ಕೊಟ್ಟೂರು
ಹಿಂದುತ್ವ ಅನ್ನುವುದೇ ನಾನ್ಸ್‍ಸೆನ್ಸ್, ಹಿಂದೂ ಎಲ್ಲಿದೆ? ಭಾರತೀಯತೆ ಎಲ್ಲರಲ್ಲಿ ಮನೆ ಮಾಡಬೇಕೇ ಹೊರೆತು ಹಿಂದುತ್ವ ಯಾರಲ್ಲೂ ಒಡಮೂಡಬಾರದು. ಹಿಂದುತ್ವದ ಶಬ್ದವೇ ಪ್ರತಿಯೊಬ್ಬರನ್ನು ಪ್ರತ್ಯೇಕಿಸುವುದು ಆಗಿದೆ. ಏಕತೆ, ಸಮಗ್ರತೆ, ಸಹಬಾಳ್ವೆಯ ತತ್ವದಡಿ ರಾಷ್ಟ್ರದ ಜನ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಪಟ್ಟಣದ ಹರಿಪ್ರಿಯ ಲ್ಯಾಂಡ್ ಮಾರ್ಕ್ ಹೋಟಲ್‍ನಲ್ಲಿ ಭಾನುವಾರ ಕೊಟ್ಟೂರಿನ ಹೆಚ್.ಕೆ.ಎಸ್.ಪ್ರಕಾಶನ ಆಯೋಜಿಸಿದ್ದ ಶಿಕ್ಷಕ ಶೆಕ್ಷಾವಲಿ ಮಣಿಗಾರ ಬರೆದ “ಕೇರಿ ಮುಟ್ಟಿದ ಮಾವು” ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಕುಂ.ವೀ ಮಾತನಾಡಿದರು.
ಅನಾವಶ್ಯಕವಾಗಿ ಅಲ್ಪಸಂಖ್ಯಾತರನ್ನು ಕೆಣುಕವ ಪ್ರಯತ್ನವನ್ನು ರಾಷ್ಟ್ರದಲ್ಲಿನ ಕೆಲವರು ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಇದು ಹೆಚ್ಚಾಗುತ್ತದೆ. ಇದರಿಂದಾಗಿ ಸಹಬಾಳ್ವೆ ಸಹಿಷ್ಣುತೆ ಹಾಳಾಗಿ ಹೋಗುತ್ತಿದೆ ಎಂದು ಹೇಳಿದ ಅವರು ರಾಷ್ಟ್ರ ನೆಮ್ಮದಿಯಿಂದ ಇರಲು, ಶ್ರೀಮಂತ ವಾಗಿರುವುದಕ್ಕೆ ಅಲ್ಪಸಂಖ್ಯಾತರಾದ ಮುಸ್ಲಿಂರು ಬದುಕಿ ಬಾಳುತ್ತಿರುವುದೇ ಪ್ರಮುಖ ಕಾರಣ. ಸಿಕ್ಕರ್, ಬೌದ್ದರು, ಮತ್ತಿತರರ ಅಲ್ಪಸಂಖ್ಯಾತರು ಕಾರಣರಾಗಿದ್ದಾರೆ ಎಂದರು.
ರಾಷ್ಟ್ರದಲ್ಲಿ ರಜಿಯಾ ಸುಲ್ತಾನ, ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನರಂತಹ ಇತಿಹಾಸಕಾರರು ಮತ್ತು ಅವರ ಬಗೆಗಿನ ಹೆಸರುಗಳನ್ನು ಅಪಮೌಲ್ಯಗೊಳಿಸುವ ದೊಡ್ಡ ಸಂಚಕಾರ ನಡೆದಿದೆ. ಇದನ್ನು ಸಮಗ್ರವಾಗಿ ವಿರೋಧಿಸುವುದೇ ಸೃಜನ ಶೀಲರ ಕೆಲಸ ಯಾವುದೇ ಕಾರಣಕ್ಕೂ ಇತಿಹಾಸವನ್ನು ತಿರುಚುವುದು ಮತ್ತು ಬದಲಾಯಿಸುವುದನ್ನು ಯಾರೊಬ್ಬರು ಒಪ್ಪಿಕೊಳ್ಳಬಾರದು ಎಂದು ಅವರು ಹೇಳಿದರು. ಮುಸ್ಲಿಂರು ಭಾರತೀಯರೇ ಹೊರತು. ಹಿಂದುಗಳಲ್ಲ. ಈ ಕಾರಣಕ್ಕಾಗಿ ಮುಸ್ಲಿಂಗರಿಗೆ ಭಾರತ ಸುರಕ್ಷಿತ ರಾಷ್ಟ್ರವಾಗಿದೆ ಇಂತಹ ವಾತಾವರಣವನ್ನು ಮುಂದವರೆಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯೆಂದು ಅವರು ಹೇಳಿದರು.
ಮುಸ್ಲಿಂ ಧರ್ಮದಲ್ಲಿನ ಉದಾತ್ತತೆ ಮತ್ತು ತತ್ವಗಳು ಉಳಿದೆಲ್ಲಾ ಧರ್ಮಗಳಿಗಿಂತ ಮಾದರಿಯಾಗಿದೆ. ಈ ಕಾರಣಕ್ಕಾಗಿಯೇ ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂನಾಗಿ ಹುಟ್ಟ ಬೇಕೆಂದು ಬಯಸಿರುವೆ. ಈ ಮಾತನ್ನು ಹೇಳುತ್ತಿದ್ದಂತೆ ಕೆಲವರು ನನ್ನನ್ನು ವಾಚಾಮ ಗೋಚರವಾಗಿ ನಿಂದಿಸಿದರು. ಈ ಮಾತಿಗೆ ಈಗಲೂ ನಾನು ಬದ್ದನಾಗಿರುವೆ ಎಂದು ಮತ್ತೊಮ್ಮೆ ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಬಂಡವಾಳ ಶಾಹಿಗಳ ಮೂರು ಲಕ್ಷ ಕೋಟಿರೂಗಳ ಸಾಲವನ್ನು ಮನ್ನಾ ಮಾಡಿದೆ ಆದರೆ ರೈತರ ಸಾಲವನ್ನು ಈ ಮಹಾಶಯರಿಗೆ ಮನ್ನಾ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ ಕುಂವೀ ಶೆಕ್ಷಾವಲಿ ಮಣಿಗಾರರಂತಹ ಲೇಖಕರು ವಾಸ್ಥವತೆಯ ಚಿತ್ರಣವನ್ನು ಹೆಚ್ಚು ಹೆಚ್ಚಾಗಿ ಬರೆಯುವ ಮೂಲಕ ಜಾಗೃತಿ ಮೂಡಿಸಬೇಕೆಂದರು.
ಗಜಲ್ ಕವಿ ಅಲ್ಲಾಗಿರಿರಾಜ ಕಾದಂಬರಿ ಕುರಿತು ಮಾತನಾಡಿ ಭಾರತ ರಾಷ್ಟ್ರ ಬದಲಾವಣೆಯಾಗಬೇಕಾದರೆ ದಲಿತ ಮತ್ತು ಮುಸ್ಲಿಂರಿಂದ ಮಾತ್ರ ಸಾಧ್ಯ ಇದೆ ಎಂದ ಅವರು ಕೆಳವರ್ಗದವರ ಬಗ್ಗೆ ಇರುವ ಮನೋಭಾವನೆಯನ್ನು ಪ್ರತಿಯೊಬ್ಬರು ಬದಲಾಯಿಸಿಕೊಳ್ಳ ಬೇಕು ಎಂದು ಹೇಳಿದರು. ಉತ್ತರ ಭಾರತದಲ್ಲಿ ಈಗಲು ಜಾತಿ ವ್ಯವಸ್ಥೆ ಮುಂದುವರಿದಿದೆ ಎಂದ ಆರೋಪಿಸಿದರು.
ವಿಷ್ಣುದೇವ ಮುಂದವರೆದ ಜನಾಂಗದ ವ್ಯಕ್ತಿಯಲ್ಲ ಆತ ದೇವದಾಸಿಯ ಮಗ ಆದರೂ ಆತನನ್ನು ಅಸ್ಪಪೃತೆ ಇಲ್ಲದೇ ಪೂಜಿಸಲಾಗುತ್ತಿದೆ ಆದರೆ ದಲಿತರನ್ನು ಏಕೆ ಈ ಮನೋಭಾವನೆಯಿಂದ ನೋಡಲಾಗುತ್ತಿಲ್ಲ ಎಂದು ಹೇಳಿದರಲ್ಲದೇ ಪುಸ್ತಕ ಕೇರಿ ಮುಟ್ಟಿದ ಮಾವು ಬರೆದ ಲೇಖಕ ಶೆಕ್ಷಾವಲಿ ತಮ್ಮ ಬರವಣಿಗೆಯ ಮೂಲಕ ಆತ್ಮದಿಂದ ಬರೆಯುವ ಪ್ರಯತ್ನಸಾಗಿಸುವ ಮೂಲಕ ಉಳಿದ ಲೇಖಕರಿಗೆ ದಾರಿಯಾಗಿದ್ದಾರೆ ಎಂದರು.
ಕಾರ್ಯಕ್ರಮವನ್ನು ಜಾನಪದ ಅಕಾಡೆಮಿ ಸದಸ್ಯ ಮಂಜಮ್ಮ ಜೋಗತಿ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರ ಸಂಘದ ಸಂಡೂರು ತಾಲೂಕು ಅಧ್ಯಕ್ಷೆ ಎಂ.ಆರ್.ಸುಮನ್, ರಹೀಮಾಬಿ, ಇಮಾಂಸಾಬ್, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಚಲನಚಿತ್ರ ಕೇಂದ್ರ ಪ್ರಾಮಾಣೀಕರಣ ಮಂಡಳಿ ಮಾಜಿ ಸದಸ್ಯ ಕೆ.ಅಬ್ದುಲ್ ಗನಿ ಅಧ್ಯಕ್ಷತೆವಹಿಸಿದ್ದರು.
ಕೇರಿ ಮುಟ್ಟಿದ ಮಾವು ಕಾದಂಬರಿ ಲೇಖಕ ಶೆಕ್ಷಾವಲಿ ಮಣಿಗಾರ್ ಮಾತನಾಡಿದರು. ಸೈಫ್ ಜಾನ್ಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಇಮಾಂಸಾಹೇಬ್ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ