ಶೈಕ್ಷಣಿಕ ಸಾಧನೆಗೆ ಚದುರಂಗ ಸಹಕಾರಿ

ದಾವಣಗೆರೆ:

        ಚದುರಂಗ ಕ್ರೀಡೆಯು ಮಾನಸಿಕ ಆರೋಗ್ಯವನ್ನು ಸದಾ ಕ್ರಿಯಾಶೀಲವನ್ನಾಗಿಸುವುದರ ಜತೆಗೆ ಶೈಕ್ಷಣಿಕ ಸಾಧನೆಗೂ ಸಹಕಾರಿಯಾಗಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

         ನಗರದ ಗುರುಭವನದಲ್ಲಿ ಭಾನುವಾರ ಶಿವಯೋಗಾಶ್ರಮ ಟ್ರಸ್ಟ್, ದಾವಣಗೆರೆ ಚೆಸ್ ಕ್ಲಬ್, ಜೈನ್ ಸೋಷಿಯಲ್ ಗ್ರೂಪ್, ರೋಟರಿ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಲಿಂ.ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 62 ನೇ ಸ್ಮರಣೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಚದುರಂಗ ಸ್ಫರ್ಧೆ ಜಯದೇವ ಟ್ರೋಫಿಗೆ ಚಾಲನೆ ನೀಡಿ ಅವರು ಮಾತನಾಡಿದರು.

          ಚದುರಂಗ ಕ್ರೀಡೆಯು ಬುದ್ಧಿವಂತರ ಆಟವಾಗಿದ್ದು, ಈ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಮಾನಸಿಕ ಆರೋಗ್ಯವು ಸದಾ ಕ್ರಿಯಾಶೀಲವನ್ನಾಗಿ ಇಡುವುದರ ಜತೆಗೆ ಹೆಚ್ಚಿನ ಶೈಕ್ಷಣಿಕ ಸಾಧನೆಗೂ ಸಹಕಾರಿಯಾಗಲಿದೆ ಎಂದರು.

       ಬದಲಾಗುತ್ತಿರುವ ಜೀವನ ಶೈಲಿಯಿಂದ ಮನುಷ್ಯ ನಿತ್ಯವೂ ದುಃಖ, ದುಗುಡ, ದುಮ್ಮಾನಗಳಿಗೆ ಒಳಗಾಗುತ್ತಾನೆ. ಇದರಿಂದ ಹೊರಬರಲು ನಾವು ಮನಸ್ಸಿಗೆ ಸಾಂಸ್ಕತಿಕ ಪರಿಸರ ನೀಡಬೇಕಾಗಿದೆ. ಸಾಂಸ್ಕøತಿಕ ಪರಿಸರದಲ್ಲಿ ಕ್ರೀಡೆಯೂ ಒಂದಾಗಿದ್ದು, ಅದರಲ್ಲಿ ಚದುರಂಗ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಾಗೂ ಮನಸ್ಸನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಹೇಳಿದರು.

          ಶಾರೀರಿಕ ಶ್ರಮಕ್ಕಿಂತ ಮಾನಸಿಕ ಶ್ರಮವನ್ನು ಹಾಕಿ ಚದುರಂಗ ಆಟ ಹಾಡುವುದರಿಂದ ಮೆದುಳು ಹೆಚ್ಚು ಕ್ರೀಯಾಶೀಲಗೊಂಡು ಸದಾ ಚಟುವಟಿಕೆಯಲ್ಲಿ ಇರುವಂತೆ ಮಾಡುತ್ತದೆ. ಇಂತಹ ಚದುರಂಗ ಆಟವನ್ನು ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತಿದ್ದೇವೆ. ಇದು ನಿರಂತರವಾಗಿ ನಡೆಯಲಿ. ಪೋಷಕರು ಇಂಥಹ ಕಾರ್ಯಕ್ರಮಗಳಿಗೆ ತಮ್ಮ ಮಕ್ಕಳನ್ನು ಹೆಚ್ಚು, ಹೆಚ್ಚಾಗಿ ಕರೆತರಬೇಕೆಂದು ಸಲಹೆ ನೀಡಿದರು.

          ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ನಗರದಲ್ಲಿ ಚೆಸ್ ಸೇರಿದಂತೆ ಇತರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳು ಆಯೋಜಿಸಲಾಗುತ್ತಿದ್ದು, ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

          ಕಾರ್ಯಕ್ರಮದಲ್ಲಿ ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ, ಕರಿಬಸಪ್ಪ, ಜಗದೀಶ್ ಬೇತೂರು, ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು.ಈ ಟೂರ್ನಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಇನ್ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link