ಕಡತ ವಿಲೇವಾರಿ ಸಪ್ತಾಹ

ಬೆಂಗಳೂರು

       ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದಇತ್ಯರ್ಥವಾಗದೆ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡುವಉದ್ದೇಶದಿಂದ ನವೆಂಬರ್ 12ರಿಂದ 18ರವರೆಗೆ ಕಂದಾಯಇಲಾಖೆಯಲ್ಲಿ `ಕಡತ ವಿಲೇವಾರಿ ಸಪ್ತಾಹ’ ಆಚರಿಸಲಾಗುವುದು ಎಂದು ಕಂದಾಯ ಮತ್ತುಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆಯವರು ಶುಕ್ರವಾರ ತಿಳಿಸಿದ್ದಾರೆ.

        ಕಂದಾಯ ಇಲಾಖೆಯಲ್ಲಿ ಬಹಳಷ್ಟು ಕಡತಗಳು ನಿಗದಿತ ಅವಧಿಯಲ್ಲಿ ವಿಲೇವಾರಿಯಾಗದೆ ಇರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಪ್ತಾಹವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಚಿವರು ಸ್ಪಡ್ಟಪಡಿಸಿದ್ದಾರೆ.

        “ಈ ಅವಧಿಯಲ್ಲಿ ಸಾಮಾನ್ಯ ಕಡತಗಳ ಜತೆಗೆ ಸಮಸ್ಯಾತ್ಮಕ ಕಡತಗಳನ್ನು ಕೂಡ ವಿಲೇವಾರಿ ಮಾಡಲಾಗುವುದು. ಕಡತಗಳನ್ನು ಯಾವರೀತಿ ವಿಲೇವಾರಿ ಮಾಡಬೇಕೆಂಬ ಬಗ್ಗೆ ಪ್ರಾದೇಶಿಕ ಆಯುಕ್ತರು, ಇಲಾಖಾ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗಳು ತಮ್ಮಅಧೀನ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ಮಾಡಲು ಸೂಚಿಸಲಾಗಿದೆ,” ಎಂದು ಸಚಿವದೇಶಪಾಂಡೆ ವಿವರಿಸಿದ್ದಾರೆ.

          ಸಪ್ತಾಹದಕೊನೆಯ ದಿನವಾದ ನ.18ರಂದು ಸಂಬಂಧಿಸಿದ ಎಲ್ಲ ಅಧಿಕಾರಿಗಳೂ ಸಪ್ತಾಹವು ಆರಂಭವಾದ ದಿನವಾದ ನ.12ರಂದು ಬಾಕಿ ಇದ್ದ ಕಡತಗಳೆಷ್ಟು, ಸಪ್ತಾಹದಅವಧಿಯಲ್ಲಿತಮ್ಮ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಿರುವ ಕಡತಗಳೆಷ್ಟು ಮತ್ತು ಸಪ್ತಾಹದಕೊನೆಯ ಹೊತ್ತಿಗೆಇನ್ನೂ ಬಾಕಿ ಇರುವ ಕಡತಗಳೆಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಕಡ್ಡಾಯವಾಗಿ ಕಳುಹಿಸಬೇಕು ಎಂದು ದೇಶಪಾಂಡೆ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link