ವಾಲ್ಮೀಕಿ ಜಾತ್ರೆ…!!

ಕೊರಟಗೆರೆ

       ಪ್ರಪ್ರಥಮ ಬಾರಿಗೆ ವೈಭವಯುತವಾಗಿ ಮಹರ್ಷಿ ವಾಲ್ಮೀಕಿಗುರುಪೀಠದಲ್ಲಿ ಹಮ್ಮಿಕೊಂಡಿರುವ ಮಹರ್ಷಿ ವಾಲ್ಮೀಕಿಜಾತ್ರಾ ಮಹೋತ್ಸವಕ್ಕೆ ಕೊರಟಗೆರೆ ತಾಲ್ಲೂಕಿನಿಂದ ಅತೀ ಹೆಚ್ಚು ಜನ ಸಂಖ್ಯೆಯಲ್ಲಿ ಆಗಮಿಸಿ ದೇಣಿಗೆ ನೀಡಲು ಸಕಲ ಸಿದ್ದತೆ ನಡೆಸಲಾಗುತ್ತಿದೆ ಎಂದು ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಿತಿಯ ತಾಲೂಕು ಅದ್ಯಕ್ಷ ಕೆ.ಆರ್.ಓಬಳರಾಜು ತಿಳಿಸಿದರು.

      ಪಟ್ಟಣದ ಬೇಡರ ಕಣ್ಣಪ್ಪ ದೇವಾಲಯದ ಆವರಣದಲ್ಲಿ ವಾಲ್ಮೀಕಿ ಸಮುದಾಯದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಾ ವಾಲ್ಮೀಕಿ ಗುರುಪೀಠದಲ್ಲಿ ಇದೇ ಪ್ರಥಮಬಾರಿಗೆ ಹಮ್ಮಿಕೊಳ್ಳಲಾಗುತ್ತಿರುವ ಜಾತ್ರಾ ಮಹೋತ್ಸವಕ್ಕೆ ತಾಲ್ಲೂಕಿನಿಂದ ಅತೀ ಹೆಚ್ಚು ಜನಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು.

       ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದ ಶ್ರೀಮಹರ್ಷಿ ವಾಲ್ಮೀಕಿ ಗುರು ಪೀಠದಲ್ಲಿ ಫೆ.8 ಮತ್ತು ಫೆ.9ರಂದು ನಡೆಯುವ ಪ್ರಥಮ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ, ಶ್ರೀಮಠದ 21ನೇ ವರ್ಷದ ವಾರ್ಷಿಕೋತ್ಸವ ಮತ್ತು ಜಗದ್ಗುರು ಶ್ರೀವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಯ 12ನೇ ವರ್ಷದ ಪಟ್ಟಾಧೀಕಾರ ಮಹೋತ್ಸವದ ಬೃಹತ್‍ ಕಾರ್ಯಕ್ರಮವು ಅದ್ದೂರಿಯಾಗಿ ನಡೆಸಲು ಸಿದ್ದತೆ ನಡೆದಿದ್ದು ಈ ಕಾರ್ಯಕ್ರಮಕ್ಕೆ ಸಮುದಾಯದವರು ಹೆಚ್ಚಿನ ಸಹಕಾರ ನೀಡಬೇಕು ಎಂದರು.

       ಜಾತ್ರಾ ಮಹೋತ್ಸವದ ಸಮಾರಂಭಕ್ಕೆ ರಾಜ್ಯಾದ್ಯಾಂತ ಸುಮಾರು 6ಲಕ್ಷಕ್ಕೂ ಹೆಚ್ಚು ವಾಲ್ಮೀಕಿ ಸಮುದಾಯದ ಬಂಧುಗಳು ಭಾಗಹಿಸುತ್ತಾರೆ . ಕಾರ್ಯಕ್ರಮಕ್ಕೆ ಕೊರಟಗೆರೆ ಕ್ಷೇತ್ರದ ನಾಯಕ ಸಮುದಾಯದ ಪ್ರತಿಯೊಂದು ಗ್ರಾಮದ ಮುಖಂಡರು ದೇಣಿಗೆ ಸಂಗ್ರಹಕ್ಕಾಗಿ ಸಹಕಾರ ನೀಡಬೇಕು . ದೇಣಿಗೆಯನ್ನು ಹಣ, ದವಸ, ಧಾನ್ಯದರೂಪದಲ್ಲಿ ನೀಡಬಹುದಾಗಿದೆ ಎಂದು ತಿಳಿಸಿದರು.

        ಕೊರಟಗೆರೆ ನಾಯಕ ಜನಾಂಗದ ಅಧ್ಯಕ್ಷ ಕೆ.ಎನ್.ಲಕ್ಷ್ಮೀನಾರಾಯಣ ಮಾತನಾಡಿ ರಾಜನಹಳ್ಳಿ ಗ್ರಾಮದ ಮಠದಲ್ಲಿ ನಡೆಯುವ ಪ್ರಥಮ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಕೊರಟಗೆರೆ ತಾಲ್ಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ನಾಯಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು . ಗುರುಪೀಠದಿಂದ ಇದೇ ಪ್ರಥಮಬಾರಿಗೆ ಆಯೋಜಿಸಿರುವ ಜಾತ್ರಾ ಮಹೋತ್ಸವಕ್ಕೆ ಪ್ರತಿಯೊಬ್ಬರು ಸ್ವಯಂ ಪ್ರೆರಿತವಾಗಿ ದೇಣಿಗೆ ಸಂಗ್ರಹಿಸುವುದರ ಜೊತೆಗೆ ಪ್ರತಿ ಗ್ರಾಮದಿಂದಲೂ ಸಮುದಾಯದವರು ಹೆಚ್ಚಿನ ಜನಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

          ತಾಪಂ ಮಾಜಿ ಅದ್ಯಕ್ಷೆ ಕವಿತಾ ಮಾತನಾಡಿ ವಾಲ್ಮೀಕಿ ಸಮುದಾಯದ ಪವಿತ್ರ ಕ್ಷೇತ್ರವಾದ ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಆಯೋಜನೆಗೊಳಿಸಿರುವ ಜಾತ್ರಾ ಮಹೋತ್ಸವದಲ್ಲಿ ಸಮುದಾಯದ ಶಕ್ತಿಯನ್ನು ತೋರಿಸುವಂತಾಗಬೇಕು ನಮ್ಮ ಸಮುದಾಯ ಹಿಂದುಗಳ ಪವಿತ್ರ ಗ್ರಂಥವಾದ ರಾಮಾಯಣ ಗ್ರಂಥವನ್ನುಕೊಡುಗೆಯಾಗಿ ನೀಡಿದಂತ ಹೆಗ್ಗಳಿಕೆ ನಮ್ಮ ಸಮುದಾಯಕ್ಕಿದೆ ಎಂದರು.

        ಪತ್ರಿಕಾಗೋಷ್ಟಿಯಲ್ಲಿ ಪಪಂ ಸದಸ್ಯರಾದ ಪುಟ್ಟನರಸಯ್ಯ, ಮಾಜಿ ಉಪಾಧ್ಯಕ್ಷ ಮಂಜುನಾಥ, ಮಾಜಿ ಎಪಿಎಂಸಿ ಸದಸ್ಯರಂಗರಾಜು, ಮುಖಂಡರಾದ ಗಣೇಶ್, ರಮೇಶ್, ಕಾರುಮಹೇಶ್, ಸಿದ್ದಲಿಂಗಪ್ಪ, ಗಂಗಾಧರಯ್ಯ, ನರಸಪ್ಪ, ಗಂಗರಾಜು, ಅಂಜಿನಪ್ಪ, ರಾಮಮೂರ್ತಿ, ಜಯರಾಜು, ಕೃಷ್ಣಪ್ಪ, ಧರ್ಮೆಂದ್ರ, ದೀಪಕ್, ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link
Powered by Social Snap