ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ : ಸಿದ್ದರಾಮಯ್ಯ

ಬೆಂಗಳೂರು:

     ಗೌರವ ಧನ ಹೆಚ್ಚಳ ಸೇರಿದಂತೆ ಆಶಾಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವಂತೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.

     ಕಳೆದ ಏಳು ದಿನಗಳಿಂದ ಸೇವೆ ಸ್ಥಗಿತಗೊಳಿಸಿ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ ಈಡೇರಿಸಬೇಕು . ಜನ ಸಂಕಷ್ಟದಲ್ಲಿರುವಾಗ ಕಾರ್ಯಕರ್ತೆಯರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.

     ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣ ಲೆಕ್ಕಿಸದೇ ಕೋವಿಡ್ -19 ವಿರುದ್ದ ಹೋರಾಟ ನಡೆಸುತ್ತಿದ್ದಾರೆ . ಇವರಲ್ಲಿ ಅನೇಕರಿಗೆ ಕೋವಿಡ್ ಸೋಂಕು ತಗುಲಿದೆ. ಆಶಾ ಕಾರ್ಯಕರ್ತೆಯರನ್ನು ಕೊರೋನಾ ವಾರಿಯರ್ಸ್ ಎಂದು ಸರ್ಕಾರವೇ ಕರೆದಿದೆ. ಪ್ರಧಾನಿ ನರೇಂದ್ರ ಮೋದಿ ಇವರಿಗೆ ಚಪ್ಪಾಳೆ ತಟ್ಟಿ ಹೂಮಳೆಗೆರೆದಿದ್ದಾರೆ. ಆದರೆ ಇವರಿಗೆ ನೀಡುತ್ತಿರುವ ಮಾಸಿಕ ವೇತನ ಕೇವಲ ರೂ .4,000 ರಿಂದ 6,000 ಸಾವಿರ ರೂ ಮಾತ್ರ. ರಾಜ್ಯ ಸರ್ಕಾರ ರೂ .8,000 ರಿಂದ .9,000 ರೂ ಗೆ ಹಚ್ಚಿಸುವುದಾಗಿ ಬಜೆಟ್ ಘೋಷಿಸಿತ್ತು . ಆದರೆ ಇದುವರೆವಿಗೂ ಕೂಡ 1 ರೂಪಾಯಿ ಕೂಡ ಹೆಚ್ಚಿಸಿಲ್ಲ ಎಂದಿದ್ದಾರೆ. 

     ಕಳೆದ ಏಪ್ರಿಲ್ ತಿಂಗಳಿನಲ್ಲಿ ಸರ್ಕಾರ ಒಂದು ಬಾರಿ ವಿಶೇಷ ಪ್ಯಾಕೇಜ್ ಎಂದು ರಾಜ್ಯದ ಸಹಕಾರ ಇಲಾಖೆಯಿಂದ ರೂ. 3,000ಗಳನ್ನು ನೀಡುವುದಾಗಿ ಘೋಷಣೆ ಮಾಡಿತ್ತು . ಇದು ಶೇ .50 % ರಷ್ಟು ಅಶಾ ಕಾರ್ಯಕರ್ತೆರಿಗೂ ತಲುಪಿಲ್ಲ . ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಕೂಡ ಸರಳವಾಗಿದೆ . ಮಾಸಿಕ ರೂ .12000 ಗೌರವಧನ ಖಾತರಿಪಡಿಸಬೇಕು . ಕೋವಿಡ್ -19 ವಿರುದ್ದ ಹೋರಾಟಕ್ಕೆ ಅಗತ್ಯವಿರುವಷ್ಟು ಸಂರಕ್ಷಣಾ ಸಾಮಗ್ರಿಗಳನ್ನು ನೀಡಬೇಕು ಮತ್ತು ಕೋವಿಡ್ -19 ಗೆ ಸೋಂಕಿಗೆ ಒಳಗಾದ ಅಶಾಕಾರ್ಯಕರ್ತೆರಿಗೆ ಪರಿಹಾರ, ಸಂಪೂರ್ಣ ಚಿಕಿತ್ಸೆ ನೀಡಬೇಕು . ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಅತ್ಯಂತ ಸಣ್ಣ ಮಟ್ಟದವಾಗಿದೆ . ಆದ್ದರಿಂದ ಸರ್ಕಾರ ಸರಳವಾದ ಈ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link