ತಾ.ಪಂ ಸಾಮಾನ್ಯ ಸಭೆ..!!

ತುರುವೇಕೆರೆ:

      ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಗೈರಾಗಿದ್ದು ಅವರ ಪರವಾಗಿ ಬಂದಿದ್ದ ಮ್ಯಾನೇಜರ್‍ನ್ನು ಸಭೆಯಿಂದ ಹೊರ ಕಳಿಸಿದ ಪ್ರಸಂಗ ತಾಲೂಕು ಪಂಚಾಯ್ತಿ ಅಧ್ಯಕ್ಷೆ ನಾಗರತ್ನ ರವೀಂದ್ರ ಅಧ್ಯಕ್ಷತೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ನೆಡೆಯಿತು.

       ತಾ.ಪಂ.ಸದಸ್ಯ ಸ್ವಾಮಿ ಮಾತನಾಡಿ ಎಲ್ಲ ಇಲಾಖೆಯ ಮುಖ್ಯ ಅಧಿಕಾರಿಗಳು ಸಾಮಾನ್ಯ ಸಭೆಗೆ ಆಗಮಿಸಬೇಕೆಂದು ಈಗಾಗಲೇ ಇ.ಓ ಪತ್ರದಲ್ಲಿ ತಿಳಿಸಿದ್ದರು ಸಹಾ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಆಗಮಿಸಿಲ್ಲ ಎಂದು ಮ್ಯಾನೇಜರ್ ತರಾಟೆಗೆ ತೆಗೆದುಕೊಂಡ ಸದಸ್ಯರುಗಳು ತಾಲೂಕಿನಾದ್ಯಂತ ಬರಗಾಲ ಆವರಿಸಿದೆ.

        ಈಗಾಗಲೇ ಜನರು ಕುಡಿಯುವ ನೀರಿನ ತತ್ವಾರ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಸುಮ್ಮನೆ ಕಾಟಾಚಾರಕ್ಕೆ ಸಭೆ ಮಾಡುತ್ತಿದ್ದೇವಾ ಏನು ತಿಳಿದುಕೊಂಡಿದ್ದಾರೆ ನಿಮ್ಮ ಎಇಇ ನಮ್ಮ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯ ಚೆರ್ಚೆ ಮಾಡಲು ಆಗಮಿಸಿದ್ದರೆ ಸಾಮಾನ್ಯ ಸಭೆಗೆ ಎಇಇ ಹಾಗೂ ಇಂಜಿನಿಯರ್‍ಗಳು ಗೈರಾಗಿ ನಿಮ್ಮನು ಕಳಿಸಿದ್ದಾರೆ. ನಿಮಗೆ ಕ್ಷೇತ್ರದ ಸಮಸ್ಯೆ ಬಗ್ಗೆಹರಿಸಲು ಸಾದ್ಯವೇ ಎಂದು ಪ್ರಶ್ನಿಸಿ ನೀವು ಹೋಗಬಹುದು ಎಂದರು ಎಲ್ಲ ಸದಸ್ಯರು ದ್ವನಿ ಗೂಡಿಸಿದರು.

          ಸದಸ್ಯ ಕುಮಾರ್ ಮಾತನಾಡಿ ದಂಡಿನಶಿವರ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರ ಉಚಿತ ಅಕ್ಕಿ ಜೊತೆಗೆ ಶಬೀನಾ ಪೌಡರು, ಉಪ್ಪು, ಸೋಪು, ಗೋದಿ ಹಿಟ್ಟು ಮಾರಾಟ ಮಾಡಿ ಜನರಿಂದ ಬಲವಂತವಾಗಿ 70 ರೂಗಳನ್ನು ವಸೂಲಿ ಮಾಡುತ್ತಿದ್ಧಾರೆ ಎಂದು ಅಹಾರ ನಿರೀಕ್ಷಕ ಕಿರಣ್‍ಕುಮಾರ್‍ನ್ನು ಪ್ರಶ್ನಿಸಿದರು. ಇದಕ್ಕ ಉತ್ತರಿಸಿದ ಕಿರಣ್‍ಕುಮಾರ್ ಸಂಬಂದ ಪಟ್ಟ ನ್ಯಾಯಬೆಲೆ ಅಂಗಡಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಬರವಸೆ ನೀಡಿದರು.

        ಸದಸ್ಯ ರವಿ ಮಾತನಾಡಿ ಅಂಗನವಾಡಿ ಕಾರ್ಯಕರ್ತರು ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸದೆ ಯಾವಾಗಲು ಮೀಟಿಂಗ್, ತರಬೇತಿಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಮೊದಲು ಅಂಗನವಾಡಿಗಳಿಗೆ ಬೇಟಿ ನೀಡಿ ಪರಿಶೀಲಿಸಿ ಎಂದು ಸಿಡಿಪಿಓ ಪುಟ್ಟಸ್ವಾಮಿಗೆ ತಿಳಿಸಿದರು. ಪುಟ್ಟಸ್ವಾಮಿ ಮಾತನಾಡಿ ಮೀಟಿಂಗ್ ತರಬೇತಿಗಳು ಯಾವಾಗಲು ಇರುವುದಿಲ್ಲ ಕೆಲವು ಸಂದರ್ಬದಲ್ಲಿ ಕಚೇರಿ ಕೆಲಸದ ಮೇಲೆ ಬಂದಿರುತ್ತಾರೆ. ಇನ್ನು ಕೆಲವು ಅಂಗನವಾಡಿ ಕಾರ್ಯಕರ್ತರು ಸುಮ್ಮನೆ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ ಎಂದು ದೂರುಗಳು ಬಂದಿದ್ದು ಕೂಡಲೇ ಅಂಗನವಾಡಿಗಳಿಗೆ ಬೇಟಿ ನೀಡಿ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

      ಸರ್ಕಾರಿ ಶಾಲಾ ಶಿಕ್ಷಕರು ಸರಿಯಾಗಿ ಶಾಲೆಗಳಿಗೆ ತೆರಳುತ್ತಿಲ್ಲ ಬೆಳಿಗ್ಗೆ 10 ಗಂಟೆಯಾದರೂ ಪಟ್ಟಣದಲ್ಲಿರುತ್ತಾರೆ. ಕೆಲವು ಶಿಕ್ಷಕರು ಸಂಘದ ಅಧ್ಯಕ್ಷರುಗಳಾಗಿ ಶಾಲಾ ಸಮಯದಲ್ಲಿ ಶಿಕ್ಷಕರುಗಳು ಹಲವಾರು ಕಾರ್ಯಕ್ರಮಗಳಲ್ಲಿರುತ್ತಾರೆ. ಈಗಾಗಲೇ ಹಲವು ಸರ್ಕಾರಿ ಶಾಲೆಗಳು ಮುಚ್ಚಿವೆ. ಈ ರೀತಿಯಾದರೆ ಹೇಗೆ ಸರ್ಕಾರ ಸಂಬಳ ಕೊಡುವುದು ಶಿಕ್ಷಕರು ಪಾಠ ಮಾಡಲು ಎಂದು ಬಿಇಓ ರಂಗದಾಮಯ್ಯರನ್ನು ಉಪಾಧ್ಯಕ್ಷ ನಂಜೇಗೌಡ ಸೇರಿದಂತೆ ಸದಸ್ಯರು ಪ್ರಶ್ನಿಸಿದರು. ಬಿಇಓ ರಂಗದಾಮಯ್ಯ ಮಾತನಾಡಿ ನಾನು ಈಗ ತಾನೆ ಬಂದಿದ್ದು ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ಅಂತಹ ಶಿಕ್ಷಕರು ಕಂಡು ಬಂದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

        ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಛಾಗಿದ್ದು ರೈತರಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ ಲೋಡ್ ಶಡ್ಡಿಂಗ್ ಹೆಚ್ಚಾಗಿದೆ ಎಂದು ಬೆಸ್ಕಾಂ ಎಇಇ ಮಾರುತಿರನ್ನು ಸದಸ್ಯ ರವಿ ಪ್ರಶ್ನಿಸಿದರು. ತಾಲೂಕಿನ ದಂಡಿನಶಿವರ ಹೋಬಳಿ ಯಲದಬಾಗಿಯಲ್ಲಿ ಮಾಡಿರುವ ಸೋಲಾರ್ ಪ್ಲಾಂಟ್‍ನಿಂದ ತಾಲೂಕಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಸುಮಾರು 20 ಮ್ಯಾಗವ್ಯಾಟ್ ವಿದ್ಯುತ್ ಉತ್ಪಾದನೆಯಾದರು ನಮ್ಮ ತಾಲೂಕಿನ ರೈತರಿಗೆ ನೀಡದೆ ಬೇರೆಡೆಗೆ ಮಾರಾಟವಾಗುತ್ತಿದೆ ಎಂದು ಸದಸ್ಯರು ಆರೋಪಿಸಿ ನಮ್ಮ ತಾಲೂಕಿಗೆ ವಿದ್ಯುತ್ ಸಿಗುವಂತೆ ಯಾವ ರೀತಿ ಮಾಡಬೇಕು ಎಂದು ಹೇಳಿ ಸದಸ್ಯರು ಬೆಸ್ಕಾಂ ಎಇಇ ಮಾರುತಿಯನ್ನು ಒತ್ತಾಯಿಸಿದರು.

        ಎಇಇ ಮಾರುತಿ ನಮ್ಮ ಇಲಾಖೆ ವ್ಯಾಪ್ತಿಗೆ ಬರಲ್ಲ ಎಂದು ತಿಳಿಸಿ ಸುಮ್ಮನಾದರು. ಕೆಲವು ಸದಸ್ಯರ ಹಾಗು ಅಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು.ಸಭೆಯಲ್ಲಿ ಉಪಾಧ್ಯಕ್ಷ ನಂಜೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಬೈರಪ್ಪ, ಸದಸ್ಯರಾದ ಮಂಜುನಾಥ್, ಹೇಮಾವತಿ ಶಿವಾನಂದ್, ತೇಜಾವತಿ ನಾಗೇಶ್, ಕೆಂಪಮ್ಮಶಿವಣ್ಣ, ಅನುಸೂಯಮ್ಮ, ಕೆಂಪಮ್ಮರವಿ, ಇ.ಓ ಗಂಗಾಧರನ್, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link