ಹರಪನಹಳ್ಳಿ :
ತಾಲೂಕಿನ ಚಿಗಟೇರಿ ಹೊಬಳಿ ವ್ಯಾಪ್ತಿಯ ಗೌರಿಪುರ, ಬಸವನಾಳು, ಹಗರಿ ಗಜಾಪುರ, ಬಳಿಗನೂರು, ಕೊಂಗನಹೊಸೂರು, ಚಿಗಟೇರಿ, ಬಾವಿಹಳ್ಳಿ, ನಂದಿಬೇವೂರು ಸೇರಿದಂತೆ ವಿವಿಧೆಡೆ ಪಶು ಸಂಗೋಪನೆ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ವರ್ಗ ಮನೆ ಮನೆಗೆ ತೆರಳಿ ರಾಸುಗಳಿಗೆ ಲಸಿಕೆ ಹಾಕುತ್ತಿದ್ದಾರೆ.
ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಡಾ.ಶಿವಕುಮಾರ ಮಾತನಾಡಿ, ವಿವಿಧ ತಂಡಗಳನ್ನು ರಚಿಸಿಕೊಂಡು ರಾಸುಗಳನ್ನು ಕಾಲುಬಾಯಿ ರೋಗದಿಂದ ಮುಕ್ತಗೊಳಿಸಲು ಲಸಿಕೆ ಹಾಕಲಾಗುತ್ತಿದೆ. ಹಂತ ಹಂತವಾಗಿ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಸಿಬ್ಬಂದಿಗಳು ಲಸಿಕೆ ಹಾಕುತ್ತಾರೆ. ಕಾಲುಬಾಯಿ ರೋಗ ದೇಶಕ್ಕಾಗಿ ಸಾಕುಪ್ರಾಣಿ ಮಾಲೀಕರು ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಹಿರಿಯ ವೈದ್ಯರಾದ ಡಾ.ಷಣ್ಮುಖಪ್ಪ ಪೂಜಾರ, ಜಿ.ಕೆಂಚಪ್ಪ, ಎಂ.ಈಶ್ವರಪ್ಪ, ಜಿಲಾನಿ, ಮಲ್ಲಿನಾಥ, ನಟರಾಜ, ನಾರಾಯಣ, ಮಲ್ಲಿಕಾರ್ಜುನ, ಮುನೇಗೌಡ ಇತರರಿದ್ದರು.