ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಸಾಲ ಮನ್ನ ಮಾಡಬೇಕು : ಭೂತಯ್ಯ

ಚಳ್ಳಕೆರೆ

         ತಾಲ್ಲೂಕಿನಾದ್ಯಂತ ಕಳೆದ 15 ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ಕಂಗಾಲಾಗಿರುವ ರೈತರು ರಾಜ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡುವರು ಎಂಬ ಆಶಾಭಾವನೆಯಿಂದ ಕಾದುಕುಳಿತಿದ್ದಾರೆ. ಆದರೆ, ರೈತರ ಸಾಲ ಮನ್ನಾ ಕೇವಲ ಪತ್ರಗಳಲ್ಲಿ ಜಾರಿ ಇದೆ, ಬ್ಯಾಂಕ್‍ಗಳಲ್ಲಿ ಇನ್ನೂ ಬಂದಿಲ್ಲ, ಈ ಬಗ್ಗೆ ಪ್ರತಿನಿತ್ಯ ಪುಟ್ಟಗಟ್ಟಲೆ ಪತ್ರಿಕೆಗಳ ಜಾಹೀರಾತು ಮೂಲಕ ಪ್ರಚಾರ ಪಡೆಯುವ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆಗ್ರಹ ಪಡಿಸಿದ್ದಾರೆ.

       ಅವರು, ಸೋಮವಾರ ಇಲ್ಲಿನ ರೈತ ಸಂಘದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಉದ್ಯೋಗ ಖಾತರಿ ಕಾಮಗಾರಿಯಲ್ಲಿ ಗ್ರಾಮಗಳಲ್ಲಿ ಪಂಚಾಯಿತಿ ಸದಸ್ಯರು ಕೂಲಿಕಾರ್ಮಿಕರಾಗಿದ್ದು, ಇಒ, ಪಿಡಿಒಗಳು ಗುಮಸ್ತರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

       ನಿಜವಾದ ಬಡ ಕೂಲಿಕಾರ್ಮಿಕರು ಈ ಯೋಜನೆಯಿಂದ ಹೊರಗಿದ್ದಾರೆಂದು ಆರೋಪಿಸಿದರು. ಕೇವಲ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತಿದೆ. ಆಂದ್ರ ಮಾದರಿಯಲ್ಲಿ ಬೆಳೆ ಪರಿಹಾರ ನೀಡಬೇಕು, ಪ್ರತಿ ಎಕರೆಗೆ 20 ಸಾವಿರ ಬೆಳೆ ನಷ್ಟ ಪರಿಹಾರ ಖಾತೆಗೆ ಜಮಾ ಮಾಡಬೇಕು, ಉದ್ಯೋಗ ಖಾತರಿ ಯೋಜನೆಯಲ್ಲಿ ಎಲ್ಲರಿಗೂ ಉದ್ಯೋಗ ನೀಡಬೇಕು, ತಾಲ್ಲೂಕಿನಾದ್ಯಂತ ಸಾವಿರಾರು ರೈತರು ಬೆಳೆ ವಿಮೆ, ನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಜಿಲ್ಲಾ, ತಾಲ್ಲೂಕು ಆಡಳಿತವಾಗಲಿ ಗಮನಹರಿಸಿಲ್ಲ. ಆದರೆ, ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಆಯವ್ಯಯದಲ್ಲಿ ನೀಡಿದ ಭರವಸೆಯಂತೆ ತಾಲ್ಲೂಕಿನಾದ್ಯಂತ ಕೆಲವು ರೈತರ ಖಾತೆಗೆ ಈಗಾಗಲೇ 2 ಸಾವಿರ ಹಣ ಜಮಾವಾಗಿದೆ.

        ರಾಜ್ಯದ ಮುಖ್ಯಮಂತ್ರಿಗಳು ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ರೈತ ಸಂಕಷ್ಟಗಳ ಬಗ್ಗೆ ಅರಿವಿದ್ದಲ್ಲಿ ಕೂಡಲೇ ರೈತರ ನೆರವಿಗೆ ದಾವಿಸಬೇಕು. ಮಾರ್ಚ್ 2ರಂದು ಚಳ್ಳಕೆರೆ ಆಗಮಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಪತ್ರಿಕೆಗಳ ಮೂಲಕ ಸುದ್ದಿ ನೀಡಿದ್ದು ಅಷ್ಟರೊಳಗೆ ಮುಖ್ಯಮಂತ್ರಿಗಳು ರೈತರ ಸಾಲ ಮನ್ನಾ ಬಗ್ಗೆ ಖಚಿತ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಮುಖ್ಯಮಂತ್ರಿಗಳ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಅವರು ನೀಡಿದ್ಧಾರೆ. ರೈತರಾದ ಆರ್.ಎ.ದಯಾನಂದಮೂರ್ತಿ, ಎಸ್.ತಿಪ್ಪೇಸ್ವಾಮಿ, ಟಿ.ಚಂದ್ರಣ್ಣ, ಬಿ.ಶ್ರೀನಿವಾಸ್‍ರೆಡ್ಡಿ, ಡಿ.ಟಿ.ಮಂಜುನಾಥ, ಜಿ.ಎಚ್.ತಿಪ್ಪೇಸ್ವಾಮಿ, ತಿಪ್ಪಯ್ಯ, ಕ್ಯಾತಣ್ಣ, ಕೆ.ಆರ್.ತಿಮ್ಮಾರೆಡ್ಡಿ, ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link