ಹೊರಗಿನವರಿಗೆ ಟಿಕೆಟ್ ಕೊಟ್ಟು ಸಾಕಾಗಿ ಹೋಗಿದೆ : ದೇವೇಗೌಡ

ಬೆಂಗಳೂರು

     ಹೊರಗಿನವರಿಗೆ ಟಿಕೆಟ್ ಕೊಟ್ಟು ಸಾಕಾಗಿ ಹೋಗಿದೆ.ಅವರು ಹೀಗೆ ಬಂದು ಹಾಗೆ ಪಕ್ಷವನ್ನು ತೊರೆದು ಹೋಗಿರುವುದನ್ನು ನೋಡಿದ್ದೇನೆ .ಅದೊಂದು ರೀತಿಯ ಹಿಂಸೆಯಾಗಿದೆ.ನಮಗೆ ಆಯಾ ರಾಮ್ ಗಯಾ ರಾಮ್ ರೀತಿಯ ನಾಯಕರು ಬೇಕಾಗಿ ಲ್ಲವೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

     ಪಕ್ಷದ ಕಚೇರಿಯಲ್ಲಿಂದು ಜಯಪ್ರಕಾಶ್ ನಾರಾಯಣ್ ಅವರ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಮ್ಮ ಪಕ್ಷದ ಅಭ್ಯರ್ಥಿಗಳು ಅ. 14ರಂದು ನಾಮಪತ್ರ ಸಲ್ಲಿಸಲಿದ್ದಾರೆ.ಚುನಾವಣೆಯಲ್ಲಿ ಸೋಲು ಗೆಲುವು ಇದ್ದದ್ದೇ.ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳುವ ಮೂಲಕ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ಖಚಿತ ಎಂದು ತಿಳಿಸಿದರು.

   ಜಾತಿಯನ್ನು ಮುಂದಿಟ್ಟುಕೊಂಡು ಯಾರೂ ಚುನಾವಣೆಯ ನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಯಾರು ಎಷ್ಟೇ ಪ್ರಭಾವಿಗಳಾಗಿದ್ದರೂ ಒಂದು ಜಾತಿಯಿಂದ ಗೆಲ್ಲುವುದು ಅಸಾಧ್ಯ.ಯಾರೇ ಬಂದರೂ ಜೆಡಿಎಸ್ ಪಕ್ಷವನ್ನು ಮುಗಿಸಲು ಆಗುವುದಿಲ್ಲ ಎಂದು ಅವರು ಹೇಳಿದರು
ಯಾರು ಎಷ್ಟೇ ಪ್ರಭಾವಿಗಳಾಗಿದ್ದರೂ ಒಂದು ಜಾತಿಯಿಂದ ಚುನಾವಣೆಗಳನ್ನು ಗೆಲ್ಲುವುದು ಅಸಾಧ್ಯ.ಇದನ್ನು ನಾನು ಸಾವಿರ ಬಾರಿ ಹೇಳಿದ್ದೇನೆ.ನನಗೂ ಸಾಕಷ್ಟು ಅನುಭವ ಇದೆ.ಆದರೆ, ಮಾತನಾಡುವುದಕ್ಕೆ ಹೋಗುವುದಿಲ್ಲ. ಅವರು ಹೇಳಲಿ,ಅವರಿಗೆ ಅಧಿಕಾರ ಇದೆ.ಆದರೆ,ಅಂತಿಮ ವಾಗಿ ಮತದಾರರು ತೀರ್ಮಾನ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಿರುಗೇಟು ನೀಡಿದ್ದಾರೆ.

    ನನ್ನಿಡೀ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡೇ ಬಂದಿದ್ದೇನೆ.ನಮ್ಮ ಪಕ್ಷವನ್ನ ಯಾರಾದರು ಒಡೆಯು ತ್ತಾರೆ ಎಂದರೆ ಅದು ಅವರ ಭ್ರಮೆ.ಜೆಡಿ ಎಸ್ ಪಕ್ಷವನ್ನು ಯಾರೇ ಬಂದರೂ ತುಳಿಯಲು ಸಾಧ್ಯದಿಲ್ಲ.ಯಾರು ಏನು ಬೇಕಾದರೂ ಹೇಳಲಿ.ನಮ್ಮ ಪಕ್ಷವ ನ್ನು ಯಾರಿಂದಲೂ ಮುಗಿಸುವುದು ಅಸಾಧ್ಯವೆಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಪರೋಕ್ಷ ಸಂದೇಶ ರವಾನಿಸಿದರು.

      ಕಾಂಗ್ರೆಸ್ ನಾಯಕರು ಉಪಚುನಾವಣೆಯನ್ನು ಗೆಲ್ಲುವುದಕ್ಕಾಗಿ ಯಾವೆಲ್ಲಾ ತಂತ್ರ,ಪ್ರತಿತಂತ್ರ ರೂಪಿಸುತ್ತಾರೆ.ಪ್ರಯೋಗಗಳನ್ನು ಮಾಡುತ್ತಾರೆ ಮಾಡಲಿ, ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ದೇಶದಲ್ಲಿ ಮುಸ್ಲಿಂ ಸಮುದಾಯಕ್ಕೆ,ಮಹಿಳೆಯರಿಗೆ ಮೀಸಲಾತಿ ನೀಡಿದ್ದು ನಮ್ಮ ಸರ್ಕಾರ. ಸಾಮಾಜಿಕ ನ್ಯಾಯವ ನ್ನು ಪ್ರತಿಪಾದಿಸಿ ಅನುಷ್ಠಾನ ಮಾಡಿದ್ದು ನಮ್ಮ ಸರ್ಕಾರ ಎಂದು ತಮ್ಮ ಪಕ್ಷದ ಸಾಧನೆಗಳನ್ನು ತಿಳಿಸಿದರು.
       ನಮ್ಮದು ಕುಟುಂಬಕ್ಕ ಸೀಮಿತವಾದ ಪಕ್ಷವಲ್ಲ.ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ದ ಹೋರಾಟ ಮಾಡಿಕೊಂಡು ಪಕ್ಷವನ್ನು ಉಳಿಸಿಕೊಂಡಿದ್ದೇನೆ.ಮುಂದೆಯೂ ಮಾಡುತ್ತೇನೆ.ಈ ಪಕ್ಷ ಬಡ ವರ ಪರ,ರೈತರು,ದಲಿತರು-ದಮನಿತರ ಪರವಾಗಿ ಇರುವವರ ಪಕ್ಷ.ಈಗಿನ ಸರ್ಕಾರ ಬಡವರ ಪರ,ರೈತ ಪರವಾಗಿಲ್ಲ ವೆಂದು ಸರ್ಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link