ಮುಂಬರುವ ಜಯಂತಿಗಳ ಪೂರ್ವಭಾವಿ ಸಭೆ

ದಾವಣಗೆರೆ 

       ಫೆ. 19 ರಂದು ಶ್ರೀ ಛತ್ರಪತಿ ಶಿವಾಜಿ ಜಯಂತಿಯನ್ನು ಹಾಗೂ ಫೆ.20 ರಂದು ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮಗಳನ್ನು ಎಲ್ಲ ಸಮಾಜದವರು ಒಗ್ಗೂಡಿ ಆಚರಿಸುವಂತೆ ಹಾಗೂ ಈ ಜಯಂತಿಗಳಿಗೆ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

         ಶ್ರೀ ಛತ್ರಪತಿ ಶಿವಾಜಿ ಜಯಂತಿ ಹಾಗೂ ಶ್ರೀ ಸರ್ವಜ್ಞ ಜಯಂತಿ ಕಾರ್ಯಕ್ರಮಗಳನ್ನು ಜಿಲ್ಲಾಮಟ್ಟದಲ್ಲಿ ಆಯೋಜಿಸುವ ಕುರಿತು ಫೆ.08 ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀ ಛತ್ರಪತಿ ಶಿವಾಜಿ ಜಯಂತಿ : ಶ್ರೀ ಛತ್ರಪತಿ ಶಿವಾಜಿ ಜಯಂತಿಯನ್ನು ಫೆ.19 ರ ಬೆಳಿಗ್ಗೆ 11 ಕ್ಕೆ ನಗರದ ಶ್ರೀ ಕೃಷ್ಣ ಅಂಬಾ ಭವಾನಿ ಸಭಾಂಗಣದಲ್ಲಿ ಏರ್ಪಡಿಸಲು ಸಭೆ ತೀರ್ಮಾನಿಸಿತು.

         ಶ್ರೀ ಛತ್ರಪತಿ ಶಿವಾಜಿ ಕುರಿತು ವಿನಯ್ ಜಾಧವ್ ಅವರು ಉಪನ್ಯಾಸ ನೀಡುವರೆಂದು ಸಮಾಜದ ಮುಖಂಡರು ತಿಳಿಸಿದರು. ಹಾಗೂ ಮೆರವಣಿಗೆಯನ್ನು ಸಮಾಜದ ವತಿಯಿಂದ ನಡೆಸಲಾಗುವುದು ಎಂದು ತಿಳಿಸಿದರು.

         ಶ್ರೀ ಸರ್ವಜ್ಞ ಜಯಂತಿ : ಶ್ರೀ ಸರ್ವಜ್ಞ ಜಯಂತಿಯನ್ನು ಫೆ.20 ರಂದು ಬೆಳಿಗ್ಗೆ 11 ಕ್ಕೆ ನಗರದ ಕುವೆಂಪು ಕನ್ನಡ ಭವನ ಅಥವಾ ವಿರಕ್ತ ಮಠದಲ್ಲಿ ಆಯೋಜಿಸಲಾಗುವುದು ಎಂದು ಸಮಾಜದ ಮುಖಂಡರು ತಿಳಿಸಿದರು. ಶ್ರೀ ಸರ್ವಜ್ಞ ಕುರಿತು ಮಂಜಪ್ಪ ಬುರಡೆಕಟ್ಟೆ ಇವರು ಉಪನ್ಯಾಸ ನೀಡುವರೆಂದು ತಿಳಿಸಿದರು.

         ಅಪರ ಜಿಲ್ಲಾಧಿಕಾರಿಗಳು ಮಾತನಾಡಿ, ಎರಡೂ ಜಯಂತಿಗಳಿಗೆ ನಗರದ ಮೂರು ಕಡೆಯಲ್ಲಿ ಜಯಂತಿ ಪ್ರಚಾರಕ್ಕಾಗಿ ತಲಾ ಮೂರು ಫ್ಲೆಕ್ಸ್‍ಗಳನ್ನು ಹಾಕಿಸಲಾಗುವುದು. ಸಭಾಂಗಣದ ವೇದಿಕೆ, ಸಂಗೀತ ಕಾರ್ಯಕ್ರಮ, ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಣದ ಕೆಲಸ ಕಾರ್ಯವನ್ನು ಜಿಲ್ಲಾಡಳಿತವೇ ವಹಿಸಿಕೊಳ್ಳಲಿದೆ. ಜಯಂತಿಗಳ ವೇದಿಕೆ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಸಮಾಜದ ಜನತೆ ಪಾಲ್ಗೊಳ್ಳುವಿಕೆ ಇಳಿಮುಖವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಾಜದ ಮುಖಂಡರಿಗೆ ತಿಳಿಸಿದರು.

        ಸಭೆಯಲ್ಲಿ ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಎಲ್ಲ ಸಮಾಜದ ಜನರು ಒಗ್ಗೂಡಿ ವಿವಿಧ ಸಮಾಜಗಳ ಮಹನೀಯರ ತತ್ವಾದರ್ಶಗಳ ಬಗ್ಗೆ ತಿಳಿಯುವ ಉದ್ದೇಶದಿಂದ ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಎಲ್ಲ ಸಮಾಜ ಬಾಂಧವರು ಪಾಲ್ಗೊಳ್ಳಬೇಕೆಂದರು.

        ಸಭೆಯಲ್ಲಿ ಮರಾಠ ಸಮಾಜದ ಜಿಲ್ಲಾಧ್ಯಕ್ಷ ಮಾಲತೇಶ್ ಜಾಧವ್ ಡಿ, ಉಪಾಧ್ಯಕ್ಷ ಅಜ್ಜಪ್ಪ ಪವಾರ್, ಖಜಾಂಚಿ ಎಂ.ಗೋಪಾಲರಾವ್, ಜೀಜಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ಗೌರೌಬಾಯಿ, ಇತರೆ ಮುಖಂಡರು, ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಕುಂಚೂರು, ಕರ್ನಾಟಕ ಪ್ರಾದೇಶಿಕ ಕುಂಬಾರ ಸಮಾಜದ ಅಧ್ಯಕ್ಷ ಪುಷ್ಪರಾಜ್, ರಾಜ್ಯ ಸಂಘಟನಾ ಕಾರ್ಯದರ್ಶಿ ಕರಿಬಸಪ್ಪ ಟಿ, ಜಿಲ್ಲಾ ಕೋಶಾಧ್ಯಕ್ಷ ಕೆ.ಸಿ.ಲೋಕೇಶ್, ಗಣೇಶಪ್ಪ, ಪರಮೇಶ್ವರಪ್ಪ ಕತ್ತಿಗಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link