ಬಡವರ ಸೇವೆ ಮಾಡುವವರ ಮೇಲೆ ದೇವರ ಕೃಪೆ

ದಾವಣಗೆರೆ:

       ಬಡವರ ಸೇವೆ ಯಾರು ಮಾಡುತ್ತಾರೊ, ಅವರ ಮೇಲೆ ದೇವರ ಕೃಪೆ ಇರಲಿದೆ ಎಂದು ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಸೈಯದ್ ಸೈಫುಲ್ಲಾ ಅಭಿಪ್ರಾಯಪಟ್ಟರು.

          ಇಲ್ಲಿನ ಭಾಷಾ ನಗರದ ಮಿಲ್ಲತ್ ವಿದ್ಯಾ ಮತ್ತು ಕಲ್ಯಾಣ ಸಂಸ್ಥೆಯಲ್ಲಿ ಬೆಂಗಳೂರಿನಲ್ಲಿ ನಿಧನರಾದ ಡಾ.ಶಫಿ ಅಹ್ಮದ್ ರವರ ಸಂತಾಪ ಸೂಚಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಿವಂಗತ ನಿಜಲಿಂಗಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಡಾ.ಶಫಿ ಅಹ್ಮದ್ ದಾವಣಗೆರೆಯ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಹೊಂದಿ ನಂತರ ದಾವಣಗೆರೆಯಲ್ಲಿ ಕ್ಲಿನಿಕ್ ಪ್ರಾರಂಭಿಸಿ ಜನ ಸೇವೆ ಎಂದು ಸ್ಮರಿಸಿದರು.

         ಶಫಿ ಅಹ್ಮದ್ ಅಲ್ಪಸಂಖ್ಯಾತರ ಪರವಾಗಿ ದಾಣವಗೆರೆಯಲ್ಲಿ ಸಮಾಜ ಸೇವೆಯನ್ನು ಪ್ರಾರಂಭಿಸಿದ ಮೊದಲಿಗರಾಗಿದ್ದಾರೆ. ಆಗಿನ ಕಾಲದಲ್ಲಿ ಬಡವರ ಸೇವೆ ಮಾಡುತ್ತಾ ಸಮಾಜದ ಏಳಿಗೆಗಾಗಿ, ಬಾರ್ಲೈನ್ ರಸ್ತೆಯಲ್ಲಿ ಉಸ್ಮಾನಿಯಾ ಸೂಸೈಟಿಯನ್ನು ಪ್ರಾರಂಭಿಸಿ, ಇದರ ಆಡಿಯಲ್ಲಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದ್ದರು ಹಾಗೂ ದಾವಣಗೆರೆ ಮುಸ್ಲಿಂ ಆಸೋಷಿಯೇಷನ್ ಫೌಂಡೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದೇವರು ಡಾ.ಶಫಿ ಅಹ್ಮದ್ ಅವರ ಆತ್ಮಕ್ಕೆ ಶಾಂತಿ ನೀಡಲಿಎಂದು ಪ್ರಾರ್ಥಿಸಿದರು .

       ಪ್ರಾಚಾರ್ಯ ಡಾ.ದಾವುದ್ ಮೂಹಸಿನ್ ಸ್ವಾಗತಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥ ಯುಸೂಫ್ ಪಾಷ, ಪ್ರಾರ್ಥಿಸಿದರು. ಜಾಕೀರ್ ಹುಸೇನ್ ವಂದಿಸಿದರು.

        ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಸೈಯದ್ ಅಲಿ, ಮಿಲ್ಲತ್ ಐ.ಟಿ.ಐ ನ ಪ್ರಾಚಾರ್ಯ ಮೋಹ್ಮದ್ ಜಬೀವುಲ್ಲಾ, ಉಪನ್ಯಾಸಕ ಹೇಮರೆಡ್ಡಿ, ಸೈಯದ್ ಖಾಲಿಖ್, ರಹಮಾತ್ ವುಲ್ಲಾ ಮತ್ತಿತರರು ಉಪಸ್ಥಿತರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link