ಐ.ಡಿ.ಹಳ್ಳಿ
ಹೋಬಳಿಯ ಮುದ್ದನೇರಳೆಕೆರೆ ಮತ್ತು ದಾಸಪ್ಪನಪಾಳ್ಯ ಗ್ರಾಮದ ಜನರಿಗೆ ಭಾನುವಾರ ಕಾವೇರಿ ಗ್ರಾಮೀಣ ಬ್ಯಾಂಕ್‍ನ ಮಧುಗಿರಿ ಶಾಖೆ ಮತ್ತು ಗರಣಿ ಶಾಖೆ ವತಿಯಿಂದ ಉಚಿತ ಉಳಿತಾಯ ಖಾತೆಗಳನ್ನು ಮಾಡಿಕೊಡಲಾಯಿತು. 167 ಪಿ.ಎಮ್.ಎಸ್.ಬಿ.ವೈ. ಮತ್ತು 152 ಡಿ.ಎಮ್.ಜೆ.ಜೆ.ಬಿ.ಎಮ್. ಹಾಗೂ 15 ಅಟಲ್ ಪಿಂಚಣಿ ವಿಮೆ ಯೋಜನೆಗಳನ್ನು ಉಚಿತವಾಗಿ ಜನರಿಗೆ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಮಾಡಿ ಕೊಟ್ಟರು.
ಈ ಸಂದರ್ಭದಲ್ಲಿ ಮಧುಗಿರಿ ಶಾಖಾ ವ್ಯವಸ್ಥಾಪಕರಾದ ಚೆನ್ನಿಗರಾಮಯ್ಯ, ಗರಣಿ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸಾಚಾರ್, ಮೋಹನ್ ಕುಮಾರ್, ಸಿಬ್ಬಂದಿ ಮತ್ತು ನರಸಿಂಹಯ್ಯ, ಗೋವಿಂದರಾಜು, ಕೂರ್ಲಪ್ಪ, ನರಸಿಂಹಮೂರ್ತಿ, ಚಿಕ್ಕ ಭೀಮಣ್ಣ, ಚಂದ್ರಣ್ಣ, ಲೀಲಾ ಸಾಗರ್, ಹರಿನಾಥ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ