ಆರ್‍ಜಿ ಹಳ್ಳಿಯಲ್ಲಿ ಇಂದಿನಿಂದ ನಾಟಕೋತ್ಸವ

ದಾವಣಗೆರೆ:

           ತಾಲೂಕಿನ ರಾಮಗೊಂಡನಹಳ್ಳಿಯ ಬಯಲು ರಂಗಮಂದಿರದಲ್ಲಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಶ್ರೀಶಿವಕುಮಾರ ಕಲಾ ಸಂಘದ ವತಿಯಿಂದ ಶಿವ ಸಂಚಾರ ತಂಡದಿಂದ “ಸ್ಥಾವರಕ್ಕಳಿವುಂಟು” ಘೋಷಣೆ ಅಡಿಯಲ್ಲಿ ಇಂದಿನಿಂದ (ಡಿ.12ರಿಂದ) ನಾಟಕೋತ್ಸವ ಏರ್ಪಡಿಸಲಾಗಿದೆ.

         ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಗೊಂಡನಹಳ್ಳಿ ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಇಂದು ಸಂಜೆ 6 ಗಂಟೆಗೆ ಅತ್ತಿಗೆರೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿ.ಪಂ. ಸದಸ್ಯೆ ಶೈಲಜ ಬಸವರಾಜ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವ್ಯವಸಾಯಗಾರರ ಪರಿವರ್ತನ ಕೈಗಾರಿಕಾ ಮತ್ತು ವ್ಯವಹಾರೋದ್ಯಮ ಸಹಕಾರ ಸಂಘದ ಮಾಜಿ ಅಧ್ಯಕ್ಷ ಆರ್.ಜಿ.ಶಿವನಗೌಡರು, ಗ್ರಾ.ಪಂ. ಸದಸ್ಯರುಗಳಾದ ಗಂಗಮ್ಮ ಷಣ್ಮುಖಪ್ಪ ಬಿ.ಹೆಚ್. ಹರೀಶ್ ಹೆಚ್ ಭಾಗವಹಿಸಲಿದ್ದಾರೆ. ನಂತರ ಹನುಮಂತ ಹಾಲಿಗೇರಿ ರಚಿಸಿರುವ, ಮಾಲತೇಶ ರಾ. ಬಡಿಗೇರ್ ನಿರ್ದೇಶನದ ಊರು ಸುಟ್ಟರೂ ಹನುಮಪ್ಪ ಹೊರಗ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

        ಡಿ.13ರಂದು ಸಂಜೆ 6 ಗಂಟೆಗೆ ತಾ.ಪಂ. ಉಪಾಧ್ಯಕ್ಷ ಹೆಚ್.ಆರ್.ಮರುಳಸಿದ್ದಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರುಣ ಜೀವಾ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಶಿವನಕೆರೆ ಬಸವಲಿಂಗಪ್ಪ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಬಿ.ಶೇಖರಪ್ಪ ದ್ಯಾಮೇನಹಳ್ಳಿ, ಗ್ರಾ.ಪಂ. ಸದಸ್ಯರುಗಳಾದ ಎ.ಕೆ.ಶೇಖರಪ್ಪ, ಲೀಲಾ ಹೆಚ್.ಬಿ. ಮರುಳಸಿದ್ದಪ್ಪ, ಶಾರದ ಸಿ.ಡಿ. ಮಹೇಂದ್ರ ಮತ್ತಿತರರು ಭಾಗವಹಿಸುವರು. ವೇದಿಕೆ ಕಾರ್ಯಕ್ರಮದ ನಂತರದಲ್ಲಿ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿರುವ “ಗುರುಮಾತೆ ಅಕ್ಕ ನಾಗಲಾಂಬಿಕೆ” ನಾಟಕವನ್ನು ಸಿ.ಬಸವಲಿಂಗಯ್ಯ ನಿರ್ದೇಶನದಲ್ಲಿ ಶಿವ ಸಂಚಾರ ತಂಡದ ಕಲಾವಿದರು ಪ್ರದರ್ಶಿಸಲಿದ್ದಾರೆಂದು ಹೇಳಿದರು.

        ಡಿ.14ರಂದು ಸಂಜೆ 6 ಗಂಟೆಗೆ ಸಾಣೇಹಳ್ಳಿ ಶಾಖಾ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯುವ  ಸಮಾರೋಪ ಸಮಾಂಭದಲ್ಲಿ ರಂಗ ಸಮಾಜದ ಸದಸ್ಯ ಶ್ರೀಮಲ್ಲಿಕಾರ್ಜುನ ಕಡಕೋಳ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್, ಎಪಿಎಂಸಿ ಸದಸ್ಯ ಕೆ.ಪಿ.ಮಲ್ಲಿಕಾರ್ಜುನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಜೆ ಜ.ಹೊ.ನಾರಾಯಣ ಸ್ವಾಮಿ ರಚಿಸಿರುವ “ನರಬಲಿ” ನಾಟಕ ಸವಿತಾ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಹೆಚ್.ಆರ್.ಮರುಳಸಿದ್ದಪ್ಪ, ಆರ್.ಜಿ.ಕುಬೇಂದ್ರಪ್ಪ, ಎಂ.ಆರ್.ರಮೇಶ್, ಸುರೇಂದ್ರ ಜಿ.ಎಸ್, ಆರ್.ಜಿ.ಪ್ರವೀಣ್, ಎನ್.ಎಸ್.ರೋಹಿತ್, ಆರ್.ಜಿ.ಹಳ್ಳಿ ರಾಜಶೇಖರ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link