ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಭರವಸೆಯನ್ನು ಕಳೆದುಕೊಳ್ಳಬಾರದು

ಶಿರಾ:

        ಯಾಂತ್ರಿಕ ಜಗತ್ತಿನಲ್ಲಿ ಜೀವನದ ಬದುಕುಗಳು ಸಂದಿಗ್ದತೆಗೆ ಸಿಲುಕುತ್ತಿದ್ದು ಇಂತಹ ಜಂಜಾಟದ ಜಗತ್ತಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಪೈಪೋಟಿಯೇ ನಡೆಯುತ್ತಿದ್ದು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯ ಹಾದಿಯಲ್ಲಿ ಯಾವುದೇ ಕಾರಣಕ್ಕೂ ಭರವಸೆಯನ್ನು ಕಳೆದುಕೊಳ್ಳಬಾರದು ಎಂದು ಖ್ಯಾತ ಮನೋ ವೈದ್ಯ ಡಾ.ಸಿ.ಎಸ್.ಚಂದ್ರಶೇಖರ್ ಹೇಳಿದರು.ನಗರದ ಪ್ರೆಸಿಡೆನ್ಸಿ ಪ.ಪೂ. ಕಾಲೇಜಿನಲ್ಲಿ ಭಾನುವಾರ ನಡೆದ ಜೆಮ್ ಆಫ್ ಪ್ರೆಸಿಡೆನ್ಸಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ನಮ್ಮಗಳ ಮೇಲೆ ನಮ್ಮದೇ ಆದ ಅನೇಕ ಗುರುತರ ಜವಾಬ್ದಾರಿಗಳಿದ್ದರೂ ನಾವುಗಳ ಅವುಗಳನ್ನು ಮರೆತುಬಿಟ್ಟಿದ್ದೇವೆ. ಸಮಾಜಕ್ಕಾಗಿ ನಾವುಗಳು ನೀಡುವ ಕೊಡುಗೆ ಅಪಾರವಿದ್ದು ಇದಕ್ಕಾಗಿ ಶೈಕ್ಷಕತೆಯ ತಪಸ್ಸಿನಿಂದ ಮಾತ್ರಾ ಸಾದ್ಯ. ಕೇವಲ ವಯಸ್ಸಾದರಷ್ಟೇ ಸಾಲದು ನಮ್ಮ ಯವೋಮಾನದ ಹಿಂದೆ ಸಾಧನೆಗೈದ ಸಾಧನೆಯ ದಾರಿಗಳು ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದರು.

         ಶೈಕ್ಷಣಿಕತೆ ಮುಂದುರಿದಂತೆ ಕೌಟುಂಬಿಕ ಸಾಮರಸ್ಯಗಳು ಕಡಿಮೆಯಾಗುತ್ತಿವೆ ಅನ್ನುವುದು ದಿಟವಾದರೂ ಐತಿಹಾಸಿಕ ಪರಂಪರೆಯನ್ನು ಹೊಂದಿದ ನಮ್ಮ ದೇಶದಲ್ಲಿ ಕೌಟುಂಬಿಕ ಸಾಮರಸ್ಯಗಳು ಕಡಿಮೆಯಾಗಬಾರದು. ಹೆತ್ತವರ ಮೇಲಿನ ಪ್ರತೀ, ವಿಶ್ವಾಸಗಳು ಜೀವಂತವಾಗಿ ಉಳಿಯಬೇಕು. ಕಷ್ಟದ ಸ್ಥಿತಿಯಲ್ಲೂ ವಿದ್ಯಾಭ್ಯಾಸಕ್ಕಾಗಿ ತಮ್ಮ ಜೀವವನ್ನುತೇದುಕೊಂಡ ಪೋಷಕರ ಮನಸ್ಸನ್ನು ಮಕ್ಕಳು ನೋಯಿಸಬಾರದು ಎಂದು ಡಾ.ಚಂದ್ರಶೇಖರ್ ತಿಳಿಸಿದರು.

          ಎಲ್ಲಾ ಮಕ್ಕಳು ಬುದ್ದಿವಂತರಾಗಲು ಸಾದ್ಯವಿಲ್ಲ. ಕೆಲ ಮಕ್ಕಳಲ್ಲಿ ಓದುವ ಹವ್ಯಾಸ ಜಾಸ್ತಿ ಇದ್ದರೆ ಮತ್ತಲವು ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಯ ಸಾಧನೆಗಳತ್ತಲೂ ಗಮನವಿರುತ್ತದೆ. ಮಕ್ಕಳು ತಮಗಿಷ್ಟವಾದ ಭಾಷಾ ಪ್ರೌಢಿಮೆ ಹಾಗೂ ಅವರಿಗೆ ಅನ್ನಿಸಿದ ಸಾಧನೆಗಳತ್ತ ಪೋಷಕರು ಸಹಕರಿಸಬೇಕೇ ಹೊರತು ಒತ್ತಡದ ಶಿಕ್ಷಣ ಅನಗತ್ಯ. ಇಂತಹ ಒತ್ತಡದ ಶಿಕ್ಷಣದಿಂದ ವಿದ್ಯಾರ್ಥಿ ಏನನ್ನೂ ಸಾಧಿಸಲಾರ ಎಂದರು.

         ಪ್ರಸ್ತುತ ಶಿರಾದಲ್ಲಿನ ಪ್ರಸೆಡೆನ್ಸಿ ಕಾಲೇಜಿನಲ್ಲಿ ಓದಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ ಮಕ್ಕಳನ್ನು ಗುರ್ತಿಸಿ ಅಭಿನಂಧಿಸುವಂತಹ ಕ್ರಮ ನಿಜಕ್ಕೂ ಮೆಚ್ಚುವಂತಾದ್ದು. ಗ್ರಾಮೀಣ ಪ್ರದೇಶದಲ್ಲಿಯೂ ಇಂತಹ ಸಂಸ್ಥೆಯೊಂದು ಬೀಡುಬಿಟ್ಟಿರುವುದು ಈ ಭಾಗದ ಜನರ ಪುಣ್ಯವೂ ಹೌದು ಎಂದು ಚಂದ್ರಶೇಖರ್ ಪ್ರಶಂಸೆ ಮಾಡಿದರು.

         ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚಿದಾನಂದ್ ಎಂ.ಗೌಡ ಮಾತನಾಡಿ ಈವರೆಗೆ ನಮ್ಮ ಸಂಸ್ಥೆಯಲ್ಲಿ ಓದಿ ವೈದ್ಯಕೀಯ ಶಿಕ್ಷಣ ಪಡೆದು ಹುದ್ದೆಯಲ್ಲಿಯೂ ಇರುವ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಇದೀಗ ಅಭಿನಂಧಿಸಿ ಜೆಮ್ ಆಫ್ ಪ್ರೆಸಿಡೆನ್ಸಿ ಪ್ರಶಸ್ತಿ ನೀಡಿದ್ದು ಮುಂಬರುವ ಮಕ್ಕಳು ಕೂಡಾ ಉನ್ನತ ಶಿಕ್ಷಣದತ್ತ ಸಾಗಬೇಕು ಎಂದರು.ಮನೋಹರ್ ದೇಶಮುಖ್, ಶಾಲಾ ಆಡಳಿತಾಧಿಕಾರಿ ಬಾಲಾಜಿ, ಐ.ಸಿ.ಎಸ್.ಸಿ. ವಿಭಾಗದ ಮುಖ್ಯಸ್ಥ ಜಾರ್ಜ್‍ಮ್ಯಾಥ್ಯು, ಪ್ರಾಂಶುಪಾಲ ಸುಬ್ರಹ್ಮಣ್ಯ ಡಿ.ಕೆ, ಗಿರಿಪ್ರಸಾದ್ ಪಾಟೀಲ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap