ಗುತ್ತಿಗೆದಾರರ ವಿರುದ್ದ ಪ್ರಕರಣದಾಖಲಿಸಲು ಸೂಚನೆ

ಚಿತ್ರದುರ್ಗ

       ದಿನ ನಿತ್ಯಕುಡಿಯುವ ನೀರಿನ ಸಮಸ್ಯೆಇದ್ದರೂ ಸಹ ಸಕಾಲದಲ್ಲಿ ಶುದ್ದಕುಡಿಯುವ ನೀರಿನ ಘಟಕಗಳನ್ನು ಅಳವಡಿಸದ ಸ್ಮಾರ್ಟ್‍ಅಕ್ವಾಸಂಸ್ಥೆ ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಪ್ರಕರಣದಾಖಲಿಸಲು ಕಾರ್ಮಿಕ ಹಾಗೂ ಜಿಲ್ಲಾಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ತಿಳಿಸಿದರು.

       ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ.ಪ್ರಗತಿ ಪರಿಶೀಲನಾ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಪರಿಶೀಲನೆ ನಡೆಸಿದರು.ಎಲ್ಲಾಆರು ತಾಲ್ಲೂಕುಗಳಲ್ಲಿ 469 ಆರ್.ಓ.ಘಟಕಗಳನ್ನು ಅಳವಡಿಸಬೇಕಾಗಿದ್ದು ಇದರಲ್ಲಿ 378 ಪೂರ್ಣಗೊಳಿಸಲಾಗಿದೆ .ಇದರಲ್ಲಿ 361 ಮಾತ್ರಕಾರ್ಯನಿರ್ವಹಿಸುತ್ತಿವೆ. ಉಳಿದ 17 ರಲ್ಲಿ 8 ಘಟಕಗಳನ್ನು ಗುತ್ತಿಗೆದಾರರು ದುರಸ್ಥಿ ಮಾಡಲುಕ್ರಮ ಕೈಗೊಳ್ಳಲಾಗಿದೆ.ಆದರೆ10 ವರ್ಷಗಳ ಅವಧಿಗೆ ನಿರ್ವಹಣಾಅವಧಿಇದ್ದಾಗ್ಯೂ ಸಹ ನಿರ್ವಹಣೆಮಾಡಿರುವುದಿಲ್ಲ ಮತ್ತು 91 ಘಟಕಗಳನ್ನು ಸಹ ಅಳವಡಿಸಿರುವುದಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯತೆಯಿಂದಜನರಿಗೆತೊಂದರೆಯಾಗಿದ್ದುಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಶಾಸಕರಾದಎಂ.ಚಂದ್ರಪ್ಪ, ಜಿ.ಹೆಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಡಿ.ಶೇಖರ್ ಸೇರಿದಂತೆ ಬಹುತೇಕಎಲ್ಲಾ ಶಾಸಕರು ಸಚಿವರನ್ನು ಒತ್ತಾಯಿಸಿದರು.

       ಕುಡಿಯುವ ನೀರಿನ ಪೂರೈಕೆಗಾಗಿ ಪ್ರತಿ ವಿಧಾನಸಭಾಕ್ಷೇತ್ರಕ್ಕೆ 50 ಲಕ್ಷದಂತೆ ಮೂರುಕೋಟಿಅನುದಾನ ನೀಡಿಇದರಲ್ಲಿ 1.50 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಈಗಾಗಲೇ 1.33 ಕೋಟಿ ವೆಚ್ಚ ಮಾಡಲಾಗಿದೆಎಂದುಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಅಧಿಕಾರಿರವೀಂದ್ರರವರು ಸಭೆಗೆ ಮಾಹಿತಿ ನೀಡಿದಾಗಅನುದಾನವನ್ನು ಸಂಪೂರ್ಣವಾಗಿ ವೆಚ್ಚ ಮಾಡದಿರುವುದರಿಂದ ಬರುವಂತಹಅನುದಾನ ಬರುವುದಿಲ್ಲ. ಈಗಾಗಲೇ ಪ್ರತಿಕ್ಷೇತ್ರದಲ್ಲಿಎರಡುಕೋಟಿಯವರೆಗೆಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ನೀರಿನ ಸಮಸ್ಯೆಎದುರಿಸುತ್ತಿರುವ ಗ್ರಾಮಗಳಿಗೆ ಭೇಟಿ ನೀಡಿದಾಗಜನರಿಗೆಉತ್ತರಿಸಲಾಗದ ಸ್ಥಿತಿ ನಿರ್ಮಾಣವಾಗಿದೆಎಂದು ಶಾಸಕರು ತಿಳಿಸಿದರು.

       ಈ ಹಿಂದೆ ಬರಅಧ್ಯಯನ ಹಾಗೂ ನಿರ್ವಹಣಾ ಪರಿಶೀಲನೆಗೆ ಆಗಮಿಸಿದ ಸಂಪುಟ ಉಪ ಸಮಿತಿ ಭೇಟಿ ನೀಡಿದಾಗಇರುವ ಹಣವನ್ನು ವೆಚ್ಚ ಮಾಡಿದ ನಂತರಅನುದಾನ ಬಿಡುಗಡೆ ಮಾಡಲಾಗುತ್ತಿದೆಎಂದು ಸಭೆಯಲ್ಲಿ ತಿಳಿಸಲಾಗಿದೆ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಇಂಜಿನಿಯರ್‍ಗಳಿಂದ ಕೆಲಸವನ್ನು ಪಡೆದು ಸಕಾಲದಲ್ಲಿಯು.ಸಿ ಕಳುಹಿಸಬೇಕೆಂದು ಜಿಲ್ಲಾಉಸ್ತುವಾರಿ ಕಾರ್ಯದರ್ಶಿಯವರು ಸೂಚನೆ ನೀಡಿದರು.

         ಈ ವೇಳೆ ಜಿಲ್ಲಾ ಸಚಿವರು ಮಾತನಾಡಿಕುಡಿಯುವ ನೀರಿನ ಪೂರೈಕೆಗೆ ಬೇಕಾದಅನುದಾನ ನೀಡಲುಯಾವುದೇ ಸಮಸ್ಯೆಇಲ್ಲ, ಕುಡಿಯುವ ನೀರಿನ ಕಾಮಗಾರಿಗಳಿಗೆ ಎಷ್ಟೆ ಹಣ ಬೇಕಾದರೂ ಸರ್ಕಾರ ನೀಡಲು ಬದ್ದವಾಗಿದೆ.ಕುಡಿಯುವ ನೀರಿನ ಸಮಸ್ಯೆಎದುರಿಸುವ ಗ್ರಾಮಗಳಿಗೆ ತುರ್ತಾಗಿ ನೀರು ಪೂರೈಸಲು ಜಿಲ್ಲಾಧಿಕಾರಿಗಳ ಬಳಿ ಹಣವಿದ್ದುಕಾರ್ಯನಿರ್ವಾಹಕ ಅಧಿಕಾರಿಗಳು ಸಮಸ್ಯೆಇರುವ ಗ್ರಾಮಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲು ಸೂಚನೆ ನೀಡಿದರು.

      ಹಟ್ಟಿಚಿನ್ನದಗಣಿಅಧ್ಯಕ್ಷರು ಹಾಗೂ ಶಾಸಕರಾದಟಿ.ರಘುಮೂರ್ತಿಯವರು ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿತಕ್ಷಣವೇ ಗೋಶಾಲೆಗಳನ್ನು ಆರಂಭಿಸಬೇಕು, ಆದರೆ ಮೇವು ಬ್ಯಾಂಕ್‍ಗಳ ಸ್ಥಾಪನೆ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳು ಕಂದಾಯಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ್ದಾರೆ. ಆದರೆ ಮೇವು ಬ್ಯಾಂಕ್‍ಗಳಿಂದ ಜನರಿಗೆಉಪಯೋಗವಾಗುವುದಿಲ್ಲ ಎಂದಾಗ ಫೆಬ್ರವರಿ 15 ರ ನಂತರಗೋಶಾಲೆಯನ್ನುಆರಂಭಿಸಲಾಗುತ್ತದೆಎಂದುಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.

        ಬರಗಾಲ ಇರುವುದರಿಂದ ಪ್ರತಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಜನರಿಗೆಉದ್ಯೋಗಕೊಡಲು ಸಮುದಾಯಆಧಾರಿತ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕೆಂದು ಸಂಪುಟ ಉಪ ಸಮಿತಿ ಸೂಚನೆ ನೀಡಿದ್ದುಅದರಂತೆಎಲ್ಲಾ ಪಂಚಾಯಿತಿಗಳಲ್ಲಿ ಸಮುದಾಯಕಾಮಗಾರಿಆರಂಭಿಸಲಾಗಿದೆ.ಜನವರಿವರೆಗೆ 44 ಲಕ್ಷ ಮಾನವ ದಿನಗಳನ್ನು ಸೃಜಿಸುವಗುರಿಇದ್ದು ಈಗಾಗಲೇ 45 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆಎಂದು ಸಿ.ಇ.ಓ.ತಿಳಿಸಿದರು. ಇದಕ್ಕೆ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಕೆರೆಗಳ ಹೂಳೆತ್ತುವ ಕಾಮಗಾರಿಕೈಗೊಂಡಲ್ಲಿ ಆಸ್ತಿಯನ್ನು ಸೃಜಿಸಿದಂತಾಗುತ್ತದೆ ಎಂದರು.

       ಕೆರೆ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲು ಜಿಲ್ಲಾ ಸಚಿವರು ಸೂಚನೆ ನೀಡಿ ಹೂಳೆತ್ತುವ ಮುಂಚೆ ಒತ್ತುವರಿಯನ್ನುತೆರವು ಮಾಡಲು ಸರ್ವೆ ಮಾಡಿಒತ್ತುವರಿಯಾದಕಡೆಯಿಂದ ಹೂಳೆತ್ತುವ ಕೆಲಸ ಆರಂಭಿಸಲು ಸೂಚನೆ ನೀಡಿದರು.ಕೃಷಿಭಾಗ್ಯದಡಿ ಪಾಲಿಹೌಸ್‍ನ್ನು ನೀಡಿದ್ದುಒಬ್ಬಬ್ಬ ಫಲಾನುಭವಿಗೆ 40 ಲಕ್ಷದವರೆಗೆ ನೀಡಲಾಗಿದೆ.ಆದರೆಇದರಉಪಯೋಗವಾಗಿದೆ ಎಂಬ ಬಗ್ಗೆ ಜಂಟಿ ಕೃಷಿ ನಿರ್ದೇಶಕರು ಹಾಗೂ ತೋಟಗಾರಿಕೆಉಪನಿರ್ದೇಶಕರುಜಂಟಿಯಾಗಿ ವರದಿ ನೀಡಲು ಸಚಿವರು ಸೂಚನೆ ನೀಡಿದರು.

       ಹೊರಗುತ್ತಿಗೆಯಡಿ ಪಿ.ಎಫ್, ಇ.ಎಸ್.ಐ ಪಾವತಿಸದೆ ರಶ್ಮಿ ಕಂಪ್ಯೂಟರ್ಸ್ ಸಂಸ್ಥೆಯವರುಜಿಲ್ಲಾ ಪಂಚಾಯತ್‍ನಲ್ಲಿ ಸುಮಾರು 11 ಕೋಟಿಯನ್ನು ಪಡೆದಿದ್ದಾರೆ. ಆದರೆ ನಿಯಮದನ್ವಯಯಾವುದೇ ಹೊರಗುತ್ತಿಗೆ ಪಡೆದ ಸಂಸ್ಥೆ ನೌಕರರ ಪಿ.ಎಫ್, ಇ.ಎಸ್.ಐ ಪಾವತಿ ಮಾಡುವುದುಕಡ್ಡಾಯವಾಗಿದೆ.ಒಟ್ಟು 123 ಸಿಬ್ಬಂದಿಗೆ ಹೊರಗುತ್ತಿಗೆಯನ್ನು ಈ ಸಂಸ್ಥೆಗೆ ನೀಡಿದ್ದು2013-14 ನೇ ಸಾಲಿನಿಂದ 2018 ರ ಮಾರ್ಚ್‍ವರೆಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ.ಸಂಸ್ಥೆಯ ಮಾಲಿಕರುಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದುಇವರುಇದನ್ನು ಹೇಗೆ ಡ್ರಾ ಮಾಡುತ್ತಾರೆ.ಈ ಬಗ್ಗೆ ಕಾನೂನಾತ್ಮಕಕ್ರಮಜರುಗಿಸಬೇಕೆಂದು ಶಾಸಕರು ಒತ್ತಾಯಿಸಿದರು.ಈ ವೇಳೆ ಜಿಲ್ಲಾ ಸಚಿವರು ಜಿಲ್ಲಾಧಿಕಾರಿಯವರು ಇದರ ಸಂಪೂರ್ಣತನಿಖೆಕೈಗೊಂಡುತಿಂಗಳಲ್ಲಿ ವರದಿ ನೀಡಲು ತಿಳಿಸಿದರು.

      ಬರಗಾಲದಿಂದ ಒಣಗಿದತೆಂಗಿನ ಮರಗಳಿಗೆ ಪರಿಹಾರವಾಗಿ ಸರ್ಕಾರ ವಿಶೇಷ ಪ್ಯಾಕೇಜ್‍ನ್ನು ನೀಡಿದ್ದುಇದಕ್ಕಾಗಿ 13 ಕೋಟಿಯನ್ನುಜಿಲ್ಲೆಗೆ ನೀಡಿದೆ.ಒಟ್ಟುಜಿಲ್ಲೆಯಲ್ಲಿ 11817 ರೈತರ 326616 ತೆಂಗಿನಮರಗಳು ಒಣಗಿವೆ. ಈಗಾಗಲೇ ಆನ್‍ಲೈನ್ ವಿವರವನ್ನುದಾಖಲಿಸುವ ಕೆಲಸ ನಡೆಯುತ್ತಿದ್ದು ವಾರದಲ್ಲಿಎಲ್ಲಾರೈತರಖಾತೆಗೆತೆಂಗಿನ ಪರಿಹಾರ ಹಣ ಜಮಾ ಆಗಲಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಸಭೆಗೆ ತಿಳಿಸಿದರು.

       ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ ಹಿರಿಯೂರು ಚಿತ್ತಯ್ಯ ಎಂಬುವವರಿಗೆ ದಾಳಿಂಬೆ ವಿಮಾ ಪರಿಹಾರ ಮೊತ್ತ ಬಂದಿದ್ದು ನೀಡುವುದು ವಿಳಂಬವಾಗಿದೆ.ಇದರಿಂದ ಮಾನಸಿಕವಾಗಿ ನೊಂದಿದ್ದುಆತ್ಮಹತ್ಯೆಗೆ ಮುಂದಾಗುತ್ತೇನೆಎಂದು ಪತ್ರದ ಮೂಲಕ ವಾಟ್ಸಪ್ ಹಾಕಿದ್ದಾರೆ.ಈ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ಮಾತನಾಡಿಒಂದುಕೋಟಿ ಬರುವುದು ಬಾಕಿ ಇದ್ದುಅದರಲ್ಲಿ ಈ ರೈತರ ಮೊತ್ತವನ್ನು ನೀಡಲಾಗುತ್ತದೆಎಂದಾಗ ಬ್ಯಾಂಕ್ ಅಧಿಕಾರಿಗಳು ರೈತರ ಮನೆಗೆ ಭೇಟಿ ನೀಡಿ ಭರವಸೆಯನ್ನು ನೀಡಲು ತಿಳಿಸಿದರು.
ಶ್ರೀರಾಮುಲು ರವರು ಮೊಳಕಾಲ್ಮುರು ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಇದೆ.ಹಾಗೂ ಅಲ್ಟ್ರಾ ಸೌಂಡ್ ಮಷಿನ್ ಇದ್ದು ಆಪರೇಟರ್‍ ಇಲ್ಲದಕಾರಣ ಸುಮಾರು ದಿನಗಳಿಂದ ಕಾರ್ಯನಿರ್ವಹಿಸಿರುವುದಿಲ್ಲ.ಹೊರಗುತ್ತಿಗೆಯಡಿ ಆಪರೇಟರ್ ನೇಮಕ ಮಾಡಿಕೊಳ್ಳಲು ಜಿಲ್ಲಾಉಸ್ತುವಾರಿ ಕಾರ್ಯದರ್ಶಿ ಪಂಕಜ್‍ಕುಮಾರ್ ಪಾಂಡೆಯವರುಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗೆ ತಿಳಿಸಿದರು.

          ಸಭೆಯಲ್ಲಿ ಜಿಲ್ಲಾ ಪಂಚಾಯತ್‍ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸಂಸದರಾದ ಬಿ.ಎನ್.ಚಂದ್ರಪ್ಪ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾದ ಟಿ.ರಘುಮೂರ್ತಿ, ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಬಿ.ಶ್ರೀರಾಮುಲು, ಗೂಳಿಹಟ್ಟಿ ಡಿ.ಶೇಖರ್, ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಜಯಮ್ಮ ಬಾಲರಾಜ್, ಜಿಲ್ಲಾಉಸ್ತುವಾರಿ ಕಾರ್ಯದರ್ಶಿ ಪಂಕಜ್‍ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವೀಂದ್ರ ಹಾಗೂ ಕೆ.ಡಿ.ಪಿ.ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap