ಚಿತ್ರದುರ್ಗ
ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸಿ.ಟಿ.ಇ ಸಹ ನಿರ್ದೇಶಕರಾದ ಎಂ.ರೇವಣಸಿದಪ್ಪ ಹೇಳಿದರು.
ಡಿ.ಎಸ್.ಈ.ಆರ್.ಟಿ. ಮತ್ತು ಡಯಟ್ ವತಿಯಿಂದ ಪದವೀಧರ ಶಾಲಾ ಶಿಕ್ಷಕರಿಗೆ ಚಿತ್ರದುರ್ಗದ ಮುರುಘಾ ಮಠದಲ್ಲಿ ಆಯೋಜಿಸಿದ್ದ 10 ದಿನಗಳ ಇಂಡಕ್ಷನ್ ತರಬೇತಿ (ಬುನಾದಿ ತರಬೇತಿ)ಯನ್ನು ಉದ್ಘಾಟಿಸಿ ಮಾತನಾಡಿದರು
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ ಶಿಕ್ಷಕರಾಗಿ ಆಯ್ಕೆಯಾಗಿರುವ ತಾವು ವೃತ್ತಿಯಲ್ಲಿ ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು ಎಂದರು. ಶಿಕ್ಷಣ ಇಲಾಖೆಯು ಶಿಕ್ಷಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು ಬೋಧನೆ ಉತ್ತಮ ಪಡಿಸಲು ಅನೇಕ ತರಬೇತಿಗಳನ್ನು ನೀಡುತ್ತಿದೆ. ಸಮಾಜದ ಪ್ರಗತಿಯಲ್ಲಿ ಶಿಕ್ಷಕರ ಜವಬ್ಧಾರಿ ಹೆಚ್ಚಿದ್ದು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಯಟ್ ಪ್ರಾಚಾರ್ಯ ಕೆ.ಕೋದಂಡರಾಮ ಮಾತನಾಡಿ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಶಿಕ್ಷಕರಿಗೆ ನೀಡುವ ತರಬೇತಿಗಳು ಬೋಧನಾ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುತ್ತವೆ, ಶಿಕ್ಷಕರು ಒಳನೋಟವನ್ನು ಹೊಂದಿದ್ದು ಹೊಸ ಹೊಸ ಆಲೋಚನೆಯೊಂದಿಗೆ ವೃತ್ತಿ ದಕ್ಷತೆ ಹೆಚ್ಚಿಸಿಕೊಳ್ಳಬೇಕು ವಿವಿಧ ಬೋಧನಾ ವಿಧಾನಗಳನ್ನು ಬಳಸಿಕೊಂಡು ಮಕ್ಕಳ ಕಲಿಕಾ ಸಾಮಥ್ರ್ಯ ಹೆಚ್ಚಿಸಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೋಡಲ್ ಅಧಿಕಾರಿ ಎನ್.ಎಂ.ರಮೇಶ್ ಸಮಾಜ ಶಿಕ್ಷಕರ ಬಗ್ಗೆ ಹೊಂದಿರುವ ದೃಷ್ಠಿಕೋನ ಶಾಲೆಯಲ್ಲಿ ಶಿಕ್ಷಕನ ಪಾತ್ರ ಶಾಲಾ ಸಹಭೋಜನ ಮತ್ತು ಮಧ್ಯಾಹ್ನದ ಉಪಾಹಾರದ ಮಹತ್ವ, ಮಗುವಿನ ಬಾಲ್ಯ, ರಚನಾವಾದದ ಪರಿಕಲ್ಪನೆ ಶಿಕ್ಷಣದಲ್ಲಿ ರಂಗಕಲೆ ವಿಷಯವನ್ನು ಕುರಿತು ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಉಪನ್ಯಾಸಕರಾದ ಕೃಷ್ಣಮೂರ್ತಿ, ಭರಮಪ್ಪ ಮೈಸೂರು, ಎಸ್.ಬಸವರಾಜು ಸಂಪನ್ಮೂಲ ವ್ಯಕ್ತಿಗಳಾದ ಎಚ್.ಎಸ್.ಶಿವಕುಮಾರ್, ಅಜಿಮುಲ್ಲಾ, ಉಮೇಶಯ್ಯ ಕಲಾಜ್ಯೋತಿ ಉಪಸ್ಥಿತರಿದ್ದರು. ಚಿತ್ರದುರ್ಗ ಶಿವಮೊಗ್ಗ, ವಿಜಯಪುರ, ಬೀದರ್, ಧಾರವಾಡ ಜಿಲ್ಲೆಯ ಒಟ್ಟು 60 ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
