ಪೊಲೀಸ್ ಠಾಣೆ ನೊಂದವರಿಗೆ ಭರವಸೆಯ ಕೇಂದ್ರವಾಗಬೇಕು; ಜಿಲ್ಲಾಧಿಕಾರಿ ಗಿರೀಶ್ ಸಲಹೆ

ಚಿತ್ರದುರ್ಗ 
ಸಮಾಜದಲ್ಲಿ ನೊಂದವರು ಶೋಷಿತರಿಗೆ ಪೊಲೀಸ್ ಠಾಣೆಗಳು ಭರವಸೆಗಳನ್ನು ಈಡೇರಿಸುವ ಕೇಂದ್ರಗಳಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ಧಾರೆ.
ಜಿಲ್ಲಾ ಸಶಸ್ತ್ರಮೀಸಲು ಪಡೆಯ ಆವರಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ  ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ   ಹುತಾತ್ಮರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದರು. 
ದೇಶದಲ್ಲಿ ದೆಹಲಿ ಬಿಟ್ಟರೆ ಕರ್ನಾಟಕ ಪೊಲೀಸರಿಗೆ ಉತ್ತಮ ಹೆಸರಿದೆ. ಪೊಲೀಸರು ಸಹ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಅಪರಾಧಿಗಳನ್ನು ಹಿಡಿದು ಶಿಕ್ಷೆ ಕೊಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಲು  ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ ಎಂದರು. 
ಸಿಗ್ನಲ್‍ಗಳಲ್ಲಿ  ಸಂಚಾರಿ ನಿಯಮ ಪಾಲಿಸುವ ಮುನ್ನ ಪೊಲೀಸರು ಇದ್ದಾರೆಯೇ ಎಂದು ನೋಡಲಾಗುತ್ತದೆ. ಪೊಲೀಸರು ಇದ್ದರೆ ಮಾತ್ರ ಕೆಲವರು ಸಂಚಾರಿ ನಿಯಮ  ಪಾಲಿಸುತ್ತಾರೆ. ಇಲ್ಲದಿದ್ದರೆ ಉಲ್ಲಂಘಿಸಲಾಗುತ್ತದೆ. ಇದು ತಪ್ಪು ಇರಲಿ ಬಿಡಲಿ ಸಂಚಾರಿ ನಿಯಮ ಪಾಲಿಸುವಂತೆ  ಕಿವಿಮಾತು ಹೇಳಿದರು. 
ಸಮಾಜದಲ್ಲಿ ನೊಂದವರು ಶೋಷಿತರು ಏನಾದರೂ ನ್ಯಾಯ ಸಿಗಬಹುದೆಂಬ ಭರವಸೆಯಿಂದಾಗಿ ಪೊಲೀಸ್ ಠಾಣೆಗಳಿಗೆ ಬರುತ್ತಾರೆ. ಪೊಲೀಸ್ ಠಾಣೆಗಳು ಭರವಸೆಗಳನ್ನು ಈಡೇರಿಸುವ ಕೇಂದ್ರಗಳಾಗಬೇಕು. ನೊಂದವರಿಗೆ ನೋವು ಉಂಟು ಮಾಡದೆ ಕಣ್ಣಿರು ಒರೆಸುವಂತೆ ಸೂಚಿಸಿದರು. 
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ಮಾತನಾಡಿ, ಹಾಲಿ ಪೊಲೀಸರ ಬಳಿ ಹಳೆ ಆಯುಧಗಳಿವೆ. ಇದರಿಂದ ವೈರಿಗಳನ್ನು ಎದುರಿಸುವುದು ಕಷ್ಟಸಾಧ್ಯ. ವೈರಿಗಳ ಬಳಿ ಅತ್ಯಂತ ಹೊಸ ಹೊಸ ಆಯುಧಗಳು ಇರುವುದರಿಂದ  ಪೊಲೀಸರು ಎದುರಿಸಲಾಗದೆ ಪ್ರಾಣವನ್ನು ಬಲಿ ಕೊಡಬೇಕಾಗುತ್ತದೆ.  ಇದೊಂದು ದುರದೃಷ್ಟಕರ ಮತ್ತು ದುರಂತ. ಇದಕ್ಕೆ ಕಡಿವಾಣ ಹಾಕಬೇಕಾದರೆ ಆಧುನಿಕ ಸಶಾಸ್ತ್ರಗಳನ್ನು ಒದಗಿಸುವಂತೆ ಆಗ್ರಹಿಸಿದರು. 
ಪೊಲೀಸರು ಇಲ್ಲದ ಸಮಾಜ ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಿತ್ಯ ನೆಮ್ಮದಿಯಾಗಿ ನಿದ್ದೆ ಮಾಡಿ ಜೀವನ ನಡೆಸುತ್ತಿದ್ದರೆ ಅದಕ್ಕೆ ಕಾರಣ ಪೊಲೀಸರು. ಸಂಚಾರಿ ನಿಯಮ ಪಾಲಿಸುವ ಕಾನೂನು ಇದ್ದರೂ ಅದನ್ನು ಯಾರು ಪಾಲಿಸುವುದಿಲ್ಲ. ಅದನ್ನು ಹೇಳಲು ಪೊಲೀಸರು ಬರಬೇಕಾಗಿದೆ. ಹೆಲ್ಮೇಟ್ ಹಾಕಿಕೊಳ್ಳುವಂತೆ ಹೇಳಿದರೂ ಕೇಳುವುದಿಲ್ಲ. ಹೆಲ್ಮೇಟ್ ಪೊಲೀಸರಿಗಾಗಿ ಧರಿಸಬೇಡಿ ನಿಮ್ಮ ಪ್ರಾಣ  ಉಳಿಸಿಕೊಳ್ಳುವುದಕ್ಕಾಗಿ ಧರಿಸುವಂತೆ ಮನವಿ ಮಾಡಿದರು.
ಸಮಾಜದಲ್ಲಿ ಆಂತರಿಕ ಮತ್ತು ಬಾಹ್ಯ ಎರಡು ಸಮಸ್ಯೆಗಳಿವೆ. ಆಂತರಿಕ ಸಮಸ್ಯೆ ಬಗೆಹರಿಸಲು ಪೊಲೀಸರ ಜೊತೆ ಸಾರ್ವಜನಿಕರು ಕೈ ಜೋಡಿಸಬೇಕು. ಪೊಲೀಸರೆ ಮಾಡಲಿ ನನಗೇನು ಎನ್ನುವ ಭಾವನೆ ಬಿಡಿ. ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವುದರಿಂದಲೇ ಸುವ್ಯವಸ್ಥೆ ಸಮಾಜ ನಿರ್ಣಾಮವಾಗಿದೆ ಎಂದರು. 
ಪೊಲೀಸರು ಕರ್ತವ್ಯ, ಕುಟುಂಬ, ಸಮಾಜ ಎಲ್ಲವನ್ನು ಸಮತೋಲನವಾಗಿ ನೋಡಿಕೊಳ್ಳಬೇಕು. ಯಾವುದಕ್ಕೂ ಹೆಚ್ಚು ಒತ್ತು ಕೊಡದೆ ಇದ್ದರೂ ಕಷ್ಟ. ಏನೆ ಆಗಲಿ ಮೈ ಮರೆಯದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ  ಜನರಿಗೆ ರಕ್ಷಣೆ ಕೊಡುವಂತೆ ಹೇಳಿದರು.
 ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ಸ್ಮರಿಸಿ ಗೌರವ ಸಲ್ಲಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ರಾಮಅರಸಿದ್ದಿ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಅಧಿಕಾರಿ ಕೆ.ಪಾಪಣ್ಣ ಹಾಗೂ ಇತರರು ಭಾಗವಹಿಸಿದ್ದರು. ದೈಹಿಕ ಶಿಕ್ಷಕ ಕೆ.ಎಚ್.ಶಿವರಾಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link