ನಮೋ ವಿರುದ್ಧ ಪ್ರತಿಭಟನೆಗೆ ಮುಂದಾದ ರೈತರ ಬಂಧನ

ಹುಳಿಯಾರು:

     ಎರಡನೇ ನೇ ಹಂತದ ಕೃಷಿ ಸಮ್ಮಾನ್ ಯೋಜನೆಯ ಉದ್ಘಾಟನೆ ಆಗಮಿಸಲಿರುವ ಪ್ರಧಾನಿ ಮೋದಿಯ ವಿರುದ್ಧ ಪ್ರತಿಭಟನೆ ಮಾಡಲು ತೆರಳಲು ಮುಂದಾದ ರೈತರನ್ನು ಹುಳಿಯಾರಿನಲ್ಲಿ ಪೊಲೀಸರು ಬಂಧಿಸಿದ್ದಾರೆ . ಡಾ.ಸ್ವಾಮಿ ನಾಥನ್ ವರದಿ ಜಾರಿಗೆ ನಿರ್ಲಕ್ಷ್ಯ, ಹೊರ ದೇಶದಿಂದ ಕೊಬ್ಬರಿ, ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಹಾಗೂ ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡದೆ ಕಡೆಗಣಿಸಿರುವುದು ಸೇರಿದಂತೆ ಪ್ರಧಾನಿಯು ರೈತ ವಿರೋಧಿ ಧೋರಣೆ ತಾಳಿದ್ದರೆಂದು ಆರೋಪಿಸಿ ಮೋದಿ ವಿರುಧ್ಧ ಕಪ್ಪು ಬಾವುಟ ಪ್ರದರ್ಶನ ಕರೆ ನೀಡಿದ್ದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಕರೆ ಬೆಂಬಲಿಸಿ ಹೊರಟ ರೈತರನ್ನು ಹುಳಿಯಾರಿನಲ್ಲಿ ಬಂಧಿಸಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

     ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಅವರ ನೇತೃತ್ವದಲ್ಲಿ 25 ಕ್ಕೂ ಹೆಚ್ಚು ರೈತರು ಮುಂಜಾನೆ ತುಮಕೂರಿಗೆ ಹೊರಟಿದ್ದರು. ಈ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಂಧಿಸಿದರು. ಅಲ್ಲದೆ ಇದೇ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರತಿಭಟನೆ ಬೆಂಬಲಿಸಿ ಪ್ರತಿಭಟನೆಗೆ ಹೊರಟ ಹೊಸಹಳ್ಳಿ ಚಂದ್ರಣ್ಣ ಬಣದ ರೈತರನ್ನೂ ಸಹ ಬಂಧಿಸಿ ಎರಡೂ ಬಣದ ರೈತರನ್ನೂ ಒಂದೇ ಖಾಸಗಿ ಬಸ್‍ನಲ್ಲಿ ಹಂದನಕೆರೆ ಪೊಲೀಸ್ ಸ್ಟೇಷನ್‍ಗೆ ಕರೆದೊಯ್ದರು.

    ಬಂಧನಕ್ಕೂ ಮುನ್ನ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರೈತ ವಿರೋಧಿ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ ಮಾಜಿ ಪ್ರಧಾನಿ ವಾಜಪೇಯಿ ಅವರ ನದಿ ಜೋಡಣೆ ಕನಸನ್ನು ನನಸು ಮಾಡಿ ಬರ ಪೀಡಿತ ಪ್ರದೇಶಕ್ಕೂ ನದಿ ನೀರು ಹರಿಸಬೇಕು. ಸಮರ್ಪಕ ವಿದ್ಯುತ್ ನೀಡಬೇಕು, ರೈತಸ ಸಂಪೂರ್ಣ ಸಾಲ ಮನ್ನ ಮಾಡಬೇಕು, ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು, ರೈತರ ಭೂಮಿಯನ್ನು ಸ್ವಾಧೀನ ಪಡೆದು ಕಾರ್ಖಾನೆಗಳಿಗೆ ಹಂಚಬಾರದು ಎಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಹೊಸಹಳ್ಳಿ ಚಂದ್ರಣ್ಣ, ತಿಮ್ಮನಹಳ್ಳಿ ಲೋಕೇಶ್, ಕಾಡಿನರಾಜ ನಾಗರಾಜು, ದಬ್ಬೇಘಟ್ಟ ಜಗಧೀಶ್, ತಮ್ಮಡಿಹಳ್ಳಿ ಮಲ್ಲಿಕಾರ್ಜುನ್, ಹುಳಿಯಾರು ದಾಸಪ್ಪ, ಕರಿಯಪ್ಪ, ಬೀರಪ್ಪ, ಪಾತ್ರೆ ಸತೀಶ್, ಕಂಪನಹಳ್ಳಿ ಮರುಳಪ್ಪ, ಸಜ್ಜಾದ್ ಸಾಬ್ ಮತ್ತಿತರ ರೈತರು ಬಂಧನಕ್ಕೊಳಗಾದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link