ಅಂದ ಬಾಲಕರ ಶಿಕ್ಷಣ ಹಾಗೂ ಬದುಕು ರೂಪಿಸಲು ರಾಜ್ಯದೆಲ್ಲೆಡೆ ಸಂಗೀತ ಕಾರ್ಯಕ್ರಮ

ಚಳ್ಳಕೆರೆ

     ಕಳೆದ ಹಲವಾರು ವರ್ಷಗಳಿಂದ ಯಾವುದೇ ರೀತಿಯ ಅಬ್ಬರ ಪ್ರಚಾರವಿಲ್ಲದೆ ಕೇವಲ ಅಂದ ಮಕ್ಕಳನ್ನು ಪೋಷಿಸುವ ಮತ್ತು ಅವರಿಗೆ ಶಿಕ್ಷಣ ನೀಡುವ ದೃಷ್ಠಿಯಲ್ಲಿ ಬೆಂಗಳೂರಿನ ಆಗ್ರಹಾರ ದಾಸರಹಳ್ಳಿಯ ವಿಷ್ಣು ಮೆಲೋಡಿಸ್ ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು ರಸ್ತೆ ಬದಿಯಲ್ಲಿ ಇಂಪಾದ ಸಂಗೀತ ಹಾಡುವ ಮೂಲಕ ಜನರ ಗಮನ ಸೆಳೆಯುತ್ತಿದೆ.

     ಶನಿವಾರ ಸಂಜೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಅಂದ ಕಲಾವಿರು ಇಂಪಾಗಿ ಹಾಡುತ್ತಿದ್ದ ಕನ್ನಡ, ತೆಲುಗು ಮತ್ತು ಹಿಂದಿ ಚಿತ್ರಗೀತೆಗಳನ್ನು ಕೇಳಿದ ಸಾರ್ವಜನಿಕರು ಗುಂಪು, ಗುಂಪಾಗಿ ನಿಂತು ಸಂಗೀತದ ಸವಿಯನ್ನು ಸವಿಯುತ್ತಿದ್ದರು. ಅಂದರು ಹಾಡುತ್ತಿದ್ದ ಅನೇಕ ಜನಪ್ರಿಯ ಗೀತೆಗಳು ಕೇಳುಗರಿಗೆ ಸೋಜಿಗವನ್ನುಂಟು ಮಾಡಿದ್ದವು. ಕಾರಣ ಯಾವುದೇ ಆಧುನಿಕ ಉಪಕರಣಗಳ ಸಹಾಯವಿಲ್ಲದೆ ಸುಶ್ರವವಾಗಿ ಹಾಡುವ ಮೂಲಕ ಜನರನ್ನು ಕಟ್ಟಿಹಾಕಿತ್ತು ಈ ಅಂದರ ಸಂಗೀತದ ಶಕ್ತಿ. ಯಾವುದೇ ಪ್ರಚಾರವಿಲ್ಲದೆ ಕೇವಲ ಕೆಲವೇ ಕೆಲವು ನಿಮಿಷಗಳಲ್ಲಿ ನೂರಾರು ಜನರು ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇವರಲ್ಲಿ ಅಡಗಿದ್ದ ಸಂಗೀತ ಮಾದುರ್ಯಕ್ಕೆ ಮಾರೂ ಹೋದರು. ಪ್ರತಿ ಹಾಡಿಗೂ ಸಂಗೀತಾಸಕ್ತರ ಸಂಖ್ಯೆ ಬೆಳೆಯುತ್ತಾ ಹೋಯಿತು. ಜನರ ತುಡಿತವನ್ನು ಕಂಡು ಹಾಡು ಹಾಡುತ್ತಿದ್ದವರ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತು.

     ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ವಿಷ್ಣು ಮೆಲೋಡಿಸ್‍ನ ಮುಖ್ಯಸ್ಥ ಸುದರ್ಶನ್, ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯ ಅಗ್ರಹಾರ ದಾಸರಹಳ್ಳಿಯಲ್ಲಿ ವಿಷ್ಣು ಮೆಲೋಡಿಸ್ ಮೂಲಕ ಕಳೆದ ನಾಲ್ಕು ವರ್ಷಗಳಿಂದ ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು ಕನ್ನಡ ಭಾಷೆಯೂ ಸೇರಿದಂತೆ ಎಲ್ಲಾ ಭಾಷೆಗಳ ಚಲನಚಿತ್ರಗೀತೆ ಹಾಗೂ ದೇಶ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಜನರಿಗೆ ಸಂಗೀತದ ರಸದೌತಣವನ್ನು ನೀಡಲಾಗುತ್ತದೆ. ಜನರು ನೀಡುವ ದನ ಸಹಾಯದಿಂದ ನಮ್ಮಲ್ಲಿರು ಸುಮಾರು 20ಕ್ಕೂ ಹೆಚ್ಚು ಅಂದ ಬಾಲಕರಿಗೆ ಶಿಕ್ಷಣವನ್ನು ನೀಡುವ ಜೊತೆಗೆ ಸಂಗೀತವನ್ನು ಕಲಿಸಲಾಗುತ್ತಿದೆ. ಅಂದ ಮಕ್ಕಳು ತಮ್ಮ ಬದುಕನ್ನು ರೂಪಿಸಿಕೊಳ್ಳುವ ದೃಷ್ಠಿಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

      ವಿಷ್ಣು ಮೆಲೋಡಿಸ್‍ನ ಶ್ರೀಧರ್, ರಾಕೇಶ್, ಈರಣ್ಣ ಮುಂತಾದವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ವಿಶೇಷವಾಗಿ ಹಳೆಯ ಚಲನಚಿತ್ರಗೀತೆಗಳಿಗೆ ಹೆಚ್ಚು ಬೇಡಿಕೆ ಇದ್ದು, ಅವುಗಳನ್ನು ಸಹ ಹಾಡಲಾಗುತ್ತಿದೆ. ಸಂಗೀತಾಭಿಮಾನಿಗಳ ಒತ್ತಾಯದ ಮೇರೆಗೆ ಹಿಂದಿ ಚಿತ್ರರಂಗದ ಶ್ರೇಷ್ಠ ಗಾಯಕರಾದ ಮುಖೇಶ್, ರಹಮತ್ ಮುಂತಾದವರು ಗೀತೆಗಳನ್ನು ಸಹ ಹಾಡಲಾಗುತ್ತಿದೆ. ದಯಮಾಡಿ ಅಂದ ಕಲಾವಿದರ ಸಹಾಯಾರ್ಥವಾಗಿ ನಡೆಸುವ ಈ ಕಾರ್ಯಕ್ರಮಕ್ಕೆ ಹೆಚ್ಚು ಪ್ರೋತ್ಸಾಹ ಹಾಗೂ ಸಹಕಾರ ನೀಡುವಂತೆ ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link