ಚಿತ್ರದುರ್ಗ
ರಾಜ್ಯದಲ್ಲಿ ವಾಸವಾಗಿರುವ ನಧಾಫ್/ಪಿಂಜಾರ್ ಜನಾಂಗದ ಭವಿಷ್ಯದ ಪ್ರಗತಿಗಾಗಿ ರಾಜ್ಯ ಮಟ್ಟದ ಸಲಹಾ ಕಾರ್ಯಕ್ರಮವೂ ಡಿ. 16 ರಂದು ನಡೆಯಲಿದೆ ಎಂದು ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ಕಾರ್ಯದರ್ಶೀ ಶಫೀವುಲ್ಲಾ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆವರು ರಾಜ್ಯದಲ್ಲಿ ಸುಮಾರು 40 ಲಕ್ಷ ಜನಸಂಖ್ಯೆಯಿದ್ದರೂ ಸಹಾ ಸರ್ಕಾರ ನಮ್ಮನ್ನು ಗುರುತಿಸುವ ಕೆಲಸವನ್ನು ಮಾಡಿಲ್ಲ ಈಗಲೂ ಸಹಾ ನಮ್ಮವರು ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಹಿಂದೆ ಉಳಿದಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡುವ ಸಲುವಾಗಿ ಮತ್ತು ಜನಾಂಗವನ್ನು ಸಂಘಟನೆ ಮಾಡುವ ಸಲುವಾಗಿ ಡಿ. 16 ರ ಭಾನುವಾರ ನಗರದ ಹೊರವಲಯದ ಸೀಬಾರದ ವಿಶ್ವ ಮಾನವ ಶಾಲಾ ಆವರಣದಲ್ಲಿ ರಾಜ್ಯ ಮಟ್ಟದ ಸಲಹಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಸಂಘದ ರಾಜ್ಯಾಧ್ಯಕ್ಷರಾದ ನಧಾಫ್, ಕಾರ್ಯದರ್ಶಿ ಪಿ.ಬಿ.ನಧಾಫ್. ದಾದಾ ಕಲಂದರ್ ಜೆ.ಪಿ. ನಧಾಫ್, ಇಬ್ರಾಹಿಂ ನಾಗನೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಮುಖಂಡರು ಭಾಗವಹಿಸಲಿದ್ದಾರೆ ಇದೇ ಸಂದರ್ಭದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಸಂಘದ ರಾಜ್ಯಾಧ್ಯಕ್ಷ ಆಯ್ಕೆ ಬಗ್ಗೆಯೂ ಸಹಾ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಗೋಷ್ಟಿಯಲ್ಲಿ ಷಾರಿಪಾಬಿ, ಬಿ.ಸುಭಾನ್ ,ಹಸನ್‍ಸಾಬ್ ಮೌಲಾನ ಸಾಬಿ ರಷೀದ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ