ಚಲನಚಿತ್ರ ಹಲವು ಮಾಧ್ಯಮಗಳ ನೆರವಿನಿಂದ ರೂಪಗೊಳ್ಳುವ ವಿಶಿಷ್ಠವಾದ ಕಲೆ : ಡಿ. ಅಂಜಿನಪ್ಪ

ಹೊನ್ನಾಳಿ
 
        ಚಲನಚಿತ್ರ ಹಲವು ಮಾಧ್ಯಮಗಳ ನೆರವಿನಿಂದ ರೂಪಗೊಳ್ಳುವ ವಿಶಿಷ್ಠವಾದ ಕಲೆ ಎಂದು  ದಾವಣಗೆರೆಯ ಎ.ಆರ್.ಎಂ.ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ  ಸಹಾಯಕ ಪ್ರಾಧ್ಯಾಪಕರಾದ ಡಿ. ಅಂಜಿನಪ್ಪ ಹೇಳಿದರು.
         ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಆಂತರಿಕ ಗುಣಮಟ್ಟ ಭರವಸಾ ಕೋಶ ಅಡಿಯಲ್ಲಿ ಕನ್ನಡ ವಿಭಾಗದ   ವತಿಯಿಂದ  ಏರ್ಪಡಿಸಲಾಗಿದ್ದ “ಕನ್ನಡ ಸಿನಿಮಾ ಮತ್ತು ಸಾಹಿತ್ಯದ ಸಂಬಂಧ: ಸಾಹಿತ್ಯ ಕೃತಿಗಳು ಬದಲಾಗುವ ಬಗೆ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ಯಕ್ರಮವನ್ನು ಕುವೆಂಪು ಗೀತೆ ಹೇಳುವ ಮೂಲಕ ಮತ್ತು ಕುವೆಂಪುರವರ ಪುಸ್ತಕ ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
         ನೀವು ಎಷ್ಟು ಪುಸ್ತಕ ಓದಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಠವಾಗಿದೆ. ಅದೇ ನೀವು ಎಷ್ಟು ಸಿನಿಮಾ ನೋಡಿದ್ದೀರಿ ಎಂದರೆ ಸಿಗುವ ಉತ್ತರ ಭಿನ್ನವಾದದ್ದು. ಸಿನಿಮಾ ಮಾಧ್ಯಮ ಇಂದು ಅತ್ಯಂತ ಆಕರ್ಷಕ ಹಾಗೂ ಜನಪ್ರಿಯ ಮಾಧ್ಯಮವಾಗಿದೆ. ಚಲನಚಿತ್ರ ಹಲವು ಮಾಧ್ಯಗಳ ನೆರವಿನಿಂದ ರೂಪಗೊಳ್ಳುವ ವಿಶಿಷ್ಠವಾದ ಕಲೆ ಮತ್ತು ಹಲವು ಕಲೆಗಳ ಒಂದು ಮೊತ್ತ ಎಂದು ಕರೆಯಲಾಗುತ್ತದೆ. ಸಿನಿಮಾ ಮಾಧ್ಯಮಕ್ಕೆ ಇಷ್ಟೇಲ್ಲ ಮನ್ನಣೆ ಸಿಕ್ಕಿರುವುದರಲ್ಲಿ ಸಾಹಿತ್ಯ ಲೋಕದ ಕೊಡುಗೆ ಅಪಾರವಾದದು. ಚಲನಚಿತ್ರ ಹುಟ್ಟಿದಂದಿನಿಂದ  ಇಲ್ಲಿಯ ತನಕ ಜಗತ್ತಿನ ನೂರಾರೂ ಭಾಷೆಗಳಲ್ಲಿನ ಸಾವಿರಾರು ಸಾಹಿತ್ಯ ಕೃತಿಗಳು ಚಲನಚಿತ್ರಿಗಳಾಗಿವೆ. 
        ಕನ್ನಡ ಚಿತ್ರಗಳ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ಇಲ್ಲಿಯವರೆಗೆ ಚಿತ್ರರಂಗದಲ್ಲಿ ತಯಾರಾಗಿರುವ ಚಿತ್ರ ಎರಡೂವರೆ  ಸಾವಿರಕ್ಕಿಂತಲೂ ಹೆಚ್ಚು. ಅದರಲ್ಲಿ ಏಳುನೂರುಕ್ಕಿಂತಲೂ ಹೆಚ್ಚು ಚಿತ್ರಗಳು ಸಾಹಿತ್ಯ ಲೋಕದ ವಿವಿಧ ಪ್ರಕಾರಗಳನ್ನು ಆಧರಿಸಿ ಬಂದಂತಹವುಗಳು. ಹಾಗಾಗಿ ‘ಅಕ್ಷರ ಮಾಧ್ಯಮ’ದ ಪ್ರಭಾವ ದೃಶ್ಯ ಮಾಧ್ಯಮ’ದ ಮೇಲೆ ನಿರಂತರವಾಗಿ ಇದ್ದೇ ಇದೆ ಎಂದು ಹೇಳಿದರು.
        ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಆರ್. ಲೋಕೇಶರವರು ಪ್ರಾಸ್ತಾವಿಕವಾಗಿ ಮಾತನಾಡಿ ಮೊದಲ ತಲಮಾರಿನ ಚಿತ್ರರಂಗದಲ್ಲಿರುವ ನಿರ್ದೇಶಕರು ಸಾಹಿತಿಗಳು. ಆದುದ್ದರಿಂದ ಸಿನಿಮಾ ರಂಗದಲ್ಲಿ ಹೆಚ್ಚು ಹೆಚ್ಚು ಕಾದಂಬರಿ ಆಧಾರಿತ ಸಿನಿಮಾಗಳನ್ನು ತೆರೆಯ ಮೇಲೆ ತಂದರು. ಅವುಗಳು ಮೌಲ್ವಿಕವಾಗಿದ್ದವು. ಅಲ್ಲದೆ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡುತ್ತಿದ್ದವು. ಹಲವಾರು ವ್ಯಕ್ತಿಗಳು ಸಿನಿಮಾ ನೋಡಿ ಬದಲಾದದ್ದುಉಂಟು. ಸಂಗೀತ ಗಂಡು, ಸಾಹಿತ್ಯ ಹೆಣ್ಣು ಎಂಬ ಅವಿನಾಭಾವ ಸಂಬಂದಿಂದ ಕೂಡಿದ್ದವು. ಅಂದಿನ ಚಲನಚಿತ್ರ ಗೀತೆಗಳು  ಅನೇಕ ಕವಿಗಳ ಕವಿತೆಗಳಿಂದ ಕೂಡಿದ್ದವು. ಇಂದು ಚಲನಚಿತ್ರ ಗೀತೆಗಳು ಯುವ ಪಿಳಿಗೆಯನ್ನ ದಾರಿ ತಪ್ಪಿಸುತ್ತಿವೆ ಎಂದು ಹೇಳಿದರು.
         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ. ಶಿವಬಸಪ್ಪ ಹೆಚ್ ಯತ್ತಿನಹಳ್ಳಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಗ್ರಂಥಪಾಲಕರಾದ ಎಂ. ನಾಗರಾಜ ನಾಯ್ಕ, ದೈಹಿಕ ಶಿಕ್ಷಣ ಬೋಧಕರಾದ ಪಿ.ಎಸ್. ಹರೀಶ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಎ.ಎಲ್. ಪಾರ್ಥಸಾರಥಿ, ಹರಾಳು ಮಹಾಬಲೇಶ್ವರ, ಹೆಚ್.ಕೆ. ಶೈಲಜಾ, ಡಾ. ಪ್ರಾಶಾಂತ್ ಕುಮಾರ್ ಶರ್ಮಾ ವಹಿಸಿದರು. ದ್ವಿತೀಯ ಬಿ.ಎ. ವಿದ್ಯಾರ್ಥಿನಿಯರಾದ ಹೆಚ್. ದೀಪ ಸ್ವಾಗತಿಸಿದರು,  ಟಿ. ಅನಿತಾ ವಂದನಾರ್ಪಣೆ ಮಾಡಿದರು, ನಿರೂಪಣೆಯನ್ನು ಸಿ.ಡಿ ಸೌಮ್ಯ ನಡೆಸಿಕೊಟ್ಟರು, ತೃತೀಯ ಬಿ.ಎ. ವಿದ್ಯಾರ್ಥಿನಿಯರಾದ   ಚಂದ್ರಮ್ಮ ಮತ್ತು ಮಮತ ಪ್ರಾರ್ಥನೆ ಮಾಡಿದರು, ಮತ್ತು ವಿದ್ಯಾರ್ಥಿಗಳು   ಉಪಸ್ಥಿತರಿದ್ದರು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap