ಪೌರಕಾರ್ಮಿಕರ ಜೊತೆಯಲ್ಲಿ ಪರಕೆ ಹಿಡಿದು ರಸ್ತೆಯನ್ನು ಸ್ವಚ್ಚಗೊಳಿಸಿದ ನ್ಯಾಯಾಧೀಶರು

ಹೊಳಲ್ಕೆರೆ:

         ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್ ಪವಾರ್ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರವಿಕುಮಾರ್ ವಿ. ಬೆಳಿಗ್ಗೆ 6ಗಂಟೆಗೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಪರಕೆ ಹಿಡಿದು ಬೀದಿಯಲ್ಲಿ ಬಿದ್ದಿದ್ದ ಘನತಾಜ್ಯ ವಸ್ತುಗಳನ್ನು ಪೌರಕಾರ್ಮಿಕರ ಜೊತೆಗೂಡಿ ಸ್ವಚ್ಚಗೊಳಿಸಿದರು

          ತಾಲ್ಲೂಕು ಕಾನೂನು ಸೇವಾ ಸಮಿತಿ, ವಚಕೀಲರ ಸಂಘ ತಾಲ್ಲೂಕು ಆಡಳಿತ, ಪ.ಪಂ. ಆರೋಗ್ಯ ಇಲಾಖೆ, ಶಿಶು ಅಭಿವೃಧ್ದಿ ಇಲಾಖೆ, ಶಿಕ್ಷಣ ಇಲಾಖೆ, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ರಸ್ತೆಗಳ ಕಸವನ್ನು ಗುಡಿಸಿದರು.

          ಗಾಂದೀಜಿಯ ಆಶಯದಂತೆ ಪರಿಸರ ಮತ್ತು ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ. ಸ್ವಚ್ಚತೆ ಇಲ್ಲದಿದ್ದರೆ ಮನುಷ್ಯ ಮತ್ತು ಪ್ರಾಣಿಗಳು ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಮನುಷ್ಯ ನಾಗರೀಕತೆ ಬೆಳೆದಂತೆ ಗ್ರಾಮಗಳು, ಪಟ್ಟಣಗಳು, ನಗರಗಳು ಜನಸಂದಣಿಯಿಂದ ಪ್ರತಿನಿತ್ಯ ರಸ್ತೆಗಳಲ್ಲಿ ಕೊಳೆ, ಚರಂಡಿಯಲ್ಲಿ ಕೊಳೆತು ನಿಂತಿರುವ ಘನತಾಜ್ಯ ವಸ್ತುಗಳಿಂದ ಸೊಳ್ಳೆಗಳ ನೊಣಗಳ ಕಾಟದಿಂದ ಆರೋಗ್ಯವಂತ ಮನುಷ್ಯನು ವಿವಿಧ ಕಶಾಯಿಲೆಗಳಿಗೆ ಮಾರು ಹೋಗುತ್ತಾನೆ. ಈ ದಿಸೆಯಲ್ಲಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚಗೊಳಿಸುವ ಅರಿವನ್ನು ಮೂಡಿಸುವ ದೃಷ್ಟಿಯಿಂದ ಸ್ವಚ್ಚತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯಾಧೀರಾದ ಪ್ರೇಮಾ ವಸಂತರಾವ್ ಪವಾರ್ ತಿಳಿಸಿದರು.

         ಸ್ವಚ್ಚತಾ ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರವಿಕುಮಾರ್ ವಿ ಭಾಗವಹಿಸಿದ್ದು, ಪಟ್ಟಣದ ಮುಖ್ಯ ವೃತ್ತ, ಬಸ್ ನಿಲ್ದಾಣದ ರಸ್ತೆಗಳಲ್ಲಿ ಚೆಲ್ಲಾಡುತ್ತಿದ್ದ ಪೇಪರ್, ಪ್ಲಾಸ್ಟಿಕ್ ಚೀಲಗಳು ಹಣ್ಣು ಹಂಪಲಗಳಲನ್ನು ಬಿಸಾಡಿದ್ದ ಘನ ತಾಜ್ಯ ವಸ್ತುಗಳನ್ನು ಪೌರಕಾರ್ಮಿಕರು ಮತ್ತು ವಕೀಲರ ಸಂಘದ ಅಧ್ಯಕ್ಷರಾದ ಜಿ.ಇ.ರಂಗಸ್ವಾಮಿ, ಎಲ್ಲಾ ಇಲಾಖೆಯ ಮುಖ್ಯಸ್ಥರುಗಳು ಸಾರ್ವಜನಿಕರು ಸೇರಿ ಸ್ವಚ್ಚತೆ ಮಾಡುವ ಬಗ್ಗೆ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಸ್ವಚ್ಚತೆ ಬಗ್ಗೆ ತಿಳುವಳಿಕೆ ನೀಡಿದರು.

         ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜಯಸಿಂಹ, ಪಿಎಸ್‍ಐ ಮಹೇಶ್, ಅಪರ ಸರ್ಕಾರಿ ವಕೀಲ ಡಿ.ಜಯಣ್ಣ, ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್, ಪ.ಪಂ. ಮುಖ್ಯಧಿಕಾರಿ ಡಿ.ಉಮೇಶ್, ಎಲ್ಲಾ ಕಚೇರಿಯ ಸಿಬ್ಬಂದಿಯವರು ಮತ್ತು ಇತರರು ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link