ವಿಶ್ವಕ್ಕೆ ಯೋಗವನ್ನು ನೀಡಿದ ಕೀರ್ತಿ ಭಾರತೀಯರಿಗೆ ಸಲ್ಲತಕ್ಕದ್ದು: ಡಾ.ಎಸ್.ಹೆಚ್. ಪ್ಯಾಟಿ

ಹರಿಹರ :
   
      ವಿಶ್ವಕ್ಕೆ ಯೋಗವನ್ನು ನೀಡಿದ ಕೀರ್ತಿ ಭಾರತೀಯರಿಗೆ ಸಲ್ಲತಕ್ಕದ್ದು ಎಂದು ಸಂಸ್ಥೆಯ ಅಧ್ಯಕ್ಷರು ಹಾಗೂ ಗಿರಿಯಮ್ಮ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಹೆಚ್. ಪ್ಯಾಟಿ ಹೇಳಿದರು. 
 
        ನಗರದ ಗಿರಿಮ್ಮ ಪದವಿ ಮಹಿಳಾ ಕಾಲೇಜ್ ಆವರಣದಲ್ಲಿ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾಮಿ ವಿವೇಕನಾಂದ ರವರ ಜನ್ಮೊತ್ಸವದ ಅಂಗವಾಗಿ ಒಂದು ವಾರಗಳ ಕಾಲ ಯೋಗ ಶಿಬಿರದ ಭಾಗವಹಿಸಿ ಮಾತನಾಡುತ್ತಿ ದ್ದರು. 
ವಿದ್ಯಾರ್ಥಿಪರಿಷತ್ ಕೇವಲ ಹೋರಾಟದ ಸಂಘಟನೆಯಲ್ಲ.
 
        ಹಾಗೂ ಹೊಸ-ಹೊಸ ವಿಚಾರಗಳನ್ನು ನಗರದಲ್ಲಿ ಬಿತ್ತುವ ಕೆಲಸವನ್ನು ಹರಿಹರ ಎಬಿವಿಪಿ ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳ ನಡುವೆ ಕಾರ್ಯ ಚಟುವಟಿಕೆ ನಡೆಸುವುದರ ಜೊತೆಗೆ ಸಾಮಾಜಿಕ ಬದ್ಧತೆಯನ್ನು ಕೂಡ ಒಳಗೊಂಡಿದೆ. ವಿವೇಕನಾಂದರ ಆದರ್ಶಗಳನ್ನು ಪಾಲಿಸುತ್ತಾ ನಾವೆಲ್ಲರೂ ಮುನ್ನಡೆಯ ಬೇಕು. ಮತ್ತು ವಿಶ್ವಕ್ಕೆ ಯೋಗವನ್ನು ಹೇಳಿದ ಕೀರ್ತಿ ಭಾರತೀಯರಿಗೆ ಸಲ್ಲತಕ್ಕದ್ದು. ಹಾಗೂ ಪ್ರತಿನಿತ್ಯ ಯೋಗವನ್ನು ಅಭ್ಯಾಸ ಮಾಡುತ್ತಾ ಸಾಗೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
 
        ವಿಭಾಗ ಸಂಘಟನಾ ಕಾರ್ಯದರ್ಶಿಯಾದ ಪ್ರದೀಪ್ ಮಾತನಾಡಿ ವಿದ್ಯಾರ್ಥಿ ಪರಿಷತ್‍ನ ಹರಿಹರ ಶಾಖೆ ನೂತನ ಪ್ರಯತ್ನಗಳು ಪ್ರಶಂಸಿನೀಯವಾದದ್ದು. ವಿವೇಕಾನಂದ ಜನ್ಮ ದಿನ್ಯೋತ್ಸವವನ್ನು ಒಂದು ತಿಂಗಳುಗಳ ಕಾಲನಾನಾ ಚಟುವಟಿಕೆಗಳಿಂದ ಕೂಡಿರುವಂತೆ ಯೋಚಿಸಿದ್ದು, ಅನೇಕ ಸ್ಪರ್ಧೆಗಳ ಆಯೋಜನೆಯನ್ನು ಕೂಡ ಮಾಡಲಾಗಿದ್ದು, ಈ ತಿಂಗಳು ಪೂರ ಪರಿಷತ್‍ನ ಕಾರ್ಯವನ್ನು ವಿವೇಕಾನಂದರ ಜನ್ಮ ದಿನೋತ್ಸವದ ಪ್ರಯುಕ್ತ ಜೋಡಿಸಲಾಗಿದೆ ಎಂದು ಅಭಿಪ್ರಾಯಪಟ್ಟರು. 
         ಶಿಬಿರದ ಉದ್ಘಾಟನೆಯನ್ನು ಪಂಚಮಸಾಲಿ ಗುರುಪೀಠದ ಅಂತರಾಷ್ಟ್ರೀಯ ಯೋಗ ಗುರುಗಳಾದ ಸ್ವಾಸ ಗುರು ಶ್ರೀಶ್ರೀಶ್ರೀ ವಚನಾನಂದ ಸ್ವಾಮೀಜಿಗಳು ನೆರವೇರಿಸಿದರು. ಹಾಗೂ ಯೋಗ ಶಿಬಿರಾರ್ಥಿಗಳಿಗೆ ಪ್ರತಿದಿನ ಯೋಗವನ್ನು ಹೇಳಿಕೊಡಲಾಯಿತು . ಈ ಸಂದರ್ಭದಲ್ಲಿ ನಗರ ಘಟಕದ ಎಬಿವಿಪಿ ಸಂಚಾಲಕರಾದ ವಿರೇಶ್, ನಿರಂಜನ್, ಗಣೇಶ್, ಕುಮಾರ ಮುಂತಾದವರು ಉಪಸ್ಥಿತರಿದ್ದರು.

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap