತಿ ಸಿ.ಎ, ಎಸ್.ವಿನೋದಕುಮಾರ್ ಅವರುಗಳನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಎಂ.ಶ್ರೀಕಾಂತ್, ರವಿ ಬೇತೂರ್, ಕೆ.ಹನುಮಂತಪ್ಪ, ಕಿರಣಕುಮಾರ್.ಪಿ, ಮಾರುತಿ ಜಿ.ಹೆಚ್, ಶರೀಫ್ ಸಾಬ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ