ಭೂತ್ ಮಟ್ಟದ ಏಜೆಂಟರ್ ಗಳಿಗೆ ತರಬೇತಿ…!!

ಗುಬ್ಬಿ

      ಕೇಂದ್ರ ಸರ್ಕಾರ ಬರನಿರ್ವಹಣೆ ಸೇರಿದಂತೆ ಹಲವು ಅಭಿವೃಧ್ದಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಕಾಂಗ್ರೇಸ್ ವಕ್ತಾರ ಮುರಳಿಧರ್ ಹಾಲಪ್ಪ ತಿಳಿಸಿದರು.

       ಪಟ್ಟಣದ ಗುರು ಭವನದಲ್ಲಿ ಕಾಂಗ್ರೇಸ್ ಪಕ್ಷದವತಿಂದ ಮುಂಬರುವ ಲೋಕಸಭಾ ಚುನಾವಣೆ ಪೂರ್ವ ಸಿದ್ದತೆ ಸಭೆ ಮತ್ತು ಭೂತ್ ಮಟ್ಟದ ಏಜೆಂಟರುಗಳಿಗೆ ತರಭೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಹಲವು ಜನಪರವಾದ ಯೋಜನೆಗಳನ್ನು ರೂಪಿಸಿದೆ ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ನಿಯಮಾನುಸಾರ ನೀಡಬೇಕಾದ ಅನುದಾನವನ್ನು ನೀಡುವಲ್ಲಿ ವಿಫಲವಾಗಿದೆ ಎಂದು ತಿಳಿಸಿದರು.

        ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಕಲ ರೀತಿಯಲ್ಲಿಯೂ ಸನ್ನಧ್ದರಾಗುವಂತೆ ತಿಳಿಸಿದ ಅವರು ಬೂತ್ ಮಟ್ಟದ ಏಜೆಂಟರುಗಳಿಗೆ ತರಭೇತಿಯನ್ನು ನೀಡಲಾಗುತ್ತಿದ್ದು ತರಭೇತಿ ಪಡೆದ ಏಜೆಂಟರು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಿಳಿಸಿದ ಅವರು ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರ ತರಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮುಂದಾಗುವಂತೆ ತಿಳಿಸಿದರು.

        ಸಭೆಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಎಸ್.ಎಲ್.ನರಸಿಂಹಯ್ಯ, ನಿಂಬೆಕಟ್ಟೆ ಜಯಣ್ಣ, ತರಭೇತಿದಾರರಾದ ಚಂದ್ರಶೇಖರರೆಡ್ಡಿ, ರಾಜಣ್ಣ, ನಂಜುಂಡಪ್ಪ, ಬಾಲಕೃಷ್ಣ, ಜಿಲ್ಲಾ ಎಸ್.ಟಿ.ಘಟಕದ ಅಧ್ಯಕ್ಷ ಟಿ.ಬಿ.ಮಲ್ಲೇಶ್, ಜಿಲ್ಲಾ ಕಾರ್ಯದರ್ಶಿ ಸುಜಾತ, ಶಿವಕುಮಾರ್, ಬಿ.ಆರ್.ಭರತ್‍ಗೌಡ, ಜಯಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ, ಎಸ.ಸಿ.ಘಟಕದ ಅಧ್ಯಕ್ಷ ಜಿ.ವಿ.ಮಂಜುನಾಥ್, ಪಟ್ಟಣ ಪಂಚಾಯ್ತಿ ಸದಸ್ಯ ಮಹಮದ್ ಸಾಧಿಕ್, ಮುಖಂಡರಾದ ಸಿ.ಆರ್.ಚಿಕ್ಕರಂಗಣ್ಣ, ಸಲೀಂ ಪಾಷಾ, ಮಹಮದ್ ರಫೀ ಸೇರಿದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link