ಕರ್ನಾಟಕ ಮತ್ತು ಅಮೇರಿಕ ವಾಣಿಜ್ಯ ಸಂಬಂಧ ಬಲವರ್ಧನೆಗೆ ಆದ್ಯತೆ :ದೇಶಪಾಂಡೆ

ಬೆಂಗಳೂರು

        ಕರ್ನಾಟಕ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಸಂಬಂಧ ಬಲವರ್ಧನೆಗಾಗಿ ಸದ್ಯದಲ್ಲೇ ಅಧಿಕಾರಿಗಳು ಮತ್ತು ಇಂಡೊ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ನ ಪದಾಧಿಕಾರಿಗಳನ್ನೊಳಗೊಂಡ ಕಾರ್ಯತಂಡ ರಚಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

       ನಗರದಲ್ಲಿಂದು ರಾಜ್ಯ ಸರಕಾರ ಇಂಡೊ – ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ನ ನಿಯೋಗದ ನಡುವೆ ನಡೆದ ದುಂಡು ಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಈ ಸಭೆಯಲ್ಲಿ` ಕರ್ನಾಟಕ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಸಂಬಂಧ ಬಲವರ್ಧನೆಗೆ ಅಗತ್ಯವಾದ ಕೌಶಲ್ಯ ಮರುಪೂರಣ’ ಕುರಿತು ಪ್ರಧಾನವಾಗಿ ಚರ್ಚಿಸಲಾಯಿತು ಎಂದರು.

      ಇದಕ್ಕೂ ಮುನ್ನ ನಿಯೋಗದೊಂದಿಗೆ ವಿಚಾರ ವಿನಿಮಯ ನಡೆಸಿದ ಸಚಿವ ದೇಶಪಾಂಡೆ, “ಈ ಕಾರ್ಯತಂಡ ಸದ್ಯದಲ್ಲೇ ಮಾಡಿಕೊಳ್ಳಲು ಉದ್ದೇಶಿಸಿರುವ ಒಡಂಬಡಿಕೆಗೆ ಅಗತ್ಯವಾದ ನೀಲಿನಕಾಶೆಯನ್ನು ಸಿದ್ಧಪಡಿಸಲಿದೆ,” ಎಂದು ಹೇಳಿದರು.

       “ಅಮೆರಿಕದೊಂದಿಗಿನ ವಾಣಿಜ್ಯ ಸಂಬಂಧ ಬಲವರ್ಧನೆಗೆ ವೇಗ ಒದಗಿಸುವುದರಿಂದ ಕೌಶಲ್ಯಾಭಿವೃದ್ಧಿ, ವಾಣಿಜ್ಯ ವಹಿವಾಟು ಮತ್ತು ಬಂಡವಾಳ ಹೂಡಿಕೆಗೆ ದಾರಿ ಸುಗಮವಾಗಲಿದೆ. ಇದು ಸಾಧ್ಯವಾಗಬೇಕಾದರೆ ಕೌಶಲ್ಯಾಭಿವೃದ್ಧಿ, ಸಮುದಾಯ ಕೌಶಲ್ಯ ಡಿಪೆಮಾ, ಉದ್ಯಮಶೀಲತೆಯ ಪರಿಪೆಷಣೆ, ಸಾಗರೋತ್ತರ ಉದ್ಯೋಗಾವಕಾಶ ಸೌಲಭ್ಯ ಮತ್ತು ಪ್ರಶಿಕ್ಷಣ ಮುಂತಾದವುಗಳ ಪರಸ್ಪರ ವಿನಿಮಯದೊಂದಿಗೆ ಇದನ್ನು ಆರಂಭಿಸಬೇಕಾದ ಅಗತ್ಯವಿದೆ,” ಎಂದು ಸಚಿವರು ವಿವರಿಸಿದ್ದಾರೆ.

       “ವಾಣಿಜ್ಯ ವಹಿವಾಟಿನ ದೃಷ್ಟಿಯಿಂದ ಜಾಗತಿಕ ಮಟ್ಟದಲ್ಲಿರುವ ಸಂದರ್ಭ, ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ 2 ಮತ್ತು 3ನೇ ಸ್ತರದನಗರಗಳಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಉದ್ಯೋಗಿಗಳಿಗೆ ಅಗತ್ಯವಾದ ಕೌಶಲ್ಯ ಮರುಪೂರಣೆ, ಮಧ್ಯಾವಧಿ ತರಬೇತಿಗಳ ಕಡೆಗೂ ಗಮನಹರಿಸಲಾಗುವುದು ಎಂದರು.

      “ಉದ್ಯಮಶೀಲತೆ ಮತ್ತು ನವೋದ್ಯಮ ಸ್ಥಾಪನೆಗೆ ಬೇಕಾದ ವಾತಾವರಣ ರಾಜ್ಯದಲ್ಲಿ ಈಗಾಗಲೇ ಇದ್ದು, ಇದನ್ನು ಮತ್ತಷ್ಟು ಸುಧಾರಿಸಲಾಗುವುದು. ಉದ್ಯಮಿ ಮತ್ತು ಉದ್ದಿಮೆಗಳನ್ನು ಒಂದು ಜಾಲಕ್ಕೆ ತರುವ ಮೂಲಕ ರಾಜ್ಯದ ಯುವಜನರಿಗೆ ವಿದೇಶಗಳಲ್ಲಿ ಉದ್ಯೋಗಗಿಟ್ಟಿಸಿಕೊಳ್ಳಲು ಹಾಗೂ ಉದ್ದಿಮೆ ನಡೆಸಲು ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಲಾಗುವುದು,” ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap