ಹರಿಹರ:
ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ಫೆ.5 ಮತ್ತು 6ರಂದು ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಪುನರ್ ನಿರ್ಮಿತ ದೇವಸ್ಥಾನದ ಉದ್ಘಾಟನೆ ಹಾಗೂ ಶ್ರೀ ಸ್ವಾಮಿಯ ಗೋಪುರದ ಕಳಸಾರೋಹಣದ ಧಾರ್ಮಿಕ ಸಮಾರಂಭವನ್ನು ಆಯೋಜಿಸಿದೆ ಎಂದು ದೇವಸ್ಥಾನ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಎಚ್.ಕೆ.ಕನ್ನಪ್ಪ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.1ರಂದು ಬೆಳಿಗ್ಗೆ ಗ್ರಾಮದ ಆದಿದೇವತೆ ಶ್ರೀ ಕೆರೆ ಚೌಡೇಶ್ವರಿದೇವಿಗೆ ಗ್ರಾಮಸ್ಥರಿಂದ ಪೂಜಾ ಕಾರ್ಯಕ್ರಮ ನೆರೆವೇರಿಸಲಾಗುದು ಎಂದರು.
ಫೆ.5ರಂದು ಬೆಳಿಗ್ಗೆ 8ರಿಂದ ದೇವರಿಗೆ ಫಲ ಸಮರ್ಪಣೆ, ಮಹಾ ಸಂಕಪಲ್ಪ ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಪೂಜೆ, ಮಾತೃಕಾ ಪೂಜೆ, ನಾಧಿ ಸಮಾರಾಧನಾ, ಪ್ರಧಾನ ದೇವತಾ ಕಲಶ ಸ್ಥಾಪನಾ ಹಾಗೂ ಶ್ರೀ ಲಕ್ಷ್ಮಿನಾರಾಯಣಸ್ವಾಮಿ ಮೂರ್ತಿಗೆ ಪುನಃ ಪ್ರಾಣಪ್ರತಿಷ್ಠಾಪನಾ ನಂತರ ಸ್ವಾಮಿಯ ಮೂಲ ಮಂತ್ರದಿಂದ ಹೋಮ, ಹವನಾದಿ, ಪೂರ್ಣಾಹುತಿ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಫೆ.6ರಂದು ಬೆಳಿಗ್ಗೆ 9ರ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಕಳಸಾರೋಹಣ ಮತ್ತು ಧಾರ್ಮಿಕ ಸಭೆ ನಡೆಯಲಿದೆ. ಶೃಂಗೇರಿ ಶಂಕರಾಚಾರ್ಯ ಮಹಾ ಸಂಸ್ಥಾನದ ವಿದ್ಯಾಭಿನವ ವಿದ್ಯಾರಣ್ಯೆ ಭಾರತಿ ಶ್ರೀ ಕಳಸಾರೋಹಣ ನೆರೆವೇರಿಸುವರು.
ಸಿರಿಗೆರೆ ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ, ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು, ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಕನಕ ಪೀಠದ ನಿರಂಜನಾನಂದಪುರಿ ಶ್ರೀ, ನಂದಿಗುಡಿ ಬೃಹನ್ಮಠದ ಸಿದ್ಧರಾಮೇಶ್ವರ ಶ್ರೀ, ವೇಮನ ಪೀಠದ ವೇಮಾನಂದ ಶ್ರೀ, ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ, ಸಾವಿತ್ರಪೀಠದ ಶಂಕರಾತ್ಮನ ಸರಸ್ವತಿ ಶ್ರೀ, ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀ, ಚಿತ್ರದುರ್ಗ ಬಸವರಾಜ ಮಾಚಿದೇವ ಶ್ರೀ, ಚಿತ್ರದುರ್ಗ ಮಾದಾರಚನ್ನಯ್ಯ ಶ್ರೀ, ಛಲವಾದಿಪೀಠದ ಬಸವ ನಾಗಿದೇವ ಶ್ರೀ, ಮುಧೋಳ ಕುಂಬಾರ ಬಸವ ಗುಂಡಯ್ಯ ಶ್ರೀ ಸಾನಿಧ್ಯವಹಿಸುವರು.
ಎಸ್.ರಾಮಪ್ಪ ಅಧ್ಯಕ್ಷತೆವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಉದ್ಘಾಟಿಸುವರು, ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ ನಾಯಕ್ ನಾಮಫಲಕ ಅನಾವರಣೆ ಮಾಡುವರು. ಸಂಸದ ಜಿ.ಎಂ.ಸಿದ್ದೇಶ್ವರ, ಗ್ರಾಪಂ ಅರ್ಧಯಕ್ಷ ಬಸವನಗೌಡ ಪಾಟೀಲ್, ಎಂಎಲ್ಸಿಗಳಾದ ರಘು ಆಚಾರ್ಯ, ಮೋಹನ್ ಕೊಂಡಜ್ಜಿ, ಚೌಡರೆಡ್ಡಿ ಆರ್.ತೂಪಲಿ, ವೈ.ಎ.ನಾರಾಯಣಸ್ವಾಮಿ, ಕೆ.ಅಬ್ದುಲ್ ಜಬ್ಬಾರ್, ಮಾಜಿ ಸಿಚವ ರುದ್ರಪ್ಪ ಲಮಾಣಿ, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರಾದ ಡಾ.ವೈ.ನಾಗಪ್ಪ, ಎಸ್.ಎಸ್.ಮಲ್ಲಿಕಾರ್ಜುನ್, ಎಚ್.ಎಂ.ರೇವಣ್ಣ, ಮಾಜಿ ಶಾಸಕರಾದ ಎಚ್.ಎಸ್.ಶಿವಶಂಕರ್, ಬಿ.ಪಿ.ಹರೀಶ್, ಡಿಸಿ ಬಾಗಾದಿ ಗೌತಮ್, ಎಸ್ಪಿ ಆರ್.ಚೇತನ್, ಜಿಪಂ, ತಾಪಂ, ಗ್ರಾಪಂ ಸದಸ್ಯರು ವಿವಿಧ ಇಲಾಖೆ ಅಧೀಕಾರಿಗಳು ಗ್ರಾಮದ ಹಿರಿಯರು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
ಗೋಷ್ಠಿಯಲ್ಲಿ ದೇವಸ್ಥಾನದ ಮುಂಭಾಗದ ನಿವೇಶನಗಳನ್ನು ದಾನವಾಗಿ ನೀಡಿದ ದಾನಿಗಳಿಗೆ ಸತ್ಕರಿಸಲಾಗುವುದು. ಫೆ.4ರಂದು ಸಂಜೆ 7ರಿಂದ ಪ್ರಸಿದ್ಧ ಭಜನೆ ತಂಡಗಳಿಂದ ಸವಾಲ್ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದರು.ಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಡಿ.ಜಿ.ಪರಮೇಶ್ವರಪ್ಪ, ಡಿ.ಬಿ.ದೊಡ್ಡಬಸಪ್ಪ, ಬಿ.ಎಚ್.ಶ್ರೀನಿವಾಸ ರೆಡ್ಡಿ ಬಣಕಾರ, ಜೆ.ಕರಿಬಸಪ್ಪ, ಎ.ನಾರಾಯಣಪ್ಪ, ಎಚ್.ಟಿ.ಸ್ವಾಮಿಲಿಂಗಪ್ಪ, ಸಣ್ಣ ಕಾಳಪ್ಪರ ನಾರಾಯಣಪ್ಪ, ಬಸವರಾಜಚಾರಿ, ಯು.ಕೆ.ಅಣ್ಣಪ್ಪ, ಆರ್.ಸಿ.ಪಾಟೀಲ್ ಉಪಸ್ಥಿತರಿದರು.