ಚಿತ್ರದುರ್ಗ
ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ನಗರದಲ್ಲಿ ಶನಿವಾರ ಸಾಮಾಜಿಕಸಂಘರ್ಷ ಸಮಿತಿವತಿಯಿಂದ ಪ್ರತಿಭಟನೆಯನ್ನು ನಡೆಸಿ, ದಲಿತರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಯಿತು.
ನಗರದ ಅಂಬೇಡ್ಕರ್ ಪ್ರತಿಮೆಯಿಂದ ಜಿಲ್ಲಾಧಿಕಾರಿಗಳ,ಕಛೇರಿಯವರೆಗೂ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಸಮಿತಿಯ ಪದಾಧಿಕಾರಿಗಳು ದಲಿತರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.
ಇಂದಿನ ದಿನಮಾನದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ, ಈಗಲೂ ಸಹಾ ನಮ್ಮನ್ನು ಕೆಲವು ಜಾತಿಯವರು ಸರಿಯಾಗಿ ನೋಡದೇ ಇನ್ನು ಹಳೆಯ ಪದ್ದತಿಯಿಂತೆ ನೋಡಲಾಗುತ್ತಿದೆ, ಮಾದಿಗ ಜಾತಿಯವರನ್ನು ಕೀಳಾಗ ಕಾಣಲಾಗುತ್ತಿದೆ, ಹಿಂದು ಒಂದು ಎಲ್ಲರು ಹೇಳುತ್ತಾರೆ ಆದರೆ ಅದು ಕಾರ್ಯಗತವಾಗಿಲ್ಲ ಬರೀ ಮಾತಿನಲ್ಲಿ ಹಾಗೂ ಭಾಷಣದಲ್ಲಿ ಮಾತ್ರ ಇದೆ.ಇಂದಿನ ಅಧುನಿಕ ತಂತ್ರಜ್ಞಾನದ ಕಾಲದಲ್ಲಿಯೂ ಸಹಾ ಜಾತಿಯ ಭೂತಕ್ಕೆ ಬಲಿಯಾಗುತ್ತಿರುವುದು ವಿಷಾಧ ಸಂಗತಿಯಾಗಿದೆ. ದಲಿತ ಎನ್ನುವ ಪದ ಬೇರೆಯವರನ್ನು ದಾರಿ ತಪ್ಪಿಸುತ್ತಿದೆ. ಇದರಿಂದ ಹೊರತಾಗಿ ಎಲ್ಲರು ಸಹಾ ಒಂದು ಎಂಬ ಮನೋಭಾವನೆಯಿಂದ ನಡೆಯಬೇಕಿದೆ ಎಂದು ತಿಳಿಸಿದರು.
ರಾಜ್ಯದ ಬಹುತೇಕ ಗ್ರಾಮಗಳಲ್ಲಿ ಇನ್ನು ಸಹಾ ಅಸ್ಪøಶ್ಯತೆಯ ವಾಸನೆ ಇದೆ ಆದರೆ ಇದರ ಬಗ್ಗೆ ಸಕಾರ ಗಮನ ನೀಡುತ್ತಿಲ್ಲ, ಇತ್ತೀಚೆಗೆ ಹಾವೇರಿ ಮತ್ತು ಯಾದಗಿರಿಯಲ್ಲಿ ದಲಿತರ ಮೇಲೆಹಲ್ಲೆ ನಡೆದಿದೆ. ಯಾದಗಿರಿಯಲ್ಲಿ ದಲಿತ ಯುವಕನೋರ್ವ ಪ್ರಶ್ನಿಸಿದ್ದಕ್ಕೆ ಕುರುಬ ಜನಾಂಗದವರು ಹಲ್ಲೆ ಮಾಡಿದ್ದಾರೆ. ಇದ್ದಲ್ಲದೆ ದಲಿತರು ಗ್ರಾಮವನ್ನು ಬಿಟ್ಟು ಹೋಗುವಂತೆ ಆದೇಶಿಸಿದ್ದಾರೆ. ಇಲ್ಲಿಗೆ ಯಾವ ಪ್ರಗತಿಪರರು ಸಹಾ ಭೇಟ ನೀಡಿಲ್ಲ, ಇದ್ದಲ್ಲದೆ ಜನಾಂಗದವರು ಸಹ ಇದರ ಬಗ್ಗೆ ಮಾತನಾಡದಿರುವುದು ದುರಂತ ಎಂದು ಹೇಳೀದರು.
ದಲಿತರ ಮೇಲೆ ದೌರ್ಜನ್ಯವನ್ನು ನಡೆಸುವವರನ್ನು ದೇಶ ದ್ರೋಹಿಗಳೆಂದು ಪರಿಗಣಿಸಬೇಕು, ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ಸೂಕ್ತವಾದ ಭದ್ರತೆಯನ್ನು ಒದಗಿಸಬೇಕು, ಕುಟುಂಬಕ್ಕೆ ಸರ್ಕಾರಿ ನೌಕರಿಯನ್ನು ನೀಡಬೇಕು,ಚಿತ್ರದುರ್ಗ ತಾಲ್ಲೂಕಿನ ಮುಜರಾಯಿ ಇಲಾಖೆಯಲ್ಲಿರುವ ದೇವಾಲಯವಾಗಿರುವ ಕಣಿವೆ ಮಾರಮ್ಮ ದೇವಾಲಯದಲ್ಲಿ ದಲಿತರ ಪ್ರವೇಶ ನಿರಾಕರಿಸಲಾಗಿದೆ ಇದನ್ನು ತಡೆಯಬೇಕೆಂದು ಆಗ್ರಹಿಸಲಾಯಿತು.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕುಮಾರ್, ಕಾರ್ಯದರ್ಶೀ ಚಿಕ್ಕಣ್ಣ ಮಾರಪ್ಪ, ತಿಪ್ಪೇಸ್ವಾಮಿ,ಕರಿಯಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








