ಹುಳಿಯಾರು
ಶಿಕ್ಷಣದಿಂದ ಮಹಿಳಾ ಸಬಲೀಕರಣ ಸಾಧ್ಯವಿದ್ದು ಎಲ್ಲರೂ ಉನ್ನತ ವ್ಯಾಸಂಗ ಗುರಿಯಾಗಿಟ್ಟು ಓದಬೇಕು ಎಂದು ತಹಶೀಲ್ದಾರ್ ತೇಜಸ್ವಿನಿ ಕಿವಿ ಮಾತು ಹೇಳಿದರು.ಹಂದನೆಕೆರೆ ಹೋಬಳಿಯ ಗೂಬೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿನ ಕೆಲ ವರ್ಷಗಳಲ್ಲಿ ಸ್ತ್ರೀ-ಪುರುಷ ಸಮಾನತೆ ಸಾಧ್ಯವಾಗುತ್ತಿರುವುದಕ್ಕೆ ಖುಷಿಯಾಗುತ್ತದೆ. ರಾಜಕೀಯ, ಶಿಕ್ಷಣ, ಸಿನಿಮಾ, ಉದ್ಯೋಗ ಹೀಗೆ ಎಲ್ಲ ರಂಗದಲ್ಲೂ ಹೆಣ್ಣು ಮೊದಲಿಗಳಾಗುತ್ತಿದ್ದಾಳೆ ಎಂದರಲ್ಲದೆ ಮಹಿಳಾ ದಿನಾಚರಣೆ ಮಹಿಳಾ ಸಬಲೀಕರಣದ ಬಗ್ಗೆ, ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆದು ಪರಿಹಾರದ ಮಾರ್ಗೋಪಾಯ ಕಂಡುಕೊಳ್ಳುವ ವೇದಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಪಿಎಸ್‍ಐ ಶಿವರಾಜ್, ಕಂದಾಯ ಇಲಾಖೆಯ ಕುಲಕರ್ಣಿ, ಪ್ರಸನ್ನಕುಮಾರ್, ಶಿಕ್ಷಕರಾದ ರವೀಂದ್ರನಾಥ್, ನಾಗರಾಜ್, ಚಂದ್ರು ಮತ್ತಿತರರು ಇದ್ದರು.