ಸಂಭ್ರಮ ಮತ್ತು ಸಡಗರದಿಂದ ಈದ್ ಮಿಲಾದ್ ಆಚರಣೆ

ಹುಳಿಯಾರು

       ಈ ವರ್ಷ ಬುಧವಾರ ಈದ್ ಮಿಲಾದ್ ಬಂದ ಕಾರಣ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಮಿಲಾದ್ ಆಚರಿಸಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಶುಕ್ರವಾರ ನಡೆಸಲು ನಿರ್ಧರಿಸಿದ್ದರು. ಅದರಂತೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಭ್ರಮ ಮತ್ತು ಸಡಗರದಿಂದ ಮೆರವಣಿಗೆ ನಡೆಸುವ ಮೂಲಕ ಮುಸ್ಲಿಂ ಬಾಂಧವರು ಈದ್ ಮಿಲಾದ್ ಆಚರಿಸಿದರು.

        ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮದ್ ಪೈಗಂಬರ್ ಹುಟ್ಟಿದ ದಿನವನ್ನು ಈದ್ ಮಿಲಾದ್ ಎಂದು ಆಚರಿಸಲಾಗುತ್ತಿದ್ದು ಹೋಬಳಿಯ ಎಲ್ಲಾ ಮಸೀದಿ ಮುತುವಲ್ಲಿಗಳ ನೇತೃತ್ವದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಇಸ್ಲಾಂ ಧರ್ಮದ ಚಿಹ್ನೆ ಚಂದ್ರ, ಮೆಕ್ಕಾ, ಮದೀನ, ಟಿಪ್ಪು ಸುಲ್ತಾನ್ ಖಡ್ಗದ ಸ್ತಭ್ಧ ಚಿತ್ರಗಳು ಮೆರವಣಿಗೆಗೆ ವಿಶೇಷ ಮೆರಗು ತಂದಿದ್ದವು.

        ಮೈಕ್ ಸೆಟ್‍ಗಳು, ಹಸಿರು ಧ್ವಜದ ಚಿತ್ತಾರ, ಮುಗಿಲು ಮುಟ್ಟಿದ ಅಲ್ಲಾಹುವಿನ ಘೋಷಣೆಗಳು ಮೆರವಣಿಗೆಯ ಅದ್ದೂರಿತನವನ್ನು ಹೆಚ್ಚು ಮಾಡಿತ್ತು. ಹುಳಿಯಾರಿನ ಅನೇಕ ಕಡೆ ಧ್ವಜ ಸ್ಥಾಪಿಸಿ ಬಣ್ಣಬಣ್ಣದ ಕಾಗದ, ಬಾವುಟಗಳಿಂದ ಸಿಂಗರಿಸಿ ಸಿರಿಯಲ್ ಸಟ್ ಬಿಟ್ಟಿದ್ದು ಮೆರವಣಿಗೆಯ ಅಂದ ಹೆಚ್ಚಿಸಿತ್ತು.

       ಮೆರವಣಿಗೆ ನಂತರ ಅನ್ನಸಂತರ್ಪಣೆ ನಡೆಸುವ ಮೂಲಕ ಮೆರವಣಿಗೆಗೆ ತೆರೆ ಎಳೆಯಲಾಯಿತು. ಹುಳಿಯಾರು, ಕಂಪನಹಳ್ಳಿ, ವೈ.ಎಸ್.ಪಾಳ್ಯ, ಬಳ್ಳೆಕಟ್ಟೆ, ಬರಗೀಹಳ್ಳಿ, ಯಳನಾಡು ಗ್ರಾಮಗಳ ಅಪಾರ ಸಂಖ್ಯೆಯ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap