ಹರಪನಹಳ್ಳಿ
ಅಗಲಿದ ಚಲನಚಿತ್ರ ನಟ ರಾಜಕಾರಣಿ ಅಂಬರೀಷ್ ಹಾಗೂ ಮಾಜಿ ಸಚಿವ ಜಾಫರಶರೀಫ್ ಅವರಿಗೆ ಪಟ್ಟಣದಲ್ಲಿ ಗಣ್ಯರು ಭಾನುವಾರ ಶ್ರದ್ದಾಂಜಲಿ ಸಲ್ಲಿಸಿದರು.
ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ದಿವಂಗತ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ನುಡಿನಮನ ಕಾರ್ಯಕ್ರಮ ಅಯೋಜಿಸಲು ನಡೆದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಂಬರೀಷ್ ಹಾಗೂ ಜಾಫರಶರೀಫ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಎಂ.ಪಿ.ಪ್ರಕಾಶ ಅವರ ಪುತ್ರಿ ಎಂ.ಪಿ.ಲತಾ ಮಾತನಾಡಿ, ಅಂಬರೀಷ್ ಹಾಗೂ ರವೀಂದ್ರ ಅವರು ಉತ್ತಮ ಗೆಳೆಯರಾಗಿದ್ದರು. ಎರಡು ಕುಟುಂಬಗಳ ಮಧ್ಯೆ ಒಡನಾಟವಿತ್ತು. ಅಂಬರೀಷ್ ಅವರ ಅಗಲಿಕೆಯಿಂದ ನಮ್ಮ ಕುಟುಂಬಕ್ಕೆ ಮತ್ತೊಂದು ದೊಡ್ಡ ಅಗಾಥವಾಗಿದೆ. ಅಂಬರೀಷ್ ವಸತಿ ಸಚಿವರಾಗಿದ್ದಾಗ ಹರಪನಹಳ್ಳಿ ಕ್ಷೇತ್ರಕ್ಕೆ 1850 ಆಶ್ರಯ ಮನೆಗಳನ್ನು ನೀಡಿದ್ದರು. ಸದಾ ಹಾಸ್ಯ ಚಟಾಕಿಯಿಂದ ಜನಮನ ಗೆಲ್ಲುತ್ತಿದ್ದರು. ಚಲನ ಚಿತ್ರರಂಗದಲ್ಲೂ ಅನ್ಯೋನತೆ ಸಮಾನತೆಯನ್ನು ಕಾಪಾಡುವುದರಲ್ಲಿ ಅಂಬರೀಷ್ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅವರ ಅಗಲಿಕೆಯಿಂದ ಕನ್ನಡ ನಾಡು ಬಡವಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಬೇಲೂರು ಅಂಜಪ್ಪ, ಟಿ.ಹೆಚ್.ಎಂ.ವಿರೂಪಾಕ್ಷಯ್ಯ, ಎಂ.ರಾಜಶೇಖರ, ವೆಂಕಟೇಶ ವಕೀಲರು, ಎಂ.ವಿ.ಅಂಜೀನಪ್ಪ, ಕೆ.ಎಂ.ಬಸವರಾಜಯ್ಯ, ಹಲಗೇರಿ ಮಂಜಣ್ಣ, ಡಿ.ರೆಹಮಾನಸಾಬ್, ಮುತ್ತಗಿ ಜಂಬಣ್ಣ, ಚಂದ್ರಗೌಡ, ಅಗ್ರಹಾರ ಆಶೋಕ, ಪುಷ್ಪ ದಿವಾಕರ, ಕುಲ್ಮಿ ಅಬ್ದಲ್, ಚಿಗಟೇರಿ ಹಾಲಮ್ಮ, ನೇತ್ರಾವತಿ, ನಾಗೇಂದ್ರಪ್ಪ, ಜಾಕೀರ್, ನೀಲಗುಂದ ವಾಗೀಶ್, ಸಮೀಯುಲ್, ಜೀಷಾನ್, ಎಲ್.ಮಂಜ್ಯನಾಯ್ಕ್, ಎಸ್.ಕೆ.ಸಾಲಂ, ಚಿಕ್ಕೇರಿ ಬಸಪ್ಪ, ಶಾಂತಮ್ಮ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
