ಕಾನೂನು ಅರಿವು ಕಾರ್ಯಕ್ರಮ

ಹರಪನಹಳ್ಳಿ

      ಬಡತನದ ಸಂಕೋಲೆಯಲ್ಲಿ ಸಿಲುಕಿರುವ ಬಡವರನ್ನು ಅಭಿವೃದ್ಧಿಪಡಿಸುವುದೇ ಸಾಮಾಜಿಕ ನ್ಯಾಯದ ಮೂಲ ಉದ್ದೇಶವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ಹೇಳಿದರು.‘ಸಾಮಾಜಿಕ ನ್ಯಾಯ ಹಾಗೂ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಮಹತ್ವ’ ಕುರಿತು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

      `ಸಾಮಾಜಿಕ ತತ್ವದಡಿ ಎಲ್ಲರೂ ನ್ಯಾಯಯುತ ಜೀವನ ಸಾಗಿಸಬೇಕು ಎಂಬುದು ಸಂವಿಧಾನದ ಉದ್ದೇಶ. ಕೆಳವರ್ಗವರನ್ನು ಮೇಲಕ್ಕೆ ತರಲು ದೇಶದ ಮಹಾನ್ ನಾಯಕರು ಈ ಹಿಂದೆಯೂ ಶ್ರಮಿಸಿದ್ದಾರೆ. ಅಂತವರಿಗೆ ಸರ್ಕಾರಗಳು ಬಜೆಟ್ ಅಲ್ಲಿ ಹಲವು ಕಾರ್ಯಕ್ರಮ ನೀಡಿ ಜಾಗೃತಿ ಮೂಡಿಸುತ್ತೀವೆ’ ಎಂದರು.

      `ಕೆಲ ಸಂದರ್ಭಗಳಲ್ಲಿ ಪೊಲೀಸರು ದೂರು ಸ್ವೀಕಾರ ಮಾಡಲ್ಲ ಎಂಬ ಆರೋಪಗಳು ಕೇಳಿ ಬರುತ್ತವೆ. ದೂರು ನೀಡಿದಾಗ ತಕ್ಷಣ ಎಫ್‍ಐಆರ್ ಮಾಡಬಾರದು ಎಂಬ ನಿಯಮವಿದೆ. ಪೊಲೀಸ್ ಇಲಾಖೆ ಸಣ್ಣ-ಪುಟ್ಟ ವ್ಯಾಜ್ಯಗಳಿಗೆ ಎಫ್‍ಐಆರ್ ದಾಖಲಿಸಿದೇ ಮಾನವೀಯತೆ ದೃಷ್ಟಿಯಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತದೆ. ಜನರು ವಿನಾಃಕಾರಣ ಕೋರ್ಟ್-ಕಚೇರಿಗೆ ಅಲೆಬಾರದು ಎಂಬ ಉದ್ದೇಶ ಇದೆ ಎಂಬುದನ್ನು ಅರಿಯಬೇಕು’ ಎಂದರು.

       ಪಿಎಸ್‍ಐ ಕೆ.ಶ್ರೀಧರ ಮಾತನಾಡಿ, ದೂರುದಾರರು ದೂರು ಸಲ್ಲಿಸುವಾಗಲೇ ಅದರ ಉದ್ದೇಶ ಅರ್ಥ ಮಾಡಿಕೊಂಡು ರಾಜಿ ಪ್ರಯತ್ನ ಮಾಡಲಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯೇ ಸ್ವಯಂ ದೂರು ದಾಖಲಿಸಿಕೊಳ್ಳುತ್ತದೆ. ಪೊಲೀಸ್ ಇಲಾಖೆ ಜನಸ್ನೇಹಿ ಆಗಬೇಕೆಂದರೆ ಇಲಾಖೆ ಜತೆ ನಾಗರಿಕರ ಸಹಕಾರ ಅತ್ಯಗತ್ಯ. ಕಾನೂನಿನ ಅರಿವಿಗಿಂತ ಕಾನೂನು ದುರುಪಯೋಗಪಡಿಸಿಕೊಳ್ಳುವ ಅರಿವು ಹೆಚ್ಚಾಗುತ್ತಿರುವುದು ವಿಷಾದನೀಯ’ ಎಂದರು.

      ಕಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ.ಶೋಭಾ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಬಸವರಾಜ, ಕಾರ್ಯದರ್ಶಿ ಬಿ.ಎಸ್.ವೇದಮೂರ್ತಿ, ಅಪರ ಸರ್ಕಾರಿ ವಕೀಲ ಮಂಜುನಾಥ ಕಣವಿಹಳ್ಳಿ, ವಕೀಲರಾದ ಬಿ.ಗೋಣಿಬಸಪ್ಪ, ಬಾಗಳಿ ಮಂಜುನಾಥ, ಮೃತ್ಯುಂಜಯ, ಕೆ.ಪ್ರಕಾಶ್, ಡಿ.ಹನುಮಂತಪ್ಪ, ರೇವಣಸಿದ್ದಪ್ಪ, ಬೇಲೂರು ಸಿದ್ದೇಶ್, ಪೊಲೀಸ್ ಕಾನಸ್ಟೇಬೆಲ್ ಕೆಂಚಪ್ಪ ಇತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link