ಬರಗೂರು
ಮಹರ್ಷಿ ವಾಲ್ಮೀಕಿರವರ ಧ್ಯೇಯೋದ್ದೇಶಗಳನ್ನು ತಿಳಿದುಕೊಳ್ಳಬೇಕು. ಶಿಕ್ಷಣ ಪಡೆದು ಸಂಘಟಿತರಾಗಿ ಎಲ್ಲರೊಂದಿಗೆ ಕೂಡಿ ಬಾಳುವುದನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಬರಗೂರು ಗ್ರಾಮ ಪಂಚಾಯಿತಿ ಸದಸ್ಯ ಹನುಮಂತರಾಯಪ್ಪ ತಿಳಿಸಿದರು.
ಸಿರಾ ತಾಲ್ಲೂಕು ಬರಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವರ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮಹಾತ್ಮರ ಆದರ್ಶಗಳನ್ನು ಯುವಜನತೆ ತಿಳಿದು ಕೊಳ್ಳುವುದು ಅತಿಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀನರಸಮ್ಮ, ಪಿಡಿಓ ಅನಿತಾ, ಸದಸ್ಯರಾದ ಶ್ರೀನಿವಾಸ್ ಗೌಡ, ದೊಡ್ಡೆಗೌಡ, ಇರ್ಷದ್ ಉನ್ನೀಸಾ, ಮಹಾಲಕ್ಷ್ಮೀ, ಶ್ರೀನಿವಾಸ್, ಬಿಲ್ ಕಲೆಕ್ಟರ್ ಲಕ್ಷ್ಮಣ್, ಭೂತಣ್ಣ, ನರಸಣ್ಣ, ಕಿಟ್ಟಪ್ಪ, ವಾಟರ್‍ಮನ್ ರಂಗನಾಥ್, ಅನಿಲ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
