ಗ್ರಾಮ ಪಂಚಾಯಿತಿಯ ವಾರ್ಡ್ ಸಭೆ

ಎಂ ಎನ್ ಕೋಟೆ :

           ಗುಬ್ಬಿ ತಾಲ್ಲೂಕಿನ ಸಮುದ್ರನಕೋಟೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ವಾರ್ಡ್ ಸಭೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ತ್ರಿವೇಣಿ ನಟರಾಜು ರವರ ಅಧ್ಯಕ್ಷತೆಯಲ್ಲಿ ನಡೆಯಿತ್ತು.

           ಉಪಾಧ್ಯಕ್ಷೆ ತ್ರಿವೇಣಿ ನಟರಾಜು ಮಾತನಾಡಿ ಸಮುದ್ರನಕೋಟೆ ಗ್ರಾಮಕ್ಕೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ ಸುಮಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಸಾಕಷ್ವು ಇದೆ. ಪಿಡಿಓಗೆ ತಿಳಿಸಿದರೂ ಯಾವುದೇ ಪ್ರಯೋಜನವಿಲ್ಲ ಕುಡಿಯುವ ನೀರಿನ ಟ್ಯಾಂಕರ್ ಗಳನ್ನು ತೊಳೆದು ಸುಮಾರು ವರ್ಷಗಳೇ ಕಳೆದಿದೆ. ಮೋಟಾರ್ ಪಂಫ್ ಗಳು ಸುಟುವಾಗಿವೆ ಆದರ ಬಗ್ಗೆ ಕ್ರಮಕೈಗೊಂಡಿಲ್ಲ ನೀರಿಗಾಗಿ ಸಾಕಷ್ವು ಸಮಸ್ಯೆ ಇದೆ.

            ಗ್ರಾಮಗಳಲ್ಲಿ ಚರಂಡಿಗಳನ್ನು ಸ್ವಚ್ಚಗೊಳಿಸಿಲ್ಲ ಇದರಿಂದ ಸಾಂಕ್ರಾಮೀಕ ರೋಗಗಳು ಬರುತ್ತಿವೆ. ಈಗಿದ್ದರೂ ಸಹ ತ್ಯಾಗಟೂರು ಗ್ರಾಮ ಪಂಚಾಯಿತಿ ನಿರ್ಲಕ್ಷ ವಹಿಸುತ್ತಿದೆ.ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಶೌಚಾಲಯಗಳಿಗೆ , ಮನೆ ಜಿಪಿಎಸ್ ಮಾಡಿಸಲು 500ರಿಂದ 1000 ಸಾವಿರವರೆಗೆ ಹಣವನ್ನು ಕೇಳುತ್ತಾರೆ. ಯಾವುದೇ ಕೆಲಸಗಳು ನಡೆಯಬೇಕು ಅಂದರೆ ಹಣ ಕೊಡಬೇಕು ಎಂದು ಗ್ರಾಮದ ಮಹಿಳೆ ಮಹಾದೇವಮ್ಮ ಆರೋಪಿಸಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಂಭಾಗದ ರಸ್ತೆಯಲ್ಲಿ ತಿಪ್ಪೆ ಇದೆ, ಇದರಿಂದ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ. ಮಕ್ಕಳಿಗೆ ಸಾಂಕ್ರಾಮೀಕ ರೋಗಗಳು ಹರಡುತ್ತಿವೆ.ಅಕ್ರಮವಾಗಿ ಪಂಚಾಯಿತಿಯಲ್ಲಿ ಬಿಲ್ ಗಳನ್ನು ಮಾಡಿಕೊಳುತ್ತಿದ್ದಾರೆ.

              ಗ್ರಾಮಗಳಲ್ಲಿ ಸಮಸ್ಯೆ ಇದ್ದರೂ ಸಹ ಬಗೆ ಹರಿಸುತ್ತಿಲ್ಲ ಯಾವುದೇ ಸಮಸ್ಯೆಗಳನ್ನು ಪಿಡಿಓ ಬಗೆಹರಿಸುವಲ್ಲಿ ವಿಫಲವಾಗುತ್ತಿದ್ದಾರೆ.ಬಡವರಿಗೆ ಯಾವುದೇ ಮಾಹಿತಿಗಳು ಸಿಗುತ್ತಿಲ್ಲ ಹಣ ಕೊಟ್ಟರೆ ಮಾತ್ರ ಕೆಲಸಗಳು ಆಗುತ್ತೇವೆ ಎಂದರು. ಯಾವುದೇ ಸಾಮಾನ್ಯ ಸಭೆ , ಗ್ರಾಮ ಸಭೆಗಳಿಗೆ ನೋಟಿಸ್ ಗಳನ್ನು ಮುಂಚಿತವಾಗಿಯೇ ಕೊಡಬೇಕು ಆದರೆ ತಡವಾಗಿ ಕೊಡುತ್ತಾರೆ. ನಮ್ಮಗೆ ಗೊತ್ತಾಗುವುದಿಲ್ಲ ಜನರಿಗೆ ನಾವು ಹೇಗೆ ತಿಳಿಸಬೇಕು.ಎಂದರು. ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

             ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೀರಪ್ಪ , ಬಿಲ್ ಕಲೆಕ್ವರ್ ಗೀತಾ , ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ರವೀಶ್ , ಹಾಗೂ ಆಶಾ ಕಾರ್ಯಕರ್ತರು ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link