ಬೆಂಗಳೂರು
ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಕೃಷಿ ಮೇಳ ಇದೇ 18 ರಿಂದ 20ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿದೆ.ಸಾವಯವ ಉತ್ಪನ್ನ ಬೆಳೆಯುವ ರೈತರು ಮತ್ತು ಖರೀದಿದಾರರು ಭಾಗವಹಿಸಿ ನೇರವಾಗಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಈ ಮೇಳದಲ್ಲಿ 200 ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ ಸಾವಯವ ಕೃಷಿಕರು, ಖರೀದಿದಾರರು ಬೆಳೆಗಾರರು, ಮಾರಾಟಗಾರರು ಮತ್ತು ಅನೇಕ ವಿದೇಶಿ ಕಂಪನಿಗಳು ಈ ಉತ್ಸವದಲ್ಲಿ ಭಾಗಿಯಾಗಲಿದೆ. ಮುಂದಿನ ತಲೆಮಾರಿಗೆ ಸ್ಮಾರ್ಟ್ ಫುಡ್ ಮೂಲವಾಗಿ ಕರ್ನಾಟಕ ಹೊರಹೊಮ್ಮಲಿದೆ. ಹೊರ ರಾಜ್ಯಗಳು ಈ ಮೇಳದಲ್ಲಿ ಮಳಿಗೆಗಳನ್ನು ತೆರೆಯಲಿವೆ.ಕರ್ನಾಟಕ ಸಿರಿಧಾನ್ಯ, ಸಾವಯವ ಕೃಷಿಯನ್ನು ಉತ್ತೇಜಿಸಿದ್ದು, ಬೆಂಗಳೂರು ದೇಶದ ಪ್ರಮುಖ ಸಿರಿಧಾನ್ಯ ಉತ್ಪನ್ನಗಳ ಮಾರುಕಟ್ಟೆಯಾಗಿ ರೂಪುಗೊಳ್ಳುತ್ತಿದೆ. ಅನೇಕ ವಿದೇಶಿ ಕಂಪನಿಗಳು ಈ ಮೇಳದಲ್ಲಿ ಭಾಗಿಯಾಗಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ