ಚಿತ್ರದುರ್ಗ
ಬಾಲ್ಯ ವಿವಾಹ ದೇಹಕ್ಕೆ ಅಷ್ಟೇ ಮಾರಕವಾಗದೆ, ದೇಶಕ್ಕೂ ಸಹಾ ಮಾರಕವಾಗಿದೆ, ಬಾಲ್ಯ ವಿವಾಹದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ವಸ್ತ್ರಮಠ್ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆ ಮತ್ತು ಪೋಲಿಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ವಕೀಲರ ಭವನದಲ್ಲಿ ಶುಕ್ರವಾರ ಬಾಲ್ಯ ವಿವಾಹ ನಿಷ್ಢಧ ಕಾಯ್ದೆ-2006, ಬಾಲ್ಯ ವಿವಾಹ ನಿಷೇಧ ಕಾಯ್ದೆ-2016 ಮತ್ತುಯ ಬಾಲ್ಯ ವಿವಾಹ ನಿಷೇಧ ಕರ್ನಾಟಕ ನಿಯಾಮಳಿ 2014ರ ಕುರಿತ ನ್ಯಾಯಾಧೀಶರುಗಳಿಗೆ ಹಾಗೂ ತಾಲ್ಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಗಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ಸಂವಾದ ಮತ್ತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಹಲವೆಡೆಗಳಲ್ಲಿ ಇನ್ನೂ ಮೂಢನಂಬಿಕೆ, ಆಂಧಶ್ರದ್ದೆ, ಬಡತನ ಅನಕ್ಷರತೆ ಇದೆ ಇದರಿಂದಲೇ ದೇಶಕ್ಕೆ ಮಾರಕವಾಗುವ ಕಾರ್ಯಗಳು ನಡೆಯುತ್ತವೆ, ಇದರಲ್ಲಿ ಬಾಲ್ಯ ವಿವಾಹವೂ ಸಹಾ ಹೆಣ್ಣು ಮಗು ಇನ್ನು ಅಪ್ರಾಪ್ತ ವಯಸ್ಸಿನಲ್ಲಿಯೇ ಮದುವೆ ಮಾಡಿ ಪೋಷಕರು ಜವಾಬ್ದಾರಿಯನ್ನು ಕಳೆದು ಕೊಳ್ಳಬಹುದು ಆದರೆ ಮುಂದೆ ಆಗ ಬಾಲಕಿ ಜವಾಬ್ದಾರಿಯನ್ನು ಹೋರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ಅಕೆಯ ದೇಹದ ಮೇಲೆ ಪರಿಣಾಮ ಬೀರಲಿದೆ, ಅಪೌಷ್ಟಿಕತೆಯಿಂದ ಮಕ್ಕಳ ಜನನವಾಗಿ ಅದು ದೇಶಕ್ಕೆ ಮಾರಕವಾಗಲಿದೆ, ದೇಶವೂ ಸಹಾ ಬಲಿಷ್ಠವಾಗಲು ಆಗುವುದಿಲ್ಲ, ಬಾಲ್ಯ ವಿವಾಹವನ್ನು ತಡೆಯುವುದು ಬರೀ ಸರ್ಕಾರ ಮತ್ತು ಪೋಲಿಸ್ ಸೇರಿದಂತೆ ಇತರೆ ಇಲಾಖೆಗಳ: ಕೆಲಸ ಎಂದು ಮಾತ್ರ ತಿಳಿಯದೆ ನಿಮ್ಮ ಸುತ್ತಾ ಮುತ್ತಲ್ಲಿನ ಪ್ರದೇಶದಲ್ಲಿ ಇಂತಹ ಮದುವೆಗಳು ತಡೆಯುವುದು ಎಲ್ಲರ ಕೆಲಸವಾಗಿದೆ ನ್ಯಾಯಾಧೀಶರು ಹೇಳಿದರು.
ಮಜನೆಯಲ್ಲಿ ಹಿರಿಯರು ಇದ್ದಾರೆ ಅವರ ಆಸೆಯನ್ನು ಪೂರ್ಣ ಮಾಡಬೇಕೆಂದು ಕೆಲವರು ತಮ್ಮ ಅಪ್ರಾಪ್ತ ಮಗಳಿಗೆ ಮದುವೆ ಮಾಡುತ್ತಾರೆ ಇದರಿಂದ ಮಗಳಿಗೆ ತೊಂದರೆಯಾಗುತ್ತದೆ ಎಂಬುದನ್ನು ಅವರು ಆಲೋಚನೆ ಮಾಡುವುದಿಲ್ಲ, ಸರ್ಕಾರವೂ ಸಹಾ ಮದುವೆಗೆ ಮಯಸ್ಸನ್ನು ನಿಗಧಿ ಮಾಡಿದೆ ಅಲ್ಲಿಗೆ ಬಂದಾಗ ಮಾತ್ರ ಮದುವೆ ಮಾಡಬೇಕಿದೆ, ಒಳ್ಳೇಯ ಗಂಡು ಒಳ್ಳೇಯ ಮನೆತನ ಎಂದು ಕೆಲವರು ಮಗಳಿಗೆ ಮದುವೆಯನ್ನು ವಯಸ್ಸಿಲ್ಲದಿದ್ದರೂ ಸಹಾ ಮಾಡುತ್ತಾರೆ ಇದು ಕಾನೂನು ಪ್ರಕಾರ ತಪ್ಪು ಈ ರೀತಿಯ ಮದುವೆಗಳಾಗುತ್ತಿದ್ದರೆ ಮಾಹಿತಿ ನೀಡಿದರೆ ಅದನ್ನು ತಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಅನಕ್ಷರತೆ, ಬಡತನ ಸೇರಿದಂತೆ ಬಾಲ್ಯ ವಿವಾಹಗಳು ನಡೆಯುತ್ತವೆ, ಇದರ ಬಗೆಗ ಎಲ್ಲರು ಗಮನ ನೀಡಬೇಕಿದೆ, ಇದರ ನಿವಾರಣೆ ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಂವಾದ ಸಮಯದಲ್ಲಿ ನ್ಯಾಯವಾದಿ ಶ್ರೀಮತಿ ಡಿ.ಕೆ.ಶೀಲರವರು ಮಾತನಾಡಿ ಸರ್ಕಾರ ಬಾಲ್ಯ ವಿವಾಹ ತಡೆಯಲು ಸಮಿತಿಗಳನ್ನು ರಚನೆ ಮಾಡಿದ್ದರೂ ಸಹಾ ಅದು ಸರಿಯಾಗಿ ಕಾಯ್ ನಿರ್ವಹಿಸುತ್ತಿಲ್ಲ ಪೋಲಿಸರು ತಮ್ಮ ಪಾಲಿನ ಕರ್ತವ್ಯವನ್ನು ಮರೆತ್ತಿದ್ದಾರೆ ಇದುವರೆವಿಗೂ ಬಾಲ್ಯ ವಿವಾಹದ ಎಷ್ಟು ಪ್ರಕರಣಗಳನ್ನು ದಾಖಲಿಸಿದ್ದಾರೆ, ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆಯವರು ಎಷ್ಟ ಕಡೆಯಲ್ಲಿ ಧಾಳಿ ಮಾಡಿದ್ದಾರೆ ಎಮಬ ಮಾಹಿತಿ ಇಲ್ಲ ಅಲ್ಲದೆ ಇದರ ನಿವಾರಣೆ ಮತ್ತು ಪರಶೀಲನೆಗಾಗಿ ಇರುವ ಸಮಿತಿಯೂ ಸಹಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿಸಿದರು.
ಪೋಲಿಸ್ ಆಧಿಕಾರಿ ಫೈಜುಲ್ಲಾ ಮಾಹಿತಿ ನೀಡಿ ಇದುವರೆವಿಗೂ ನಮಗೆ ಹೆಚ್ಚಿನ ಅಧಿಕಾರ ಇರಲಿಲ್ಲ ಈಗ ಕಾಯ್ದೆಗೆ ತಿದ್ದುಪಡಿಯನ್ನು ಮಾಡಿರುವುದರಿಂದ ಅಧಿಕಾರ ಸಿಕ್ಕಿದೆ ಮುಂದಿನ ದಿನದಲ್ಲಿ ಇಂತಹ ಪ್ರಕಟರಣಗಳ ಬಗ್ಗೆ ಗಮನ ನೀಡಲಾಗುವುದು ಎಂದು ಉತ್ತರಿಸಿದರೆ ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆ ಅಧಿಕಾರಿ ರಾಜಾನಾಯ್ಕ್ ಮಾತನಾಡಿ ಇದರ ಬಗ್ಗೆ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ಸಮಿತಿಗಳು ಇದೆ ಆದರೆ ಅವುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಇದರ ಬಗ್ಗೆ ಮುಂದಿನ ದಿನದಲ್ಲಿ ನಿಗಾವಹಿಸಲಾಗುವುದು ಎಂದು ಹೇಳೀದರು.
ಈ ಸಂದರ್ಭದಲ್ಲಿ ಚಿಕ್ಕವಯಸ್ಸಿನಲ್ಲಿಯೇ ಮದುವೆ ಮಾಡಿದ್ದಾರೆ ಎಂದು ಓರ್ವ ಬಾಲಕಿ ನ್ಯಾಯಾಧೀಶರ ಮುಂಧೆ ತಮ್ಮ ಅಳಲನ್ನು ತೋಡಿಕೊಂಡಾಗ ನ್ಯಾಯಾಧೀಶರಾದ ವಸ್ತ್ರಮಠ ಇದರ ಬಗ್ಗೆ ಪರೀಶಿಲಿಸಿ ಪ್ರಕರಣವನ್ನು ದಾಖಲಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿಂಡಲಕೂಪ್ಪ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶೀ ಶಿವುಯದವ್ ಭಾಗವಹಿಸಿದ್ದರು, ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹ ನಿಷ್ಢಧ ಕಾಯ್ದೆ-2006, ಬಾಲ್ಯ ವಿವಾಹ ನಿಷೇಧ ಕಾಯ್ದೆ-2016 ಮತ್ತುಯ ಬಾಲ್ಯ ವಿವಾಹ ನಿಷೇಧ ಕರ್ನಾಟಕ ನಿಯಾಮಳಿ 2014ರ ಕುರಿತು ಉಪನ್ಯಾಸ ನೀಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ