ಚಳ್ಳಕೆರೆ
ತಾಲ್ಲೂಕಿನ ಗೊರ್ಲತ್ತು ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ಮೋಟಾರ್ ಬೈಕ್ ಪಲ್ಟಿಯಾಗಿ ಬೈಕ್ ಸವಾರ ಅರ್ಥಶಾಸ್ತ್ರ ಉಪನ್ಯಾಸಕ ಆರ್.ರಂಗಸ್ವಾಮಿ(45) ಮೃತಪಟ್ಟಿರುತ್ತಾರೆ.
ಬೆಳಗೆರೆ ಗ್ರಾಮದ ಬಿ.ಸೀತಾರಾಮಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕಳೆದ 2000 ದಿಂದ ಕಾರ್ಯನಿರ್ವಹಿಸುತ್ತಿದ್ದ ಇವರು ಪ್ರತಿನಿತ್ಯ ಕಾಲೇಜಿಗೆ ತಮ್ಮ ಹುಟ್ಟೂರು ಬಿದರೇ ಕರೆಯಿಂದ ಆಗಮಿಸುತ್ತಿದ್ದರು. ಶುಕ್ರವಾರ ಕಾಲೇಜಿಗೆ ಆಗಮಿಸಿದ ಇವರು ಅನಾರೋಗ್ಯ ನಿಮಿತ್ತ ಪ್ರಾಂಶುಪಾಲರ ಅನುಮತಿ ಪಡೆದು ಗ್ರಾಮದ ಕರೆ ಬೈಕ್‍ನಲ್ಲಿ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್ ಪಲ್ಟಿಯಾದ ಕೂಡಲೇ ಕೆಳಗೆ ಬಿದ್ದ ಇವರನ್ನು ಸುತ್ತಮುತ್ತಲ ಜನರು ಉಪಚರಿಸಿ ಅಂಬ್ಯುಲೆನ್ಸ್ ವಾಹನದಲ್ಲಿ ಚಳ್ಳಕೆರೆ ಆಸ್ಪತ್ರೆಗೆ ಕರೆತಂದಿರುತ್ತಾರೆ. ಆದರೆ, ಚಿಕಿತ್ಸೆ ನೀಡುವ ಮುನ್ನವೇ ಇವರು ಮೃತಪಟ್ಟಿರುತ್ತಾರೆ. ಮೃತರು ಪತ್ನಿ ಜ್ಯೋತಿ, ಪುತ್ರರಾದ ಯಶಸ್ಸು, ಶ್ರೇಯಸ್ಸು ಹಾಗೂ ಅಪಾರ ಬಂಧುಬಳಗವನ್ನು ಅಗಲಿದಿದ್ದಾರೆ.
ಶಾಸಕರ ಸಂತಾಪ :- ಸುದ್ದಿ ತಿಳಿದ ಕೂಡಲೇ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಶವಗಾರಕ್ಕೆ ಭೇಟಿ ನೀಡಿದ್ದ ಶಾಸಕ ಟಿ.ರಘುಮೂರ್ತಿ ಘಟನೆಗೆ ದುಖ ವ್ಯಕ್ತ ಪಡಿಸಿದ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಮೃತನ ಪತ್ನಿ ಜ್ಯೋತಿಯವರಿಗೆ ಅನುಕಂಪದ ಆಧಾರದಲ್ಲಿ ಇಲಾಖೆಯೊಂದಿಗೆ ಚರ್ಚಿಸಿ ಅದೇ ಸಂಸ್ಥೆಯಲ್ಲಿ ಸೂಕ್ತ ಕೆಲಸ ಕೊಡಿಸುವುದಾಗಿ ತಿಳಿಸಿದರು. ಮಾಜಿ ಶಾಸಕ ಡಿ.ಸುಧಾಕರ್, ಅರ್ಥಶಾಸ್ತ್ರ ಜಿಲ್ಲಾ ವೇದಿಕೆ, ಜಿಲ್ಲಾ ಉಪನ್ಯಾಸಕರ ಸಂಘದ ಅದ್ಯಕ್ಷ ಎಸ್.ಲಕ್ಷ್ಮಣ್, ಬಿ.ಸೀತಾರಾಮಶಾಸ್ತ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ವರ್ಗ, ಸಿಬ್ಬಂದಿ ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದ್ಧಾರೆ.