ತುರುವೇಕೆರೆ:
ವೇಗವಾಗಿ ಬಂದ ಇನೋವಾ ಕಾರೊಂದು ಚಲಿಸುತ್ತಿದ್ದ ಬೈಕ್‍ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕೊನಹಳ್ಳಿ ಬಳಿ ಬುಧವಾರ ಸಂಜೆ 4 ರ ವೇಳೆಯಲ್ಲಿ ನೆಡೆದಿದೆ.
ಮೃತದುರ್ದೈವಿ ತಾಲೂಕಿನ ಮಲ್ಲದೇವನಹಳ್ಳಿ ರಾಜಣ್ಣ (50) ಎಂದು ಗುರುತಿಸಲಾಗಿದ್ದು. ಈತನು ತುರುವೇಕೆರೆಯಿಂದ ತನ್ನ ದ್ವಿಚಕ್ರ ವಾಹನದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ತಿಪಟೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಇನೋವಾ ಕಾರು (ಕೆ.ಎ.51ಎಂ.ಎಪ್-36) ವೇಗವಾಗಿ ಹಿಂದಿನಿಂದ ಬಂದು ಬೈಕ್‍ಗೆ ಗುದ್ದಿದ ಪರಿಣಾಮ ಬೈಕ್ ಸವಾರ ರಾಜಣ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸಿಪಿಐ ಸಲೀಂ ಅಹಮದ್ ಹಾಗು ಪಟ್ಟಣ ಪೋಲೀಸ್ ಠಾಣೆ ಪಿಎಸ್‍ಐ ರಾಜು ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ