ತುರುವೇಕೆರೆ:
ಯಾರಿಗೆ ತಮ್ಮ ಮಗು ಬೆಳೆಸಲು ಇಷ್ಟವಿಲ್ಲದವರು ಸರ್ಕಾರಿ ಆಸ್ಪತ್ರೆಯಲ್ಲಿರುವ ಮಮತೆಯ ತೊಟ್ಟಿಲಿಗೆ ಬಿಟ್ಟರೆ ಸರ್ಕಾರವೇ ಅಂತಹವರ ನಿರ್ವಹಣೆ ಮಾಡಲು ಮುಂದಾಗಿದೆ ಎಂದು ಉಪವಿಭಾಗಾಧಿಕಾರಿ ಪೂವಿತಾ ತಿಳಿಸಿದರು.
ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯ ಇಲಾಖೆ, ಮಕ್ಕಳ ರಕ್ಷಣಾ ಘಟಕ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ನವಜಾತ ಶಿಶುಗಳ ಕುರಿತು ಜಾಗೃತಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು ತನ್ನದಲ್ಲದ ತಪ್ಪಿಗೆ ಹೊಲಗದ್ದೆ, ಗಿಡದ ಪೊದರು, ಚರಂಡಿಯಂತ ಅಪಾಯಕಾರಿ ಸ್ಥಳಗಳಲ್ಲಿ ಅಮಾಯಕ ಮಕ್ಕಳುಗಳನ್ನು ಬಿಟ್ಟುಹೋಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇಂತಹ ಅಮಾನವೀಯ ಕೃತ್ಯಕ್ಕೆ ಕೈಹಾಕದೆ ಶಿಶುಗಳ ರಕ್ಷಣೆಗೆ ಮುಂದಾಗಬೇಕು.
ಆ ಹಿನ್ನಲೆಯಲ್ಲಿ ಆಶಾ ಕಾರ್ಯಕರ್ತೆಯರು ಹಾಗು ಅಂಗನವಾಡಿ ಕಾರ್ಯಕರ್ತೆಯರು ಇಂತಹ ಕೃತ್ಯಗಳನ್ನು ತಡೆಯಲು ಮುಂದಾಗಬೇಕು. ಹಾಗು ಗ್ರಾಮೀಣ ಹಾಗು ಪಟ್ಟಣ ಪ್ರದೇಶದಲ್ಲಿ ಇಂತಹವರ ಬಗ್ಗೆ ನಿಗಾ ವಹಿಸುವುದರ ಜೊತೆಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.
ಆರೋಗ್ಯಾಧಿಕಾರಿ ಡಾ|| ತಿರುಪತಯ್ಯ ಮಾತನಾಡಿ ಆಶಾ ಕಾರ್ಯಕರ್ತೆಯರು ಹಾಗು ಅಂಗನವಾಡಿ ಕಾರ್ಯಕರ್ತೆಯರು ಎರಡು ತಿಂಗಳ ಗರ್ಬಿಣಿಯರನ್ನು ಗುರ್ತಿಸಿ ನೊಂದಣಿ ಮಾಡಿಕೊಳ್ಳುವ ಜೊತೆಗೆ ಅವರಿಗೆ ಕಾನೂನಿನ ಅರಿವು ಮೂಡಿಸಬೇಕಿದೆ ಎಂದರು.
ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಟ್ಟುಹೋಗುವವರ ವಿರುದ್ದ ಯಾವ ರೀತಿ ಕಾನೂನು ಕೈಗೆತ್ತಿಕೊಳ್ಳುತ್ತದೆ ಎಂಬುದರ ಬಗ್ಗೆ ಮಕ್ಕಳ ರಕ್ಷಣಾ ಘಟಕದ ಗೌತಮ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಿಡಿಪಿಓ ಪುಟ್ಟಸ್ವಾಮಿ, ಕ.ರಾ.ಸ.ನೌ.ಸಂಘದ ಪ್ರಹ್ಲಾದ್, ಆರೋಗ್ಯ ಇಲಾಖೆಯ ಚಂದ್ರಶೇಕರ್, ಬೋರೇಗೌಡ, ಸುರೇಶ್, ಆರ್‍ಐ ಶಿವಕುಮಾರ್, ಪವನ್ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕತೆಯರು ಪಾಲ್ಗೋಂಡಿದ್ದರು. ಕಾರ್ಯಕ್ರಮದ ತರುವಾಯ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







