ಕಳೆದ ಬಾರಿಗಿಂತ ಹೆಚ್ಚು ಅಂತರದ ಗೆಲ್ಲುತ್ತೇನೆ : ಡಿ.ವಿ ಸದಾನಂದಗೌಡ

ಬೆಂಗಳೂರು

       ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗು ಪ್ರಧಾನಿ ಮೋದಿ ಸಾಧನೆಯಿಂದಾಗಿ ಕಳೆದ ಬಾರಿಗೂ ಹೆಚ್ಚಿನ ಅಂತರದ ಗೆಲುವುದು ಸಿಗಲಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

       ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ನಾಮಪತ್ರ ಸಲ್ಲಿಕೆ ಮಾಡಿದರು.ಪತ್ನಿ ಡಾಟಿ ಜೊತೆ ನಗರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

       ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವರು,ಈಗಾಗಲೇ ಇಡೀ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಒಂದು‌ ಸುತ್ತಿನ ಪ್ರವಾಸ ಮಾಡಿದ್ದೇನೆ, ಫೆ.3 ರಂದು ನಮ್ಮ ಉತ್ತರ ಕ್ಷೇತ್ರದ ಸಭೆ ನಡೆಸಲಾಗಿತ್ತು, ಮುನಿರಾಜುಗೌಡ, ಡಾ.ಅಶ್ವತ್ಥನಾರಾಯಣ, ನಾರಾಯಣಸ್ವಾಮಿ ಸೇರಿ ಆ ಭಾಗದ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿದ್ದೆವು,ಅಂದಿನಿಂದ ನಾನು ನಿರಂತರವಾಗಿ ನಾವು ನಮ್ಮ ಕಾರ್ಯಕರ್ತರ ಜೊತೆ ಬೂತ್ ಮಟ್ಟದಿಂದ ಹಿಡಿದು,‌ಮಂಡಲ್,ಕ್ಷೇತ್ರ‌ ಮಟ್ಟದ‌ ಸಭೆಗಳನ್ನು ಬೇರೆ ಬೇರೆ ಹಂತದಲ್ಲಿ ಮಾಡಿದ್ದೇವೆ, ವಾತಾವರಣ ಚನ‌್ನಾಗಿದೆ,‌ಮೋದಿ‌ ಸಾಧನೆ ಈ ಚುನಾವಣೆಯಲ್ಲಿ ವಿಶೇಷ ಶಕ್ತಿ ಕೊಟ್ಟಿದೆ ಎಂದರು.

      ಮೋದಿ ಮತ್ತೆ ಪಿಎಂ ಆಗಬೇಕು ಎಂದು ಸಾಮಾನ್ಯ ಜನ ಅನ್ನುತ್ತಿದ್ದಾರೆ,ಕಾರ್ಯಕರ್ತರು, ಜನರ ಜೊತೆ ಐದು ವರ್ಷ ಅಂತಃಕರಣ ಸಾಕ್ಷಿಯಾಗಿ‌ ಮಾಡಿದ್ದೇನೆ, ಮೋದಿ‌ ಪಿಎಂ ಆಗಬೇಕು ಅದಕ್ಕಾಗಿ ಸದಾನಂದಗೌಡರಿಗೆ ಮತ ಎನ್ನುವ ಅಪೇಕ್ಷೆ ಜನಸಾಮಾನ್ಯರಿಂದ ವ್ಯಕ್ತವಾಗುತ್ತಿದೆ ಹಾಗಾಗಿ ಕಳೆದ ಬಾರಿಗಿಂತ ಉತ್ತಮ ವಾತಾವರಣ ನಮಗೆ ಇದೆ ಕಾರ್ಯಕರ್ತರು ಕೂಡ ಅದಕ್ಕಾಗಿ ಚನ್ನಾಗಿ ತಯಾರಿ ನಡೆಸಿದ್ದಾರೆ, ನಮ್ಮ ನಾಯಕರು ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದಾರೆ, ಕಳೆದ ಬಾರಿಗಿಂತ ಹೆಚ್ಚು ಅಂತರದ ಗೆಲುವು ಸಿಗಲಿದೆ ಇದು ಓವರ್ ಕಾನ್ಫಿಡೆನ್ಸ್ ಅಲ್ಲ,ಇದು ನಾನು ಕ್ಷೇತ್ರದಲ್ಲಿ ಕಂಡುಕೊಂಡ ವಿಷಯ ಎಂದು ವಿಶ್ವಾಸದ ನುಡಿಗಳನ್ನಾಡಿದರು.

       ನಮ್ಮ ಕ್ಷೇತ್ರದಲ್ಲಿ ಎದುರಾಳಿ ಇನ್ನೂ ಬಂದಿಲ್ಲ, ಅವರು ಯಾರು ಎಂದು ಗೊತ್ತಿಲ್ಲ,ಮೈತ್ರಿ ಅಭ್ಯರ್ಥಿ ಯಾರು ಎಂದು ಗೊತ್ತಾದ ನಂತರ ನಾಮಪತ್ರ ಹಿಂಪಡೆಯುವ ಕಾಲಾವಕಾಶ ಮುಕ್ತಾಯದ ಬಳಿಕ ನಮ್ಮ ನಾಯಕರು ಕುಳಿತು ಚರ್ಚೆ ಮಾಡು ನಮ್ಮ ಮುಂದಿನ ರಾಜಕೀಯ ತಂತ್ರಗಾರಿಕೆ ಸಿದ್ದಪಡಿಸಲಿದ್ದೇವೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link