ಮೋಬೈಲ್ ಅಪಾಯಕಾರಿಯೂ ಹೌದು-ವಿವೇಚನೆ ಇರಲಿ

ಮಧುಗಿರಿ

        ವಿದ್ಯಾರ್ಥಿಗಳ ಸಾಧನೆಯು ದೊಡ್ಡದಾಗಿದ್ದರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುರಿ ಮುಟ್ಟಲು ಹಾಗೂ ಯಶಸ್ಸು ಗಳಿಸಲು ಸಾಧ್ಯ ಎಂದು ಡಿಡಿಪಿಐ ರವಿಶಂಕರ ರೆಡ್ಡಿ ಅಭಿಪ್ರಾಯಪಟ್ಟರು.

          ಪಟ್ಟಣದ ತುಮಕೂರು ರಸ್ತೆಯ ಸಮೀಪವಿರುವ ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ತರಂಗ್ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯುಗದಲ್ಲಿ ವಿಜ್ಞಾನವು ಬಹಳಷ್ಟು ನಾಗಾಲೋಟದಲ್ಲಿ ಸಾಗುತ್ತಿದೆ. ಮೊಬೈಲ್ ಎಷ್ಟು ಉಪಕಾರಿಯಾಗಿದೆಯೊ ಅಷ್ಟೇ ಅಪಕಾರಿಯೂ ಹೌದು. ಆದರೆ ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಮೊಬೈಲ್ ಇಲ್ಲದೆ ಜೀವನ ನಡೆಸಲು ಕಷ್ಟಕರವಾದಂತಹ ವಾತಾವರಣವನ್ನು ಸೃಷ್ಟಿಸಿದೆ.

          ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಹೇಳಿರುವಂತೆ, ನೂರು ಪುಸ್ತಕಗಳು ಒಬ್ಬ ಸ್ನೇಹಿತನಿಗೆ ಸಮ, ಒಬ್ಬ ಸ್ನೇಹಿತ ನೂರು ಗ್ರಂಥಗಳಿಗೆ ಸರಿ ಸಮಾನ. ಆದ್ದರಿಂದ ವಿದ್ಯಾರ್ಥಿಗಳು ಪುಸ್ತಕಗಳನ್ನು ಉತ್ತಮ ಸ್ನೇಹಿತನೆಂದು ಭಾವಿಸ ಬೇಕು. ಒಳ್ಳೆಯ ಪುಸ್ತಕಗಳ ಅಭ್ಯಾಸ ಮಾಡುವುದರ ಜೊತೆಗೆ ತಮ್ಮ ಜೀವನದಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಂಡು ಪೋಷಕರಿಗೆ ಹಾಗೂ ಸಮಾಜಕ್ಕೆ ತಮ್ಮದೇ ಆದತಂಹ ಕೊಡುಗೆಗಳನ್ನು ನೀಡಬೇಕು. ಪೋಷಕರು ತಮ್ಮ ಮಕ್ಕಳಿಗೆ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳಸುವುದು ಪೋಷಕರ ಜವಾಬ್ದಾರಿ ಎಂದರು.

         ಎಜು ಶ್ರೇರ್ ಸಂಸ್ಥೆಯ ವ್ಯವಸ್ಥಾಪಕ ಕಿರಣ್ ಕುಮಾರ್ ಸಿದ್ದೆ ಮಾತನಾಡಿ, ನಮ್ಮ ಸಂಸ್ಥೆ ಹಾಗೂ ಮಾರುತಿ ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್‍ನ ಸಹಭಾಗಿತ್ವದಲ್ಲಿ, ಬರುವ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲಾಗುತ್ತಿದೆ. ಜೊತೆಗೆ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ಧೇಶದಿಂದ ಬೆಂಗಳೂರು ತುಮಕೂರಿನಲ್ಲಿ ನೀಡುವ ಶಿಕ್ಷಣದ ಮಾದರಿಯಲ್ಲಿಯೇ ಒದಗಿಸಲಾವುದು ಎಂದರು.

           ವಿವಿಧ ಸ್ಪರ್ಧೆಗಳಲ್ಲಿ ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು. ಸುಂದರವಾದ ವೇದಿಕೆಯಲ್ಲಿ ಶಾಲಾ ಮಕ್ಕಳಿಂದ ನೃತ್ಯ ರೂಪಕಗಳು ಮೂಡಿ ಬಂದವು.ಸಂಸ್ಥೆಯ ಅಧ್ಯಕ್ಷ ಪಿ.ರಮೇಶ್, ಕಾರ್ಯದರ್ಶಿ ಎಂ.ಕೆ.ನಂಜುಂಡಯ್ಯ, ಖಜಾಂಚಿ ಬಿ.ಎನ್ ನಾಗರಾಜು, ಟ್ರಸ್ಟಿಗಳಾದ ಮಂಜುಳ, ಶೈಲಶ್ರೀ, ಪ್ರಾಂಶುಪಾಲ ಪಿ.ಎಸ್.ವಿನೋದ್ ಕುಮಾರ್, ಬೋಧಕ, ಬೋಧಕೇತರ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link