ಬೆಂಗಳೂರು
ಶ್ರೀರಾಮಸೇನೆಯ ಮಹಿಳಾ ರಾಜ್ಯಾಧ್ಯಕ್ಷೆ ಮಹಿಳಾ ರೌಡಿ ಯಶಸ್ವಿನಿ ಏಳೆಂಟು ಮಂದಿ ಜೊತೆ ಸೇರಿ ಲಲಿತಾ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಹಲೆಯಿಂದ ಗಾಯಗೊಂಡಿರುವ ಲಲಿತಾ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.ಗಂಗಮ್ಮನಗುಡಿ ನೀಲಗಿರಿ ತೊಪ್ಪಿನಲ್ಲಿ ಈ ಘಟನೆ ನಡೆದಿದೆ. ಲಲಿತಾ ಅವರು ದಾರಿಯಲ್ಲಿ ಹೋಗುವಾಗ ಮಾರ್ಗ ಮಧ್ಯೆ ಅಡ್ಡಗಟ್ಟಿ ಯಶಸ್ವಿನಿ ಹಾಗೂ 8 ಜನ ಮಹಿಳೆಯರು ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಪರಿಣಾಮ ಗಾಯಗೊಂಡಿರುವ ಲಲಿತಾ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.
ಯಶಸ್ವಿನಿ ವಿರುದ್ಧ ಲಲಿತಾ ದೂರು ನೀಡಿದ್ದು, ಗಂಗಮ್ಮನಗುಡಿ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ಶುಕ್ರವಾರ ನ್ಯಾಯಾಲಯದಲ್ಲಿ ತೀರ್ಪು ಬರೋದಿತ್ತು. ನ್ಯಾಯಾಲಯಕ್ಕೆ ಲಲಿತಾ ಹಾಜರಾಗಬಾರದೆಂದು ಲಲಿತಾರ ಮೇಲೆ ಯಶಸ್ವಿನಿ & ಟೀಂ ಹಲ್ಲೆ ನಡೆಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








