ತೊಟ್ಟಿಗೆಡಿಕ್ಕಿ ಹೊಡೆದು ಮೃತಪಟ್ಟ ಬೈಕ್ ಸವಾರ

ಕೊರಟಗೆರೆ:-

        ದ್ವಿಚಕ್ರ ವಾಹನ ಸವಾರನೋರ್ವ ನೀರು ಹರಿಯುವ ಹಳ್ಳಕ್ಕೆ ಹೊಂದಿಕೊಂಡಿರುವ ತೊಟ್ಟಿಗೆಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿಜರುಗಿದೆ

        ತಾಲೂಕಿನ ವಡ್ಡಗೆರೆ-ಕೊರಟಗೆರೆ ರಸ್ತೆಯ ಹುಂಜನಹಳ್ಳದ ಬಳಿ ಈ ದುರ್ಘಟನೆಜರುಗಿದ್ದು, ಮಡಕಸಿರಾ ತಾಲೂಕಿನ ಮದ್ದಲಕುಂಟಗ್ರಾಮದ ವಾಸಿಯಾದ ತಿಪ್ಪೆಸ್ವಾಮಿಯ ಮಗ ಆನಂದಕುಮಾರ್(27) ಮೃತದುರ್ದೈವಿಯಾಗಿದ್ದಾನೆ, ಮೃತಯುವಕಅತೀ ವೇಗ ಚಾಲನೆಯಿಂದಆಯಾತಪ್ಪಿ ಹುಂಜನಹಳ್ಳಕ್ಕೆ ಹೊಂದಿಕೊಂಡ ನೀರಿನ ತೊಟ್ಟಿಗೆಡಿಕ್ಕಿ ಹೊಡೆದುಮೃತ ಪಟ್ಟಿರಬಹುದುಎನ್ನಲಾಗಿದೆ.

        ಸೋಮವಾರ ವಿಜೃಂಭಣೆಯಿಂದ ಜರುಗಿದ ವಡ್ಡಗೆರೆ ವೀರನಾಗಮ್ಮ ದೇವಿಯ ರಾಜಗೋಪುರ ಪ್ರತಿಷ್ಟಾಪನೆ ಹಾಗೂ ದೇವರಕಾರ್ಯಕ್ರಮಕ್ಕೆ ಬಂದ ಮೃತ ಆನಂದ್ ವಡ್ಡಗೆರೆ ಗ್ರಾಮದಿಂದ ಬೆಂಗಳೂರಿಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ .ಈ ಸಂಭಂದ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಮುನಿರಾಜು ಹಾಗೂಪಿಎಸೈ ಮಂಜುನಾಥ ಭೇಟಿನೀಡಿತನಿಖೆ ನಡೆಸುತ್ತಿದ್ದಾರೆಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link