ಮೈಸೂರು
ಸಮ್ಮಿಶ್ರ ಸರ್ಕಾರ ಬಂದಾಗ ಚಾಮರಾಜನಗರ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಜಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಆದ್ಯತೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು ನಿಜ .
ಆದರೆ ನಮ್ಮ ಜಿಲ್ಲೆಯಲ್ಲಿ ಆಗಿದ್ದೇ ಬೇರೆ. ಇಷ್ಟಕ್ಕೂ ಒಮ್ಮತದಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕಾದ ಸಚಿವರುಗಳು ಒಬ್ಬಬ್ಬರು ಒಂದೊಂದು ದಿಕ್ಕು ಅನ್ನುವಂತೆ ಎತ್ತು ಏರಿಗೆ ಕೋಣ ನೀರಿಗೆ ಎಳೆಯಿತು ಎಂಬ ಗಾದೆಯನ್ನು ಚೆನ್ನಾಗಿ ಪಾಲಿಸಿದರು . ಹಾಗೆ ನೋಡಿದರೆ ರಾಜಕೀಯವಾಗಿ ಪುಟ್ಟರಂಗಶೆಟ್ಟಿ ಮತ್ತು ಎನ್.ಮಹೇಶ್ ಅವರ ನಡುವೆ ವೈಮನಸ್ಸು ಇದ್ದೇ ಇತ್ತು.
ಕೊಳ್ಳೇಗಾಲದಲ್ಲಿ ಎನ್.ಮಹೇಶ್ ಅವರು ಕಾಂಗ್ರೆಸ್ಸನ್ನು ಮಣಿಸಿ ಗೆಲುವು ಪಡೆದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಿರುವಾಗ ಪ್ರತಿಸ್ಪರ್ಧಿಗಳು ಒಟ್ಟಾಗಿ ಹೋಗಿ ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆ ಎಂಬ ಯಾವ ನಂಬಿಕೆಯೂ ಇಲ್ಲಿ ಇರಲಿಲ್ಲ.
ಬಿ ಎಸ್ ಪಿ ಉತ್ತರ ಪ್ರದೇಶದಲ್ಲಿ ಕಾಗ್ರೇಸ್ ಮೈತ್ರಿಗೆ ದಿಕ್ಕರಿಸಿ ಏಕಾಂಗಿಯಾಗಿ ಚುನಾವಣೆಗೆ ನಿಂತ ಬೆನ್ನಲ್ಲೇ ಎನ್ ಮಹೇಶ್ ಕಾಂಗ್ರೇಸಿಗರಿಗೆ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ ನಮ್ಮ ಪಕ್ಷವೇನಾದರು ಲೋಕಸಭೆಗೆ ನಿಂತರೆ ಕಾಂಗ್ರೇಸ್ ಗೆ ಕರ್ನಾಟಕದಲ್ಲಿ ಉಳಿಗಾಲವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ