ಸಾಹಿತ್ಯ ಕೃಷಿಯತ್ತ ಒಲವು ತೋರಬೇಕು;ರೇವಣ್ಣ

ಚಿತ್ರದುರ್ಗ;

      ಎಷ್ಟು ಪುಸ್ತಕಗಳನ್ನು ಕೊಂಡಿದ್ದೇವೆ ಎನ್ನುವುದು ಮುಖ್ಯವಲ್ಲ ಅದರಿಂದ ಎಷ್ಟು ಜ್ಞಾನವನ್ನು ಗಳಿಸಿಕೊಂಡಿದ್ದೇವೆ ಎನ್ನುವುದು ಮುಖ್ಯ ಎಂದು ಸಾಹಿತಿ ಡಾ|| ಬಳ್ಳಾರಿ ರೇವಣ್ಣ ಹೇಳಿದರು.

       ಜಿಲ್ಲಾ ವಿಶ್ವ ಕಲ್ಯಾಣ ಗ್ರಾಹಕ ಪರಿಸರ ಸಾಂಸ್ಕತಿಕ ಪರಿಷತ್, ಜಿಲ್ಲಾ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಮಂಜುನಾಥ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆ, ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ವಿಕಲಚೇತನರ ದಿನಾಚರಣೆ ಅಂಗವಾಗಿ ಪತ್ರಕರ್ತರ ಭವನದಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

        ಸಾಹಿತ್ಯಕ್ಕೆ ಸಮಾಜದ ಓರೆ-ಕೋರೆಗಳನ್ನು ತಿದ್ದುವ ಸಾಮಥ್ರ್ಯವಿರುವುದರಿಂದ ಪ್ರತಿಯೊಬ್ಬರು ಸಾಹಿತ್ಯವನ್ನು ಪ್ರೀತಿಸಬೇಕು. ಆ ನಿಟ್ಟಿನಲ್ಲಿ ಯುವ ಪೀಳಿಗೆ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಲು ಮುಂದೆ ಬರಬೇಕು. ಸೂರ್ಯಚಂದ್ರ ಇರುವವರೆಗೂ ಕನ್ನಡ ಭಾಷೆ ಇರುತ್ತದೆ. ಆದ್ದರಿಂದ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ಕನ್ನಡಿಗ ಶ್ರಮಿಸಬೇಕೆಂದು ತಿಳಿಸಿದರು.

        ಸಹ ಪ್ರಾಧ್ಯಾಪಕ ಬೆಳಗಟ್ಟ ಟಿ. ಬಸವರಾಜಪ್ಪ ಮಾತನಾಡಿ, ಅಂಗವಿಕಲರನ್ನು ಅಂಗವಿಕಲರು ಎಂದು ಕರೆಯದೆ ವಿಕಲಚೇತನರು ಎಂದು ಕರೆಯುವವರೊಂದಿಗೆ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕು, ವಿಕಲಚೇತನರು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದಾರೆ. ಆದ್ದರಿಂದ ಅವರಿಗೆ ಅನುಕಂಪದ ಬದಲು ಹೆಚ್ಚಿನ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.

       ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ದಯಾ ಪುತ್ತುರ್‍ಕರ್ ಮಾತನಾಡಿ, ವಿಕಲಚೇತನರು ದುರ್ಬಲರಲ್ಲ, ಅವರು ಸಹ ಧೈರ್ಯ ಮತ್ತು ಆತ್ಮ ವಿಶ್ವಾಸದೊಂದಿಗೆ ಅನೇಕ ಸಾಧನೆಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.ಡಾ|| ಪಿ. ಯಶೋಧ ರಾಜಶೇಖರಪ್ಪ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ|| ಹೆಚ್.ಎಸ್. ವಿನಯ್‍ಕುಮಾರ್ ಸಾಹುಕಾರ್, ಹಾಸ್ಯ ಸಾಹಿತಿ ಜಗನ್ನಾಥ್ ಮತ್ತು ದಿವ್ಯಾಂಗರ ಸಾಹಿತ್ಯ ಸಾಂಸ್ಕøತಿಕ ಸಂಸ್ಥೆ ಅಧ್ಯಕ್ಷರಾದ ಕೆ.ಹೆಚ್. ಜಯಪ್ರಕಾಶ್ ಉಪಸ್ಥಿತರಿದ್ದರು.

       ಇದೇ ಸಂದರ್ಭದಲ್ಲಿ ಡಾ|| ಜಿ. ಶಂಪಾ ಸಾಹಿತ್ಯ ವೇದಿಕೆ ಕೊಡ ಮಾಡುವ ಕಾವ್ಯಶ್ರೀ ಪ್ರಶಸ್ತಿ ಪುರಸ್ಕøತರಾದ ಬೆಳಗಟ್ಟ ಬಸವರಾಜ ಮತ್ತು ಜಿ.ಕೆ. ಗೀತಾರವರನ್ನು ಸನ್ಮಾನಿಸಲಾಯಿತು. ಕವಿಗಳಾದ ಹೆಚ್. ಆನಂದಕುಮಾರ್, ವಿನಾಯಕ, ಮಮತಾ, ಎನ್. ಭಾಗ್ಯ ಮುನಾವರ, ಮಂಜುಳಾಸ್ವಾಮಿ, ದಿವ್ಯಶಂಕರ್, ರೀನಾ ವೀರಭದ್ರಪ್ಪ, ಚಾಂದಿನಿ ಖಾಲೀದ್ ಮುಂತಾದವರು 50ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ಗಂಜಿಗಟ್ಟೆ ಕೃಷ್ಣಮೂರ್ತಿ ಪ್ರಾರ್ಥಿಸಿದರು, ಅಮಕುಂದಿ ಕೆ. ಗಂಗಾಧರ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link