ಹೊಳಲ್ಕೆರೆ:
ರಾಜಕೀಯ ಪಕ್ಷವಾದ ಬಿಜೆಪಿಯನ್ನು ಕರ್ನಾಟಕದಲ್ಲಿ ಸಂಘಟನೆಯ ರೀತಿಯಲ್ಲಿ ವ್ಯವಸ್ಥಿತವಾಗಿ ಕಟ್ಟಿದ ಬುದ್ದಿವಂತ, ಹಲವು ಭಾಷೆಗಳ ಮೇಲೆ ಅದ್ಭುತ ಹಿಡಿತವನ್ನು ಹೊಂದಿದ್ದ ಸಾಮಾನ್ಯ ಕಾರ್ಯಕರ್ತರು ಕೂಡ ದೊಡ್ಡ ನಾಯಕರಾಗಬಹುದು ಎನ್ನುವ ಮಾತನ್ನು ಸತ್ಯ ಮಾಡಿದ್ದ ವಿದ್ಯಾರ್ಥಿ ನಾಯಕ ಎಂದು ಸ್ಥಾಯಿಸಮಿತಿ ಅಧ್ಯಕ್ಷ ಜಗದೀಶ್ ಬಿಜೆಪಿ ಕಚೇರಿಯಲ್ಲಿ ಭಾವ ಪೂರ್ಣ ಶ್ರಧ್ದಾಂಜಲಿ ಸಲ್ಲಿಸಿ ಮಾತನಾಡಿದರು.
ಬಿಜೆಪಿಯಂತಹ ಶಿಸ್ತಿನ ಪಕ್ಷಕ್ಕೆ ಹೊಂದಿಕೊಳ್ಳುವ ಹಲವು ನಾಯಕರಾರನ್ನು ಸೃಷ್ಟಿ ಮಾಡಿ ಬೆಳೆಸಿದ ಲೀಡರ್, ಸಂಘಟನೆಯ ಚಾತುರ್ಯದಿಂದ ಸಂಘದ ಪ್ರಮುಖರ, ಅಟಲ್‍ಜೀ, ಅಡ್ವಾಣಿ, ಮೋದಿಯವರ ಮನಸ್ಸು ಗೆದ್ದಿದ್ದ ಹಿರಿಯ ಮುಖಂಡರಾದ ಅನಂತ್ ಕುಮಾರ್ ಇನ್ನಿಲ್ಲ ಎಂದು ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಸೂರೇಗೌಡ ಹಾಗೂ ಎಲ್ಲಾ ಬಿಜೆಪಿ ಮುಖಂಡರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ