ಮಧ್ಯ ಪಾನದಿಂದಲ್ಲೇ ಗೊಲ್ಲರಹಟ್ಟಿಯಲ್ಲಿ ಮಾತಿನ ಚಕಮಕಿ

ಚಿಕ್ಕನಾಯಕನಹಳ್ಳಿ

       ಕಾಂಗ್ರೆಸ್-ಜೆಡಿಎಸ್ ನಾಯಕರುಗಳು ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ಕೆಲವರಿಗೆ ಮಧ್ಯಪಾನ ಮಾಡಿಸಿ, ಶಾಸಕರು ಬಂದಾಗ ಏಕವಚನದಲ್ಲಿ ಮಾತನಾಡುವಂತೆ ಪ್ರೇರೆಪಣೆ ನೀಡಿದ್ದಾರೆ ಇದರಿಂದಲೇ ಗೊಲ್ಲರಹಟ್ಟಿಯಲ್ಲಿ ಮಾತಿನ ಚಕಮಕಿ ನಡೆದಿದೆ ಆದರೆ ಶಾಸಕರು ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದು ಯಾದವ ಸಮಾಜದ ಮುಖಂಡ ಹಾಗೂ ತಾ.ಪಂ.ಸದಸ್ಯ ಕೇಶವಮೂರ್ತಿ ಹೇಳಿದರು.

        ಪಟ್ಟಣದ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ನಡೆದ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಾಗ ನಮ್ಮ ಪಕ್ಷದ ಕಾರ್ಯಕರ್ತರು, ಹಲ್ಲೆಗೊಳಗಾಗಿದ್ದಾನೆ ಎಂದು ಬಿಂಬಿಸಿರುವ ವ್ಯಕ್ತಿ ಚಂದ್ರಯ್ಯರವರನ್ನು ಆ ಸ್ಥಳದಿಂದ ಆಚೆ ಕಳುಹಿಸಿದರು, ಅದನ್ನೇ ಕಾಂಗ್ರೆಸ್-ಜೆಡಿಎಸ್ ಮುಖಂಡರು ಈ ರೀತಿ ಚಿತ್ರಿಸುತ್ತಿದ್ದು, ಶಾಸಕರನ್ನು ಗುರಿಯಾಗಿಸಿಕೊಟ್ಟುಕೊಂಡು ಯಾದವ ಜನಾಂಗದೊಂದಿಗೆ ಶಾಸಕರು ಹೊಂದಿರುವ ಉತ್ತಮ ಬಾಂಧವ್ಯವನ್ನು ದೂರಮಾಡಲು ಸಂಚು ರೂಪಿಸಿದ್ದಾರೆ ಎಂದು ದೂರಿದರು.

         ಯಾದವ ಜನಾಂಗದ ಮೇಲೆ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತು ಮಾಧುಸ್ವಾಮಿರವರಿಗೆ ಉತ್ತಮ ಅಭಿಪ್ರಾಯವಿದೆ, ಜನಾಂಗದವರೂ ಬಿಜೆಪಿ ಪಕ್ಷವನ್ನು ಒಪ್ಪಿದ್ದಾರೆ ಎಂದ ಅವರು, ಯಾದವ ಜನಾಂಗದ ನಾಯಕರಾಗಿದ್ದ ಎ.ಕೃಷ್ಣಪ್ಪರನ್ನು ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ರಾಜಕೀಯದಲ್ಲಿ ಕಳೆದು ಹೋಗುವಂತೆ ಮಾಡಿದರು ಎಂದರಲ್ಲದೆ, ಮಾಧುಸ್ವಾಮಿರವರು ಗೆಲುವು ಕಂಡ ಎರಡು ತಿಂಗಳಲ್ಲೇ ಗೊಲ್ಲರಹಟ್ಟಿಗಳಲ್ಲಿ ಸಿ.ಸಿ.ರಸ್ತೆ ಮಾಡಿಸಿದ್ದಾರೆ, ಆ ಗ್ರಾಮಗಳನ್ನು ಅಭಿವೃದ್ದಿಗೆ ತರಲು ಯೋಜನೆ ರೂಪಿಸಿದ್ದಾರೆ, ಈಗಿದ್ದರೂ ಬಿಜೆಪಿ ಮತ ಪ್ರಚಾರದ ವೇಳೆ ಜೆಡಿಎಸ್ ಕಾರ್ಯಕರ್ತರು ಆಗಮಿಸಿ ಗಲಾಟೆ ಮಾಡುವ ಉದ್ದೇಶವೇನಿತ್ತು ಎಂದು ಹೇಳಿದರು.

         ಯಾದವ ಜನಾಂಗದ ಮುಖಂಡ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ಮಂಜಣ್ಣ ಮಾತನಾಡಿ, ಗೊಲ್ಲರಹಟ್ಟಿಗೆ ಶಾಸಕರು ಬಂದಾಗ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಆಗಮಿಸಿ ಶಾಸಕರಿಗೆ ಕಿರಿಕಿರಿ ಉಂಟು ಮಾಡುವಂತಹ ಸ್ಥಿತಿ ಸೃಷ್ಠಿಸಿದ್ದಾರೆ ನಂತರ ಅವರೇ ಗಲಾಟೆ ಮಾಡಿಸಿ ಮಾಧ್ಯಮದವರಿಗೆ ನೀಡಿದ್ದಾರೆ ಎಂದು ಹೇಳಿದ ಅವರು, ಜೆ.ಸಿ.ಮಾಧುಸ್ವಾಮಿರವರು ಜನಾಂಗದ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ, ಚುನಾವಣೆ ಸಮಯವಾದ್ದರಿಂದ ವಿರೋಧ ಪಕ್ಷದವರು ಶಾಸಕರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.

          ಯಾದವ ಜನಾಂಗದ ಮುಖಂಡ ಕದರೇಗೌಡ ಮಾತನಾಡಿ, ವಿರೋಧ ಪಕ್ಷದವರು ಚಂದ್ರಯ್ಯ ಎಂಬುವವರಿಗೆ ಮಧ್ಯವನ್ನು ಕುಡಿಸಿ ಗಲಾಟೆ ಮಾಡಿಸಿದ್ದಾರೆ ಎಂದರಲ್ಲದೆ ಶಾಸಕರು ಗೊಲ್ಲರಹಟ್ಟಿಗೆ ಬಂದಾಗ ಯಾವುದೇ ಶಾಮಿಯಾನ, ಮೈಕ್, ಚೇರ್ ಯಾವುದನ್ನೂ ಪಡೆದಿರಲಿಲ್ಲ ಗ್ರಾಮಸ್ಥರಲ್ಲಿ ಮತಗಳನ್ನು ಕೇಳಲು ಮಾತ್ರ ಶಾಸಕರು ಬಂದಿದ್ದರು ಎಂದರು.ಗೋಷ್ಠಿಯಲ್ಲಿ ಯಾದವ ಸಮಾಜದ ಮುಖಂಡರಾದ ಗಂಗಾಧರಯ್ಯ, ಚಿತ್ತಪ್ಪ, ಮಹಲಿಂಗಯ್ಯ, ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link