ಕನಕದಾಸರ 531 ನೇ ಜಯಂತ್ಯೋತ್ಸವ

ಗುಬ್ಬಿ

        ಮಹಾನ್ ದಾರ್ಶನೀಕರ ತತ್ವಾಧರ್ಶಗಳನ್ನು ಪ್ರಸ್ತು ದಿನಗಳಲ್ಲಿ ಪ್ರತಿಯೊಬ್ಬರೂ ಅಳವಢಿಸಿಕೊಂಡಾಗ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

       ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲ್ಲೂಕು ಆಢಳಿತ, ತಾಲ್ಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಮತ್ತು ತಾಲ್ಲೂಕು ಕುರುಬರ ಸಮಾಜದ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಾ ಸಂತ ದಾರ್ಶನಿಕ ದಾಸಶ್ರೇಷ್ಠ ಶ್ರೀಭಕ್ತ ಕನಕದಾಸರ 531 ನೇ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನಕ ದಾಸರ ಪ್ರತಿಯೊಂದು ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ಮಾದರಿಗಳಾಗಿದ್ದು ಪ್ರತಿಯೊಬ್ಬರೂ ನಮ್ಮ ಮಹಾತ್ಮರ ಆಧರ್ಶಗಳನ್ನು ಸಾಮಾಜಿಕ ಬದುಕಿನಲ್ಲಿ ಅಳವಢಿಸಿಕೊಂಡಾಗ ಸುಸಂಸ್ಕತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

        ಭಕ್ತ ಕನಕ ದಾಸರ ತತ್ವಾಧರ್ಶಗಳನ್ನು ಸಾಮಾಜಿಕ ಬದುಕಿನಲ್ಲಿ ಅಳವಢಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದ ಅವರು ಹಿಂದುಳಿದ ಸಮುದಾಯಗಳು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃಧ್ದಿ ಹೊಂದಿದಾಗ ಮಾತ್ರ ಸಮಾಜದ ಸರ್ವತೋಮುಖ ಅಭಿವೃಧ್ದಿ ಸಾಧ್ಯ ಎಂದು ತಿಳಿಸಿದರು.

         ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಣ್ಣ, ಗುಬ್ಬಿಯಲ್ಲಿ ವಾಸಣ್ಣ ಎಂದು ಗುರುತು ಮಾಡಿದ್ದೀರಾ ನಾನು ಎಷ್ಟೆ ಕೆಲಸ ಮಾಡಿದರು ಅದು ಸಣ್ಣದೆ ಏಕೆಂದರೆ ನೀವು ಕೊಟ್ಟಿರುವ ಶಕ್ತಿ ಆಪಾರವಾದುದು ಈ ಭಾರಿ ನನ್ನ ಗೆಲುವಿಗೆ ನೀವೆಲ್ಲ ಶ್ರಮಿಸಿ ಗೆಲ್ಲಿಸಿದ್ದು ನಿಮ್ಮಗಳ ಸೇವೆಯಲ್ಲಿ ನಾನು ಸದಾ ಇರುತ್ತೇನೆ ನಿಮ್ಮ ಸಹಾಯವನ್ನು ನಾನು ಸಾಯುವವರೆಗೂ ಮರೆಯುವುದಿಲ್ಲ ವ್ಯಕ್ತಿತ್ವ ಬಹಳ ಮುಖ್ಯವಾಗಿದ್ದು ಸಮಾಜದಲ್ಲಿ ಬದುಕುವಾಗ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ನಮ್ಮ ಜೀವನದಲ್ಲಿ ಯಾರಿಗೂ ತೊಂದರೆ ನೀಡದಂತೆ ಕೆಲಸ ಮಾಡಬೇಕು ಸಮಾಜಕ್ಕೆ ನಮ್ಮಿಂದ ಏನಾದರೂ ಕೂಡುಗೆ ನೀಡುವಂತಹ ಕೆಲಸವನ್ನು ನಾವು ಮಾಡಬೇಕು ಕನಕದಾಸರ ಪ್ರತಿಯೊಂದು ಕಿರ್ತನೆಗಳು ಸಹ ಜನರಿಗೆ ಹತ್ತಿರವಾಗಿದ್ದು ಅವೆಲ್ಲವನ್ನು ನಾವು ಪಾಲಿಸಬೇಕು ಎಂದು ತಿಳಿಸಿದರು.

          ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ರಾಮಾಂಜಿನಯ್ಯ ಮಾತನಾಡಿ ಮಹಾಪುರುಷರ ಆಧರ್ಶಗಳು ಸಾಮಾಜಿಕ ಬದಲಾವಣೆಗೆ ಮಹತ್ವವಾದವುಗಳಾಗಿದ್ದು ಭಕ್ತ ಕನಕದಾಸರ ಚಿಂತನೆಗಳು ಮತ್ತು ಆಧರ್ಶಗಳು ಹೆಚ್ಚು ಪ್ರಸ್ತುತವಾಗಲಿವೆ ಎಂದು ತಿಳಿಸಿದ ಅವರು ಇಂದಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಗಳನ್ನು ಕೊಡಿಸುವ ಮೂಲಕ ಸಮಾಜವನ್ನು ಅಭಿವೃಧ್ದಿ ಪಥದತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

           ಜಯಂತಿಗಳನ್ನು ಮಾಡುವುದರಿಂದ ಸಮುದಾಯದ ಅಭಿವೃದ್ದಿ ಸಾದ್ಯವಾಗುತ್ತದೆ. ಪ್ರತಿಯೂಂದು ಸಮುದಾಯವು ಒಬ್ಬೊಬ್ಬರು ಆದರ್ಶ ವ್ಯಕ್ತಿಗಳ ಜಯಂತಿ ಮಾಡುವ ಮೂಲಕ ಒಗ್ಗಟ್ಟಿಗೆ ಹಾಗೂ ಒಂದೆಡೆ ಸೇರಿ ಸಮುದಾಯದ ಸರ್ವತೋಮುಖ ಅಭಿವೃದ್ದಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.

          ಸಾಹಿತಿ ಹಾಗೂ ಜನಪದ ತಜ್ಞ ಡಾ:ಎಣ್ಣೆಕಟ್ಟೆ ಚಿಕ್ಕಣ್ಣ ಮಾತನಾಡಿ ತಳಮಟ್ಟದ ಸಮುದಾಯದ ದನಿಯಾಗಿ ಕನಕದಾಸರ ಕಿರ್ತನೆಗಳು ದಾರಿ ತಪ್ಪುತ್ತಿದ್ದ ಜನರ ಹಾಗೂ ಸಮುದಾಯವನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋದವು ಎಂದು ತಿಳಿಸಿದ ಅವರು ಕನಕ ದಾಸರ ಚಿಂತನೆಗಳು ಮಹತ್ವ ಪೂರ್ಣವಾದವುಗಳಾಗಿದ್ದು ಪ್ರತಿಯೊಬ್ಬರೂ ಅವರ ಆಧರ್ಶಗಳನ್ನು ಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವಂತೆ ತಿಳಿಸಿದರು.

          ಸಮಾರಂಭದಲ್ಲಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಜಿ.ಕಲ್ಪನಾ, ತಹಸಿಲ್ದಾರ್ ಜಿ.ವಿ.ಮೋಹನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ಧೇಶಕ ಯೋಗಾನಂದ್, ಎಪಿಎಂಸಿ ಅಧ್ಯಕ್ಷ ಹೆಚ್.ಟಿ.ರೇವಣ್ಣ, ಸರ್ಕಾರಿ ಅಭಿಯೋಜಕ ಮುನಿರಾಜು, ಟಿಎಪಿಎಂಎಸ್ ನಿರ್ಧೇಶಕ ಹೆಚ್.ಸಿ,ಪ್ರಭಾಕರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಗುರುರೇಣುಕಾರಾಧ್ಯ, ಕಾರ್ಯದರ್ಶಿ ಹೆಚ್.ಡಿ.ಯಲ್ಲಪ್ಪ, ತಾಲ್ಲೂಕು ಕುರುಬ ಸಮಾಜದ ಗೌರವಾಧ್ಯಕ್ಷ ಹೆಚ್.ಡಿ.ರಂಗಸ್ವಾಮಿ, ಅಧ್ಯಕ್ಷ ಎಸ್.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಎನ್.ನಿಂಗರಾಜು, ಪದಾಧಿಕಾರಿಗಳಾದ ನಿಂಬೆಕಟ್ಟೆಜಯಣ್ಣ, ಸಣ್ಣರಾಮಯ್ಯ, ಚಿಕ್ಕೇಗೌಡ, ಶಿವರಾಜು, ಬಸವರಾಜು, ಬೀರೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap