ತುರುವೇಕೆರೆ:
ಪಟ್ಟಣದ ಮೀನುಗಾರಿಕೆ ಇಲಾಖೆಯ ಮುಂಬಾಗ ಶುಕ್ರವಾರ ಜಿಲ್ಲಾ ಪಂಚಾಯ್ತಿ ಇಲಾಖೆಯ ಸಲಕರಣ ಕಿಟ್ ವಿತರಣೆಯ ಮೂಲಕ ಇಬ್ಬರು ಪಲಾನುಭವಿಗಳಿಗೆ ಮೀನು ಹಿಡಿಯುವ ಬಲೆ ಹಾಗೂ ರಾಜ್ಯ ವಲಯ ಯೋಜನೆಯಡಿ ಇಬ್ಬರು ಪಲಾನುಭವಿಗಳಿಗೆ ಪೈಬರ್ ಗ್ಲಾಸ್ ಬೋಟ್‍ನ್ನು ಜಿಲ್ಲಾ ಪಂಚಾಯ್ತಿ ಸದಸ್ಯೆ ರೇಣುಖಕೃಷ್ಣಮೂರ್ತಿ ವಿತರಿಸಿದರು.ಈ ಸಂದರ್ಬದಲ್ಲಿ ತಾಲೂಕು ಪಂಚಾಯ್ತಿ ಸದಸ್ಯೆ ತೀರ್ಥಕುಮಾರಿರವಿಕುಮಾರಿ, ಮೀನುಗಾರಿಗೆ ಸಹಾಯಕ ನಿರ್ದೇಶಕಿ ದೀಪಾಲಿ, ಮುಖಂಡರಾದ ಕೃಷ್ಣಮೂರ್ತಿ, ಪಲಾನುಭವಿಗಳಾದ ಲಕ್ಷ್ಮೀನಾರಾಯಣ್, ಗಂಗಮ್ಮ, ನಂಜುಂಡಯ್ಯ, ರಂಗಸ್ವಾಮಿ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ