ಮಕ್ಕಳಲ್ಲಿ ದಂತರಕ್ಷಣೆ ಮಾಡುವುದು ಬಹಳ ಮುಖ್ಯವಾದದು : ಡಾ||ಸುಜಯ್

ಹಿರಿಯೂರು.

        ಚಿಕ್ಕಂದಿನಿಂದಲೇ ಮಕ್ಕಳಲ್ಲಿ ದಂತ ರಕ್ಷಣೆ ಮಾಡುವುದು ಬಹಳ ಮುಖ್ಯವಾದ ಕೆಲಸವಾಗಿದ್ದು ಹಾಗೂ ಪ್ರತಿಯೊಂದು ಮಗು ದಿನಕ್ಕೆ ಎರಡು ಸಲ ನಿಯಮಿತವಾಗಿ ವಸಡಿಗೆ ತೊಂದರೆಯಾಗದಂತೆ ಕ್ರಮಬದ್ಧವಾಗಿ ಹಲ್ಲುಜ್ಜ ಬೇಕು. ಇದರಿಂದ ದಂತ ಕ್ಷಯವನ್ನು ತಡೆಗಟ್ಟಬಹುದು ಎಂಬುದಾಗಿ ತಜ್ಞ ದಂತ ವೈದ್ಯರಾದ ಡಾ||ಸುಜಯ್ ಹೇಳಿದರು

        ತಾಲ್ಲೂಕಿನ ಗನ್ನಾಯಕನಹಳ್ಳಿ ಗ್ರಾಮದಲ್ಲಿ ರೋಟರಿಕ್ಲಬ್, ಇನ್ನರ್‍ವೀಲ್‍ಕ್ಲಬ್ ಹಾಗೂ ಪ್ರಗತಿ ವಕ್ರದಂತ ಚಿಕಿತ್ಸಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗಾಗಿ ಉಚಿತ ದಂತ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

           ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿಕ್ಲಬ್ ಅಧ್ಯಕ್ಷ ಎಂ.ಎಸ್.ರಾಘವೇಂದ್ರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗಳು ಇಂದಿಗೂ ದುರ್ಲಭವಾಗಿದ್ದು, ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಜಾಗ್ರತೆ ವಹಿಸಬೇಕು. ಈ ದಿಶೆಯಲ್ಲಿ ರೋಟರಿಸಂಸ್ಥೆ ವಿವಿಧ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದ್ದು, ಗ್ರಾಮೀಣ ಜನತೆ ಇದರ ಸದುಪಯೋಗ ಪಡೆಯಲು ಕೋರಿದರು.

         ಈ ಶಿಬಿರದಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ವಿದ್ಯಾರ್ಥಿಗಳನ್ನು ಮತ್ತು ಗ್ರಾಮಸ್ಥರನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು. ಮತ್ತು ಪ್ರತಿ ವಿದ್ಯಾರ್ಥಿಗೂ ಉಚಿತವಾಗಿ ಪೇಸ್ಟ್ ಮತ್ತು ಬ್ರೆಷ್ ನೀಡಲಾಯಿತು.

         ಈ ಸಮಾರಂಭದಲ್ಲಿ ರೋಟರಿ ಕಾರ್ಯದರ್ಶಿ ಹೆಚ್.ವೆಂಕಟೇಶ್, ವಿ.ವಿಶ್ವನಾಥ್, ರೆಡ್‍ಕ್ರಾಸ್‍ಸಂಸ್ಥೆಯ ಉಪಾಧ್ಯಕ್ಷ ಸುಂದರರಾಜ್, ಶ್ರೀಮತಿ ಸೌಭಾಗ್ಯವತಿದೇವರು ವಿಶಾಲ್‍ಭಾಫ್ನ ಜೈರಾಜ್‍ಜೈನ್, ಇನ್ನರ್‍ವೀಲ್ ಅಧ್ಯಕ್ಷೆ ಶ್ರೀಮತಿ ಸಪ್ನಾಸತೀಶ್ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link